ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಸುಣ್ಣದಹಳ್ಳಿ ಗ್ರಾಮದ ವಾಸಿಯಾದ ಶಂಕ್ರಮ್ಮ, 70 ವರ್ಷ ರವರು ಅದೇ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಂದ ಬೇಡಿ ಹಣ ಪಡೆದು, ಜೀವನ ಸಾಗಿಸುತ್ತಿದ್ದು, ರಾತ್ರಿ ವೇಳೆಯಲ್ಲಿ ದೇವಸ್ಥಾನದ ಎದುರು ಇರುವ ಅಂತರಘಟ್ಟಮ್ಮ ದೇವರ ಗುಡಿಯ ಕಾಂಪೌಂಡ್ ನ ಒಳಭಾಗ ಮಲಗುತ್ತಿದ್ದರು.
ದಿ 3ರಂದು ರಂದು ದೇವಸ್ಥಾನದ ಅರ್ಚಕರು ಕರೆ ಮಾಡಿ ಶಂಕ್ರಮ್ಮರವರು ಮೃತ ಪಟ್ಟಿರುತ್ತಾರೆಂದು ತಿಳಿಸಿದ್ದು, ಅಪರಿಚಿತರು ಶಂಕ್ರಮ್ಮರವರನ್ನು ಕೊಲೆ ಮಾಡಿ ಅವರ ಎರಡೂ ಕಿವಿಯಲ್ಲಿದ್ದ ಚಿನ್ನದ ಓಲೆಗಳು ಮತ್ತು ಮೂಗು ಬಟ್ಟನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ನಂತರ ಮೊಮ್ಮಗಳು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 151/2022 ಕಲಂ 302 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತದೆ.
ಸದರಿ ಪ್ರಕರಣದ ಆರೋಪಿತರ ಪತ್ತೆಗಾಗಿ ಶ್ರೀ ಜಿತೇಂದ್ರಕುಮಾರ ದಯಾಮ, ಐಪಿಎಸ್ ರವರ ಮೇಲ್ವಿಚಾರಣೆಯಲ್ಲಿ ಪೇಪರ್ ಟೌನ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಮಂಜುನಾಥ ರವರ ನೇತೃತ್ವದಲ್ಲಿ, ಪಿಎಸ್ಐ ಕುಮಾರಿ ಶಿಲ್ಪಾ ನಾಯನೇಗಲಿ ಮತ್ತು ಸಿಬ್ಬಂದಿಗಳಾದ ಶ್ರೀ ರತ್ನಾಕರ, ಶ್ರೀ ವಾಸುದೇವ, ಶ್ರೀ ಚಿನ್ನ ನಾಯ್ಕ, ಶ್ರೀ ಹನಮಂತ ಅವಟಿ, ಶ್ರೀ ಆದರ್ಶ ಶೆಟ್ಟಿ, ಶ್ರೀ ಮೌನೇಶ ಶೀಖಲ್ ಶ್ರೀ ಅರುಣ್ ಆರ್, ಶ್ರೀ ವಿಕ್ರಮ್ ರವರನ್ನೊಳಗೊಂಡ ತಂಡವನ್ನು ರಚಿಸಲಾಗಿರುತ್ತದೆ.
ಸದರಿ ತನಿಖಾ ತಂಡವು ದಿ 17ರಂದು ಪ್ರಕರಣದ ಆರೋಪಿತನಾದ ಕರುಣಾಕರ ದೇವಾಡಿಗ 24 ವರ್ಷ ಗಾರೆ ಕೆಲಸ ದುಗ್ಗದ ಮನೆ ಕಂಬದಕೋಣೆ ಕುಂದಾಪುರ ಬೈಂದೂರು ತಾಲೂಕ್ ಉಡುಪಿ ಜಿಲ್ಲೆ ಈತನನ್ನು ದಸ್ತಗಿರಿ ಮಾಡಿ ಮೃತೆ ಶಂಕ್ರಮ್ಮರವರ ಕಿತ್ತುಕೊಂಡಿದ್ದ ಅಂದಾಜು ಮೌಲ್ಯ 14,000/- ರೂಗಳ ಒಂದು ಜೊತೆ ಬಂಗಾರದ ಕಿವಿ ಓಲೆ ಮತ್ತು ಮೂಗುತಿಯನ್ನು ಪಡಿಸಿಕೊಳ್ಳಲಾಗಿರುತ್ತದೆ. ಸದರಿ ತನಿಖಾ ತಂಡದ ಉತ್ತಮ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಶ್ಲಾಘಿಸಿ ಪ್ರಶಂಸಿಸಿರುತ್ತ
ಾರೆ.