ಶಿವಮೊಗ್ಗ: ಗ್ರಾಹಕರು ಹಣಕಾಸು ಸಂಸ್ಥೆಗಳಲ್ಲಿ ಹಣ ವಿನಿಯೋಗ ಮಾಡುವಾಗ ಸಂಸ್ಥೆಯು ಸರ್ಕಾರಿ ನಿಯಮಾನುಸಾರ ನಡೆಯುತ್ತಿರುವ ಬಗ್ಗೆ ಮೊದಲು ಮಾಹಿತಿ ಪಡೆದುಕೊಳ್ಳಬೇಕು ಎಂದು ರೋಟರಿ ಮಾಜಿ ಗವರ್ನರ್ ಎಂ.ಜಿ.ರಾಮಚಂದ್ರಮೂರ್ತಿ ಹೇಳಿದರು.

ಶಿವಮೊಗ್ಗ ನಗರದ ಪ್ರತಿಷ್ಠಿತ ಚಿಟ್ಸ್ ಸಂಸ್ಥೆಗಳಲ್ಲಿ ಒಂದಾದ ಸಹ್ಯಾದ್ರಿ ಚಿಟ್ಸ್ ಸಂಸ್ಥೆ ವತಿಯಿಂದ ಹೊಸದಾಗಿ 1 ಕೋಟಿ ರೂ. ಮೊತ್ತದ ಚಿಟ್ ಗ್ರೂಪ್ ಆರಂಭ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಹಕರ ಹಿತರಕ್ಷಣೆ ಮಾಡಲು ಸಂಸ್ಥೆ ಸಮರ್ಥ ಇದೆಯೇ, ನೋಂದಣಿ ಆಗಿದಿಯೇ, ನಿಯಮ ಬದ್ಧವಾಗಿ ಎಲ್ಲ ಕ್ರಮಗಳನ್ನು ಪಾಲಿಸುತ್ತಿರುವ ಬಗ್ಗೆ ಹಾಗೂ ಸಕಾಲದಲ್ಲಿ ಗ್ರಾಹಕರಿಗೆ ಸ್ಪಂದನೆ ಮಾಡುವ ಬಗ್ಗೆ ಗಮನ ವಹಿಸಬೇಕು ಎಂದು ತಿಳಿಸಿದರು.

ಸಹ್ಯಾದ್ರಿ ಚಿಟ್ಸ್ ಸಂಸ್ಥೆ ಎಲ್ಲ ನಿಯಮಗಳನ್ನು ಪಾಲಿಸಿಕೊಂಡು ಬರುತ್ತಿದೆ. ಸಕಾಲದಲ್ಲಿ ಹಣದ ವ್ಯವಸ್ಥೆ ಮಾಡುತ್ತದೆ. ಗ್ರಾಹಕರಾಗಿ ಸಹ್ಯಾದ್ರಿ ಸಂಸ್ಥೆಯು ಒಳ್ಳೆಯ ಸೇವೆ ನೀಡುತ್ತಿರುವುದನ್ನು ಅಭಿನಂದಿಸುತ್ತೇನೆ. ಒಂದು ಕೋಟಿ ರೂ. ಮೊತ್ತದ ಗ್ರೂಪ್‌ಅನ್ನು ಯಶಸ್ವಿಯಾಗಿ ನಿಭಾಯಿಸಲಿ, ಹೆಚ್ಚು ಹೆಚ್ಚು ಗ್ರಾಹಕರಿಗೆ ಸೇವೆ ಒದಗಿಸುವಂತಾಗಲಿ ಎಂದು ಆಶಿಸಿದರು.
ಶ್ರೀನಿಧಿ ಸಂಸ್ಥೆಯ ಟಿ.ಆರ್.ಅಶ್ವತ್ಥ್ ನಾರಾಯಣಶೆಟ್ಟಿ ಮಾತನಾಡಿ, ಸಹ್ಯಾದ್ರಿ ಚಿಟ್ಸ್ ಸಂಸ್ಥೆಯು ಗ್ರಾಹಕರಿಗೆ ಮೌಲ್ಯಾಧಾರಿತ ಸೇವೆ ನೀಡುತ್ತಿದ್ದು, ಉತ್ತಮವಾಗಿ ಮುನ್ನಡೆಯುತ್ತಿದೆ. ಗ್ರಾಹಕರ ಹಿತರಕ್ಷಣೆಯನ್ನು ಆದ್ಯತೆಯಾಗಿ ಪರಿಗಣಿಸಿ ಸೇವೆ ಸಲ್ಲಿಸುತ್ತಿದೆ ಎಂದು ತಿಳಿಸಿದರು.

ಸಂಸ್ಥೆಯ ಸ್ಥಾಪಕ ಡಿ.ಆರ್.ನಟರಾಜ ಮಾತನಾಡಿ, ಚಿಟ್ ಫಂಡ್ ಸಂಸ್ಥೆ ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರಿ ಆಗಿದೆ ಎಂದರು. ಸಹ್ಯಾದ್ರಿ ಚಿಟ್ಸ್ ಅಧ್ಯಕ್ಷ ಬದರೀನಾಥ್, ಕಾರ್ಯನಿರ್ದೇಶಕ ರಮೇಶ್ ಭಟ್, ಮಾರುಕಟ್ಟೆ ನಿರ್ದೇಶಕ ಶಿವರಾಜ ಉಡುಗಣಿ, ನಿರ್ದೇಶಕ ರವೀಂದ್ರನಾಥ ಐತಾಳ್, ರವಿ, ಜಿ.ವಿಜಯ್‌ಕುಮಾರ್, ಸುನೀಲ್, ಅನೂಪ್ ಮತ್ತಿತರರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…