ಶಿವಮೊಗ್ಗ: ರೋಟರಿ ಸಂಸ್ಥೆಯಿAದ ವಿಶ್ವದಾದ್ಯಂತ ಸಾವಿರಾರು ಕೋಟಿ ರೂ.ಗಳ ಸಮುದಾಯ ಸೇವೆ ಯೋಜನೆಗಳು ಅನುಷ್ಠಾನದಲ್ಲಿ ನಡೆಯುತ್ತಿವೆ ಎಂದು ಅಂತರಾಷ್ಟಿçÃಯ ರೋಟರಿ ನಿರ್ದೇಶಕ ಮಹೇಶ್ ಕೊಟ್ಬಾಗಿ ಹೇಳಿದರು.
ನಗರದ ಕಂಟ್ರಿ ಕ್ಲಬ್‌ನಲ್ಲಿ ಆಯೋಜಿಸಿದ್ದ ರೋಟರಿ ಜಿಲ್ಲೆ 3182ರ ನೂತನ ಜಿಲ್ಲಾ ಗವರ್ನರ್ ಆಗಿ ಎಂ.ಜಿ.ರಾಮಚAದ್ರಮೂರ್ತಿ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೇವಾ ಸಂಸ್ಥೆಗಳಲ್ಲಿಯೇ ಅತ್ಯಂತ ಮುಂಚೂಣಿಯಲ್ಲಿರುವ ರೋಟರಿ ಸಂಸ್ಥೆ ಮುಖಾಂತರ ಲಕ್ಷಾಂತರ ಜನರಿಗೆ ನೆರವು ಒದಗಿಸುವ ಕಾರ್ಯ ನಡೆಯುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ರೋಟರಿ ಸಂಸ್ಥೆ ತನ್ನದೇ ಆದ ರೀತಿಯಲ್ಲಿ ಸೇವೆ ಮಾಡುತ್ತಾ ಛಾಪು ಮೂಡಿಸಿದೆ ಎಂದು ತಿಳಿಸಿದರು.
ಸ್ನೇಹ ಹಾಗೂ ಸೇವೆ ಉದ್ದೇಶದಿಂದ ಆರಂಭವಾದ ಸಂಸ್ಥೆಯು ಪ್ರಪಂಚದ ಮೂಲೆ ಮೂಲೆಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಸ್ವಾರ್ಥಕ್ಕಿಂತ ಸೇವೆಯೇ ಮಿಗಿಲು ಎಂಬ ನಾಣ್ಣುಡಿಯಂತೆ ಸೇವೆಯಿಂದ ಬದುಕು ಬದಲಿಸಬೇಕು ಎಂದರು.
ನೂತನ ಜಿಲ್ಲಾ ಗವರ್ನರ್: ಎಂ.ಜಿ.ರಾಮಚAದ್ರಮೂರ್ತಿ ಅವರು ಶಿವಮೊಗ್ಗದಲ್ಲಿ ಚಾರ್ಟಡ್ ಅಕೌಂಟೆAಟ್ ಆಗಿದ್ದು, ಸಿಎ ಸಂಸ್ಥೆ ಅಧ್ಯಕ್ಷರಾಗಿ, ಜೆಸಿ ಸಂಸ್ಥೆಯ ಅಧ್ಯಕ್ಷರಾಗಿ ಹಾಗೂ ಉನ್ನತ ಹುದ್ದೆಗಳಲ್ಲಿ, ಬ್ರಾಹ್ಮಣರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದು, ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. 6ನೇ ಜಿಲ್ಲಾ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಎಂ.ಜಿ.ರಾಮಚAದ್ರಮೂರ್ತಿ ಮಾತನಾಡಿ, ಪಲ್ಸ್ ಪೊಲಿಯೋ ಅಭಿಯಾನ ನಂತರ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಸಹಾಯ ನೀಡಿ ಶಾಲೆ ಉನ್ನತೀಕರಣ, ವಿದ್ಯಾಭ್ಯಾಸ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಮುಂದಿನ ದಿನಗಳಲ್ಲಿ ಕೆರೆಗಳ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ, ಪರಿಸರ ಸಂರಕ್ಷಣೆ, ಇ-ತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಹಾಗೂ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಮಾಜಿ ಗವರ್ನರ್ ಡಾ. ಪಿ.ನಾರಾಯಣ, ಪ್ರೊ. ಎ.ಎಸ್.ಚಂದ್ರಶೇಖರ್, ಎಚ್.ಎಲ್.ರವಿ, ಜಿ.ಎನ್.ಪ್ರಕಾಶ್, ಅಭಿನಂದನ್‌ಶೆಟ್ಟಿ, ಬಿ.ಎನ್.ರಮೇಶ್, ಉದಯಪೇಟೆ ಮುರಳಿ, ಮದನ್‌ಲಾಲ್, ವೀರಣ್ಣ ಹುಗ್ಗಿ, ವಸಂತ್ ಹೋಬಳಿದಾರ್, ರವೀಂದ್ರನಾಥ್ ಐತಾಳ್, ರಾಜೇಂದ್ರ ಪ್ರಸಾದ್, ನಿಯೋಜಿತ ಜಿಲ್ಲಾ ಗವರ್ನರ್ ಡಾ. ಗೌರಿ, ಬಿ.ಸಿ.ಗೀತಾ, ಡಿ.ಎಸ್.ಅರುಣ್, ಅನಿಲ್, ಡಾ. ಧನಂಜಯ್, ಜಿ.ವಿಜಯ್‌ಕುಮಾರ್, ಸುರೇಖಾ, ರಾಮಚಂದ್ರ ಉಪಸ್ಥಿತರಿದ್ದರು.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153