ಶಿವಮೊಗ್ಗ ಜಿಲ್ಲೆಯ ನೂತನ ವಿಮಾನ ನಿಲ್ದಾಣದ ದಿ 27ರಂದು ಸೋಮವಾರ ಉದ್ಘಾಟನಾ ಸಮಾರಂಭಕ್ಕೆ ಮಾನ್ಯ ಪ್ರಧಾನ ಮಂತ್ರಿಗಳು ಭಾರತ ಸರ್ಕಾರ ರವರು ಆಗಮಿಸುತ್ತಿದ್ದು, ಈ ಕಾರ್ಯಕ್ರದಲ್ಲಿ ಭಾಗವಹಿಸುವ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಮತ್ತು ಪರ್ಸ್ ಗಳನ್ನು ತರಲು ಮಾತ್ರ ಅವಕಾಶವಿರುತ್ತದೆ.
ಇವುಗಳನ್ನು ಹೊರತು ಪಡಿಸಿ ನೀರಿನ ಬಾಟಲಿ, ಬ್ಯಾಗ್, ಪೇಪರ್(ಚೀಟಿ), ಪೆನ್, ಕಪ್ಪು ಬಣ್ಣದ ಬಟ್ಟೆ/ಶರ್ಟ್/ಕರವಸ್ತ್ರ ಗಳನ್ನು ಹಾಗೂ ಇತರೆ ವಸ್ತುಗಳನ್ನು ತರುವಂತಿಲ್ಲ ಮತ್ತು ಕಾರ್ಯಕ್ರಮದ ದಿನದಂದು ಸುಗಮ ಸಂಚಾರ ಹಾಗೂ ಸಂಚಾರ ನಿಯಂತ್ರಣದ ಹಿನ್ನೆಲೆಯಲ್ಲಿ ಬದಲೀ ಮಾರ್ಗದ ವ್ಯವಸ್ಥೆ ಮಾಡಲಿದ್ದು, ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ಮತ್ತು ವಾಹನಗಳನ್ನು ಹೊರತು ಪಡಿಸಿ, ಕೆಎಸ್ಆರ್.ಟಿಸಿ /ಖಾಸಗಿ ಬಸ್ ಗಳು ಮತ್ತು ಇತರೆ ಯಾವುದೇ ವಾಹಾನಗಳಲ್ಲಿ ಪ್ರಯಾಣ ಬೆಳಸುವ ಇತರೆ ಪ್ರಯಾಣಿಕರುಗಳು ಕಾರ್ಯಕ್ರಮ ಸ್ಥಳವಾದ ಶಿವಮೊಗ್ಗ ವಿಮಾನ ನಿಲ್ದಾಣ ರಸ್ತೆಯನ್ನು ಹೊರತು ಪಡಿಸಿ, ಬದಲಿ ಮಾರ್ಗದಲ್ಲಿಯೇ ಪ್ರಯಾಣಿಸುವುದು.