ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ಶಿವಮೊಗ್ಗ ಸೇವಾಭಾರತಿ ವತಿಯಿಂದ ಶಿವಮೊಗ್ಗದ ಮೆಟ್ರೊ ಯುನೈಟೆಡ್ ಹೆಲ್ತ್ ಕೇರ್ , ಚೇಂಬರ್ ಆಫ್ ಕಾಮರ್ಸ್ , ವಿಶ್ವ ಹಿಂದೂ ಪರಿಷತ್ ಹಾಗೂ ಶ್ರೀ ಶನೇಶ್ವರ ದೇವಸ್ಥಾನ ಸಮಿತಿ ಟ್ರಸ್ಟ್ ಸಹಭಾಗಿತ್ವದಲ್ಲಿ ಗುರುವಾರದಿಂದ ಕೋವಿಡ ಆರೈಕೆ ಕೇಂದ್ರ ಶುರುವಾಗಲಿದೆ ಎಂದು ತಿಳಿಸಿದರು . ಮೆಟ್ರೊ ಆಸ್ಪತ್ರೆಯ ಡಾಕ್ಟರ್ ಪೃಥ್ವಿ ಅವರು ಮಾತನಾಡಿ ಮೆಟ್ರೊ ಆಸ್ಪತ್ರೆಯ ನುರಿತ ಐವತ್ತೈದು ಸ್ಟಾಫ್ ಗಳನ್ನು ಕೇಂದ್ರಕ್ಕೆ ನಿಯೋಜಿಸಲಾಗಿದೆ . ಈ ಕಾರ್ಯಕ್ರಮವು ಮೆಟ್ರೋ ಹಾಸ್ಪಿಟಲ್ ಬ್ಯಾನರಡಿಯಲ್ಲಿ ನಡೆಯಲಿದ್ದು 2ಪ್ರಕಾರದ ಕೋವಿಡ ರೋಗಿಗಳಿಗೆ ಆರೈಕೆ ನೀಡಲಾಗುತ್ತದೆ . ಮೊದಲನೆಯದಾಗಿ assymptamatic 55 ಬೆಡ್ ಗಳು ಲಭ್ಯವಿದ್ದು . ನೆಲಮಾಳಿಗೆಯಲ್ಲಿ 45 ಆಕ್ಸಿಜನ್ ಕಾನ್ಸನ್ ಟ್ರೇಟರ್ ಬೆಡ್ ಇದೆ . ಇಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ರೋಗಿಗಳಿಗೆ ಉಸಿರಾಟದ ತೊಂದರೆ ಕಂಡುಬಂದಲ್ಲಿ ಮತ್ತೆ ಅಡ್ಮಿಟ್ ಆಗಲು ತೊಂದರೆಯಿದೆ ಅಂಥವರಿಗೆ ಇಲ್ಲಿ ಆರೈಕೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರಪ್ಪನವರು ಇದು ಸೇವಾಭಾರತಿ ಕಡೆಯಿಂದ ಸಂಪೂರ್ಣ ಉಚಿತ ಆರೈಕೆ ಕೇಂದ್ರವಾಗಿದ್ದು ಬರುವ ರೋಗಿಗಳು ಬಟ್ಟೆಯನ್ನು ಮಾತ್ರ ತರಬೇಕು . ಸೋಪು ಬ್ರಷ್ಷು ಬೆಡ್ ಶೀಟ್ ಎಲ್ಲವನ್ನು ಇಲ್ಲಿ ನೀಡಲಾಗುತ್ತದೆ. ಅಲ್ಲದೆ ಇಲ್ಲಿ ಒಬ್ಬ ರೋಗಿಗೆ ಕೊಟ್ಟ ಬೆಡ್ ಶೀಟನ್ನು ಮತ್ತೆ ಉಪಯೋಗಿಸುವುದಿಲ್ಲ . ಪ್ರತಿ ರೋಗಿಗೂ ಹೊಸ ಬೆಡ್ ಶೀಟನ್ನು ನೀಡುತ್ತವೆ ಎಂದು ಹೇಳಿದರು. ಸೇವಾಭಾರತಿ ಯ ಮುಖ್ಯಸ್ಥರಾದ ಡಾಕ್ಟರ್ ರವಿಕಿರಣ್ ಅವರು ಮಾತನಾಡಿ ಆರೈಕೆ ಕೇಂದ್ರದಲ್ಲಿ ಎಕ್ಸ್ ಪರ್ಟ್ ಡಾಕ್ಟರುಗಳನ್ನೇ ನಿಯೋಜಿಸಲಾಗಿದೆ. ಇಲ್ಲಿ ಬರುವ ರೋಗಿಗಳನ್ನು ಆಸ್ಪತ್ರೆಯ ಸಲಹೆ ಮೇರೆಗೆ ಮಾತ್ರ ನೋಂದಣಿ ಮಾಡಲಾಗುವುದು ಎಂದು ತಿಳಿಸಿದರು . ಈಶ್ವರಪ್ಪನವರು ಮಾತನಾಡಿ ಈ ಕೇರ್ ಸೆಂಟರ್ ನ ಧ್ಯೇಯೋದ್ದೇಶ ರೋಗಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದು . ಹಾಗಾಗಿ ಆರೈಕೆ ಕೇಂದ್ರದಲ್ಲಿ ದಿನವೂ ಯೋಗ ಹಾಗೂ ಭಜನೆ ಕಾರ್ಯಕ್ರಮಗಳು ನಡೆಯುತ್ತವೆ. ಹಾಗೂ ಇಲ್ಲಿ ದಿನಪತ್ರಿಕೆಗಳ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಒಟ್ಟಿನಲ್ಲಿ ಇಲ್ಲಿಂದ ರೋಗಿಗಳು ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಮುಕ್ತರಾಗಿ ಹೊರ ಹೋಗಲಿ ಎಂಬುದೇ ಆಶಯ ಎಂದು ತಿಳಿಸಿದರು
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ