ಸಮಾನ ವೇತನಕ್ಕೆ ಒತ್ತಾಯಿಸಿ 6ರಂದು ಶಿವಮೊಗ್ಗ ಮಹಾನಗರ ಪಾಲಿಕೆಯ ನೀರು ಸರಬರಾಜು ವಿಭಾಗದ 115 ನೌಕರರ ಕೆಲಸ ಸ್ಥಗಿತ ಮಾಡಿ ಅನಿರ್ದಿಷ್ಟ ಅವಧಿ ಮುಷ್ಕರ ಕೈಗೊಳ್ಳಲಾಗು ಎಂದು ಅಧ್ಯಕ್ಷ ನಾಗರಾಜ್ ತಿಳಿಸಿದ್ದಾರೆ.
ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಗುತ್ತಿಗೆ ಹೊರಗುತ್ತಿಗೆ ಕಾರ್ಮಿಕರು ಈ ಬಜೆಟ್ ನಲ್ಲಿ ತಮ್ಮ ಸೇವೆಗಳನ್ನು ಕಾಯಂ ಗೊಳಿಸಲು ಸರ್ಕಾರ ಕ್ರಮ ವಹಿಸುತ್ತದೆ ಎಂಬ ಆಶಭಾವನೆ ಮತ್ತು ನಂಬಿಕೆಯನ್ನು ಹೊಂದಿದ್ದುವು. ಆದರೆ ರಾಜ್ಯದ ನೇರ ಪಾವತಿಯಲ್ಲಿ ಪಾವತಿ ಅಡಿಯಲ್ಲಿ ದುಡಿಯುತ್ತಿರುವ 24 ಸಾವಿರ ಪೌರಕಾರ್ಮಿಕರ ಸೇವೆಗಳನ್ನು ಮಾತ್ರ ಕಾಯಂಗೊಳಿಸುವ ನಿರ್ಧಾರವನ್ನು ಪ್ರಕಟಿಸಿದೆ ಇದನ್ನು ರಾಜ್ಯ ಸಂಘವು ಸ್ವಾಗತಿಸುತ್ತದೆ ಆದರೆ ಇತರೆ ಗುತ್ತಿಗೆ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಕಾರ್ಮಿಕರ ಬಗ್ಗೆ ಯಾವುದೇ ಕ್ರಮ ವಹಿಸದೆ ಇರುವುದು ಮಲತಾಯಿ ಧೋರಣೆ ಮತ್ತು ನ್ಯಾಯ ಸಮತವಲ್ಲ ಎಂದು ಅಭಿಪ್ರಾಯ ಪಟ್ಟಿದೆ 2022 ಜುಲೈ ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೀರು ಸರಬರಾಜು ಕಾರ್ಮಿಕರ ಜಂಟಿಯಾಗಿ ನಡೆಸಿದ ಮುಷ್ಕರದ ಸಮಯದಲ್ಲಿ ಸರ್ಕಾರವೇ ರಚಿಸಿದ ಸಮಿತಿಯ ಶಿಫಾರಸುಗಳು ಸರ್ಕಾರದ ಮುಂದಿದೆ ಅದನ್ನು ಬಹಿರಂಗಗೊಳಿಸಿ ಅದರ ಮೇಲೆ ಸಾರ್ವಜನಿಕ ಚರ್ಚೆ ನಡೆಸಿ ಮುಂದೆ ಸಾಗಬೇಕಾದ ಸರ್ಕಾರ ಏಕ ಪಕ್ಷವಾಗಿ ನಡೆಯುತ್ತಿರುವುದು ಸರಿಯಲ್ಲ.
ಇಂದು ರಾಜ್ಯ ಸಂಘದ ಅಭಿಪ್ರಾಯ ಪಟ್ಟಿದೆ ರಾಜ್ಯ ಸರ್ಕಾರವು ನಗರ ಸ್ಥಳೀಯ ಸಂಸ್ಥೆಗಳಲ್ಲಿ ದುಡಿಯೋ ಎಲ್ಲ ಹೊರಗುತ್ತಿಗೆ ಆಧಾರಿತ ನೀರು ಸರಬರಾಜು ವಿಭಾಗದವರ ಸೇವೆಗಳನ್ನು ಈ ತಕ್ಷಣದಿಂದ ನೇರ ಪಾವತಿ ಅಡಿಯಲ್ಲಿ ತಂದು ಸಮಾನ ವೇತನ ನೀಡಬೇಕು ನಂತರದಲ್ಲಿ ಹಂತ ಹಂತವಾಗಿ ಕಾಯಂಗೊಳಿಸಲು ಒತ್ತಾಯಿಸಿ ಕೆಲ ಹೋರಾಟಗಳನ್ನು ರಾಜ್ಯದ ವಿವಿಧ ಕಡೆ ನಡೆಸಿ ಮನವಿ ಸಲ್ಲಿಸಲಾಗಿದೆ ದಿನಾಂಕ 20 2 23 ರಂದು ಸರ್ಕಾರಕ್ಕೆ ಮುಷ್ಕರದ ನೋಟಿಸ್ ನೀಡಿ ಪತ್ರ ತಲುಪಿದ 14 ದಿನದ ಒಳಗಡೆ ತಾವು ತಮ್ಮ ನ್ಯಾಯ ಬದ್ಧವಾದ ಹಕ್ಕುಗಳನ್ನು ಪರಿಗಣಿಸಿದ ಹೋದಲ್ಲಿ ನಾವು ಕೆಲಸ ಸ್ಥಗಿತಗೊಳಿಸಿ ಮುಷ್ಕರಕ್ಕೆ ಮುಂದಾಗುತ್ತೇವೆ ಎಂದು ತಿಳಿಸಲಾಗಿತ್ತು.
ಇವರಿಗೆ 8 ದಿನಗಳ ಗತಿಸಿದ್ದರು ಸಹ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ ಇದು ಇದು ತುಂಬಾ ಯೋಚನೆ ಸಂಗತಿ ಆಗಿದೆ ಹಾಗಾಗಿ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೀರು ಸರಬರಾಜು ಭಾಗದ ನೌಕರರು ಅನಿವಾರ್ಯವಾಗಿ ದಿನಾಂಕ 6 3 23 ರಿಂದ ನೀರು ಸರಬರಾಜು ಬಂದು ಮಾಡಿ ಮುಷ್ಕರಕ್ಕೆ ಮುಂದಾಗಲು ನಮ್ಮ ರಾಜ್ಯ ಸಂಘವು ಕರೆ ಕೊಟ್ಟಂತೆ ನಾವುಗಳು ಸಹ ಬೆಂಬಲ ವ್ಯಕ್ತಪಡಿಸುವ ಸಂಬಂಧ ಪ್ರಕಟಣೆಯಲ್ಲಿ ತಿಳಿಸಿ ಈ ನ್ಯಾಯ ಸಮ್ಮದ ಚಳುವಳಿಯನ್ನು ನಾಗರಿಕ ಸಂಘಟನೆಗಳು ಬೆಂಬಲಿಸಲು ಶಿವಮೊಗ್ಗ ಮಹಾನಗರ ಪಾಲಿಕೆ ಹೊರಗುತ್ತಿಗೆ ನೀರು ಸರಬರಾಜು ನೌಕರರು ವಿನಂತಿಸಿದ್ದಾರೆ.