ಶಿವಮೊಗ್ಗ ನಗರದ ಬಿ.ಹೆಚ್.ರಸ್ತೆಯ ಕರ್ನಾಟಕ ಸಂಘ ಪಕ್ಕದ, ಮೈನ್ ಮಿಡ್ಲ್ ಸ್ಕೂಲ್,(ಸರ್ಕಾರಿ ಪ್ರಧಾನ ಹಿರಿಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ) ಯಲ್ಲಿ, ಸರ್ಜಿ ಫೌಡೇಶನ್ ಡಾ.ಧನಂಜಯ ಸರ್ಜಿ ರವರ ನೇತೃತ್ವದಲ್ಲಿ, ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಮಂಗಳವಾರದಂದು ಮಕ್ಕಳಿಗೆ ಉಚಿತ ತಪಾಸಣೆ ಮಾಡಲಾಯಿತು.
ಡಾ. ಸುಭಾಸ್ ರವರು ಮಕ್ಕಳಿಗೆ ತಪಾಸಣೆ ಮಾಡಿ, ಟೈಪೆಡ್ ಲಸಿಕೆ ನೀಡಿದರು, ಸಿಬ್ಬಂದಿ ವರ್ಗದವರು ಮಕ್ಕಳಿಗೆ ಔಷಧಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮೈನ್ ಮಿಡ್ಲ್ ಸ್ಕೂಲ್ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಚನ್ನವೀರಪ್ಪ ಗಾಮನಗಟ್ಟಿ, ಸಮೂಹ ಸಂಪನ್ಮೂಲ ವ್ಯಕ್ತಿ ಯತೀಶ್, ಸಹ ಶಿಕ್ಷಕರು, ಕವಿತಾ, ಶಶಿಸ್ವರ್ಣ, ಜ್ಯೋತಿ ಹಾಗೂ ಮಕ್ಕಳು ಉಪಸ್ಥಿತರಿದ್ದರು.