ಶಿವಮೊಗ್ಗ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ, ಪೊಲೀಸ್ ಇಲಾಖಾ ವತಿಯಿಂದ Auto Display Card ಗಳ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಶಿವಮೊಗ್ಗ ನಗರದ ಆಟೋ ಚಾಲಕರಿಗೆ ಮತ್ತು ಮಾಲೀಕರಿಗೆ Auto Display Card ಗಳನ್ನು ವಿತರಣೆ ಮಾಡಿ ಕಾರ್ಯಕ್ರಮದಲ್ಲಿ ಹಾಜರಿದ್ದ ಆಟೋ ಚಾಲಕರು ಮತ್ತು ಮಾಲೀಕರನ್ನು ಉದ್ದೇಶಿಸಿ ಮಾತನಾಡಿ ಈ ಕೆಳಕಂಡ ಸೂಚನೆ ಮತ್ತು ಮಾಹಿತಿಗಳನ್ನು ನೀಡಿದರು.

1.ಪ್ರತೀ ಆಟೋಗಳಿಗೆ ಮೀಟರ್ ಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವುದು.

2.ದಿನಾಂಕಃ 28-02-2023ರ ಒಳಗಾಗಿ ಪ್ರತೀ ಆಟೋ ಚಾಲಕರು / ಮಾಲೀಕರು ತಮ್ಮ ತಮ್ಮ ಆಟೋಗಳಿಗೆ Auto Display Card ಗಳನ್ನು ಪಡೆದುಕೊಂಡು ಅಳವಡಿಸಿಕೊಳ್ಳುವುದು, ಇಲ್ಲದೇ ಹೋದಲ್ಲಿ ಅಂತಹ ಆಟೋ ಚಾಲಕರ / ಮಾಲೀಕರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.

3.Auto Display Card ಗಳಲ್ಲಿ ಆಟೋದ ನೊಂದಣಿ ಸಂಖ್ಯೆ, ಪೊಲೀಸ್ ಕ್ರಮ ಸಂಖ್ಯೆ, ಮಾಲೀಕರ / ಚಾಲಕರ ಹೆಸರು ವಿಳಾಸ, ಆಟೋ ಬಾಡಿಗೆ ದರ ಮತ್ತು ಕ್ಯೂ ಆರ್ ಕೋಡ್ ನಲ್ಲಿ ಸಂಪೂರ್ಣ ವಿವರಗಳು ಇರುವುದರಿಂದ, ಸಾರ್ವಜನಿಕರಿಗೆ ಪ್ರಯಾಣದ ಸಮಯದಲ್ಲಿ ಅನುಕೂಲವಾಗುತ್ತದೆ ಎಂದು ತಿಳಿಸಿರುತ್ತಾರೆ.

ನಂತರ ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಮಾನ್ಯ ಹೆಚ್ಚುವರಿ ಪೋಲಿಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ರವರು ಮಾತನಾಡಿ

1.Auto Display Card ಗಳನ್ನು ಅಳವಡಿಸಿ ಕೊಳ್ಳುವುದು ಆಟೋ ಚಾಲಕರು ಹಾಗೂ ಮಾಲೀಕರುಗಳ ಕರ್ತವ್ಯವಾಗಿರುತ್ತದೆ.

2.ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು, ಪ್ರತಿಯೊಬ್ಬ ಆಟೋ ಚಾಲಕರುಗಳು ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ಜಯಶ್ರೀ ಎಸ್ ಮಾನೆ ಪೊಲೀಸ್ ವೃತ್ತ ನಿರೀಕ್ಷಕರು, ಶಿವಮೊಗ್ಗ ಸಂಚಾರ ವೃತ್ತ, ಶ್ರೀಮತಿ ಶೈಲಜಾ, ಪಿಎಸ್ಐ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಮತ್ತು ಶಿವಮೊಗ್ಗ ನಗರದ ಸಂಚಾರ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…