ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಿವಮೊಗ್ಗ ನಗರದ ಸಂಗೊಳ್ಳಿ ರಾಯಣ್ಣ ರಸ್ತೆ (ಜೈಲ್ ರಸ್ತೆ)ಯ ಶ್ರೀ ಸಂಗೊಳ್ಳಿ ರಾಯಣ್ಣ ಕನ್ನಡ ಯುವಕರ ಸಂಘದಿಂದ ಕನ್ನಡ ಧ್ವಜಾರೋಹಣ ನೆರವೇರಿಸಿ – ಸಾರ್ವಜನಿಕರಿಗೆ ಉಪಹಾರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ರವರು ಕನ್ನಡ ನಾಡು ನುಡಿಗಾಗಿ ರಕ್ಷಣೆಗಾಗಿ ಹೋರಾಡಿದವರು ಸ್ಮರಿಸುತ್ತಾ ಮುಂದಿನ ದಿನಗಳಲ್ಲಿ ನಾಡು ನುಡಿ ಜಲ ಭಾಷೆ ರಕ್ಷಣೆಗೆ ಎಲ್ಲ ಯುವಕರು ಪಣತೊಟ್ಟು ನಿಲ್ಲಬೇಕು.ಈ ಸಂದರ್ಭದಲ್ಲಿ ನೆಚ್ಚಿನ ಡಾ. ಪುನೀತ್ ರಾಜಕುಮಾರ್ ರವರಿಗೆ ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿರುವುದು ಎಲ್ಲ ಕನ್ನಡಿಗರಲ್ಲೂ ಅತ್ಯಂತ ಸಂತೋಷವಾಗಿದೆ.
ಅದರ ಜೊತೆಗೆ ಮುಂದಿನ ದಿನಗಳಲ್ಲಿ ಭಾರತ ಸರ್ಕಾರ ಅಪ್ಪು ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಈ ಮೂಲಕ ಕೇಂದ್ರ ಸರ್ಕಾರಕ್ಕೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿಸಂಗೊಳ್ಳಿ ರಾಯಣ್ಣ ಯುವಕರ ಸಂಘದ ಅಧ್ಯಕ್ಷ ಚಂದ್ರು ಗೆಡ್ಡೆ , ಯುವ ಮುಖಂಡರಾದ ಕೆ ರಂಗನಾಥ್ , ಹೆಚ್.ಪಿ. ಗಿರೀಶ್ ಸಂಘದ ಪದಾಧಿಕಾರಿಗಳಾದ ನಾಗರಾಜ್ ಗೆಡ್ಡೆ, ಅಶೋಕ್, ಪ್ರಕಾಶ್ , ಪಾರ್ಥ ಸಾರಥಿ, ಪವನ್,ಮನೋಜ್ ,ಚೇತನ್, ಪ್ರಜ್ವಲ್ , ಹಲವಾರು ಯುವಕರು ಇದ್ದರು.