67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಶಿವಮೊಗ್ಗ ನಗರದ ಶ್ರೀರಾಮನಗರ ಬಡಾವಣೆ ನಿವಾಸಿಗಳ ಸಂಘದ ವತಿಯಿಂದ ವಿನೋಬನಗರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಗರದ ಮಾಜಿ ಶಾಸಕರಾದ ಶ್ರೀ ಕೆ ಬಿ ಪ್ರಸನ್ನ ಕುಮಾರ್ ರವರು ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ದೀಪಕ್ ಸಿಂಗ್ ರವರು, ಪಾಲಾಕ್ಷಿ, ನಿವಾಸಿಗಳ ಸಂಘದ ಪ್ರಮುಖರಾದ ಶಂಕರ್, ಹರೀಶ್, ಮಂಜು, ಲಕ್ಷ್ಮಣ್, ಈಶ್ವರ್, ಪ್ರಕಾಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…