ಶಿವಮೊಗ್ಗ: ಫೋಟೋಗ್ರಾಫಿ ವೃತ್ತಿಯಲ್ಲಿ ಕಾಲ ಕಾಲಕ್ಕೆ ಬದಲಾಗುವ ಹೊಸ ತಂತ್ರಜ್ಞಾನದ ಅಳವಡಿಕೆ ಅತ್ಯಂತ ಅವಶ್ಯಕ ಎಂದು ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್ ಹೇಳಿದರು.

ಶಿವಮೊಗ್ಗ ನಗರದ ಎನ್‌ಆರ್‌ಬಿ ಸ್ಟುಡಿಯೋದಲ್ಲಿ ವೆಬ್‌ಸೈಟ್ ಲೋಕಾರ್ಪಣೆಗೊಳಿಸಿ ಮಾತನಾಡಿ, 25 ವರ್ಷಗಳಿಂದ ಎನ್‌ಆರ್‌ಬಿ ಸ್ಟುಡಿಯೋ ಶಿವಮೊಗ್ಗ ನಗರದ ಜನತೆಗೆ ಸೇವೆ ನೀಡುತ್ತಿದ್ದು, ಹೊಸ ವಿನ್ಯಾಸದ ಆಧುನಿಕ ತಂತ್ರಜ್ಞಾನದ ಕ್ಯಾನನ್ ಫೈನ್ ಆರ್ಟ್ ಪ್ರಿಂಟಿಂಗ್ ಅಳವಡಿಸಲಾಗಿದೆ. ಅತ್ಯಾಧುನಿಕ ಸೇವೆಗಳನ್ನು ಶಿವಮೊಗ್ಗ ಜನರಿಗೆ ಒದಗಿಸುವಂತಾಗಲಿ ಎಂದು ಆಶಿಸಿದರು.

ಶಿವಮೊಗ್ಗ ಟೈಮ್ ಟೈಮ್ಸ್ ಸಂಪಾದಕರು ಪತ್ರಕರ್ತ ಚಂದ್ರಕಾಂತ್ ಮಾತನಾಡಿ, ಹಿಂದಿನ ಕಾಲದಲ್ಲಿ ಫೋಟೋ ತೆಗೆಸಿಕೊಂಡು ಮೂರ‍್ನಾಲ್ಕು ದಿನದ ನಂತರ ಫೋಟೋಗಳು ಸಿಗುತ್ತಿದ್ದವು. ಆದರೆ ಇಂದಿನ ಕಾಲದಲ್ಲಿ ಆಧುನಿಕ ತಂತ್ರಜ್ಞಾನದ ನೆರವಿನಿಂದ ಕೆಲವೇ ನಿಮಿಷಗಳಲ್ಲಿ ಫೋಟೊ ಲಭ್ಯವಾಗುತ್ತವೆ. ಬೆಂಗಳೂರಿನಲ್ಲಿ ಮಾತ್ರ ಸಿಗುತ್ತಿದ್ದ ಸೇವೆಗಳನ್ನು ಶಿವಮೊಗ್ಗದಲ್ಲಿಯೂ ಎನ್‌ಆರ್‌ಬಿ ಸ್ಟುಡಿಯೋ ಆರಂಭಿಸಿರುವುದು ಅಭಿನಂದನೀಯ ಎಂದರು.
ರೋಟರಿಯ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್ ಕುಮಾರ್, ಹೊಸ ತಂತ್ರಜ್ಞಾನದ ಅಳವಡಿಕೆ ಜತೆಯಲ್ಲಿ ಹೆಚ್ಚಿನ ಸೇವೆಗಳನ್ನು ಎನ್‌ಆರ್‌ಬಿ ಸ್ಟುಡಿಯೋ ಒದಗಿಸುತ್ತದೆ. ತಂತ್ರಜ್ಞಾನದಿಂದ ಪರಿಣಾಮಕಾರಿ ಹಾಗೂ ಉತ್ತಮ ಗುಣಮಟ್ಟದ ಫೋಟೋ ತೆಗೆಯಲು ಸಾಧ್ಯವಿದೆ ಎಂದು ಹೇಳಿದರು.

ಭಾರತದ ಎಲ್ಲೆಡೆಯು ಮನೆ ಮನೆಯಿಂದ ಎನ್‌ಆರ್‌ಬಿ ಆನ್‌ಲೈನ್ ಸ್ಟುಡಿಯೋ ಹೊಸ ತಾಂತ್ರಿಕತೆ ಲಭ್ಯ ಇರುವುದು ಖುಷಿಯ ಸಂಗತಿಯಾಗಿದೆ. ಹೊಸ ಟೆಕ್ನಾಲಜಿಯ ಫೊಟೋಸ್, ಫ್ರೇಮ್, ಎಲ್‌ಇಡಿ ಲೈಟ್ ಫ್ರೇಮ್, ಅಲೂಮಿನಿಯಂ ಫ್ರೇಮ್, ಮಗ್ ಪ್ರಿಂಟಿಂಗ್ ಸೇವೆಗಳು ಲಭ್ಯವಿದೆ ಎಂದು ತಿಳಿಸಿದರು.
ಓಂ ಗಣೇಶ್ ಶೇಟ್, ಮಾಲೀಕ ಸತೀಶ್ ಚಂದ್ರ, ನೇತ್ರಾವತಿ, ಅಮೋಘ, ಅಪೂರ್ವ, ಚೇತನ್, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…