ನಮ್ಮ ದೇಹದಲ್ಲಿನ ಹಾರ್ಮೋನ್ ಗಳು ಮನಸ್ಸಿಗೆ ಆನಂದವನ್ನುಂಟು ಮಾಡುವಂತಹವು ಅವುಗಳೆಂದರೆ ಎಂಡೋರ್ಫಿನ್, ಡೋಪಮಿನ್ ,ಸೇರೋ ಟಾನಿನ್ , ಆಕ್ಸಿಟೋಸಿನ್, ಇವೆ 4 ಹಾರ್ಮೋನ್ ಗಳು ನಡೆದುಹೋದ ಕಹಿ ಗಳಿಗೆಗಳನ್ನು ಪ್ರತಿಬಾರಿ ನೆನೆದಾಗಲೂ ಶರೀರದಲ್ಲಿ ಅಂದು ಅನುಭವಿಸಿದ ಕೋಪ ,ಕ್ರೋಧ ,ವ್ಯಥೆ ,ನಿರಾಶೆ ,ಹತಾಶೆ ಈ ರೀತಿಯ ನೆಗೆಟಿವ್ ಎಮೋಷನ್ ಗಳು ಮತ್ತೆ ಅದೇ ರೀತಿ ಮರುಕಳಿಸುತ್ತವೆ .ಪ್ರತಿಬಾರಿಯ ನೆನಪಿನಲ್ಲಿಯೂ ನಿಮ್ಮ ಶರೀರ ಮನಸ್ಸು ಮತ್ತೆ ಕೆಟ್ಟ ಸನ್ನಿವೇಶದ ಪ್ರಭಾವವನ್ನು ಮತ್ತೊಮ್ಮೆ ಅನುಭವಿಸುತ್ತಾ ಜರ್ಜರಿತ ವಾಗುತ್ತಾ ಹೋಗುತ್ತದೆ .
ಇದು ನಮ್ಮ ಮಿದುಳಿನಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯ ಪರಿಣಾಮ ನಮ್ಮ ಮನಸ್ಸಿನಲ್ಲಿ ಮೂಡುವ ಭಾವನೆಗಳಿಗೆ ತಕ್ಕಂತೆ ಮಿದುಳಿಗೆ ಸೂಚನೆಗಳು ಹೋಗುತ್ತವೆ .ಮಿದುಳು ಅದಕ್ಕೆ ಅನುಗುಣವಾಗಿ ಹಾರ್ಮೋನ್ ಗಳನ್ನು ಉತ್ಪತ್ತಿ ಮಾಡಲು ನಿರ್ದೇಶನ ನೀಡುತ್ತದೆ .ಈ ಹಾರ್ಮೋನ್ ಗಳೇ ಶರೀರವನ್ನು ದುರ್ಬಲಗೊಳಿಸುತ್ತವೆ ನಮ್ಮ ದೇಹದಲ್ಲಿ 60 ಟ್ರಿಲಿಯನ್ ಗೂ ಅಧಿಕ ಜೀವಕೋಶಗಳಿಗೆ ಈ ಜೀವಕೋಶಗಳು ಆರೋಗ್ಯಕರವಾಗಿ ಇರಬೇಕೆಂದರೆ ಅವುಗಳಿಗೆ ಆರೋಗ್ಯಕರ ವಾತಾವರಣ ಇರಬೇಕು .ಜೀವಕೋಶಗಳಿಗೆ ಬೇಕಾದ ಪ್ರೋಟೀನ್ ,ವಿಟಮಿನ್ ,ಮಿನರಲ್ಸ್ ,ಅಮಿನೊ ಆ್ಯಸಿಡ್ ಗಳ ಜೊತೆಗೆ ಉಲ್ಲಾಸದ ಮನಸ್ಸು ಅಷ್ಟೇ ಮುಖ್ಯ .ಸರಿಯಾದ ಆರೈಕೆ ಇಲ್ಲದೆ ಜೀವಕೋಶಗಳು ಹಾಳಾಗುವುದಕ್ಕಿಂತ ಹತ್ತು ಪಟ್ಟು ಹೆಚ್ಚು ಕೆಟ್ಟ ಯೋಚನೆಗಳಿಂದ ನೆಗೆಟೀವ್ ಎಮೋಷನ್ಸ್ ಗಳಿಂದ ಹಾನಿಗೆ ಒಳಗಾಗುತ್ತದೆ .
ಇದೇ ಮನಸ್ಥಿತಿಯಲ್ಲಿ ಶರೀರ ಜೀವಕೋಶಗಳು ಕೆಡಲು ಶುರು ವಾಗುತ್ತವೆ .ಹೀಗೆ ಹಾಳಾದ ಜೀವಕೋಶಗಳು ತಮ್ಮ ಸುತ್ತಮುತ್ತಲಿನ ಆರೋಗ್ಯವಂತ ಕೋಶಗಳನ್ನು ನಾಶ ಮಾಡಲು ತೊಡಗುತ್ತವೆ .ಶರೀರ ಬಹಳ ಸುಲಭವಾಗಿ ಕಾಯಿಲೆಗಳಿಗೆ ತುತ್ತಾಗುತ್ತದೆ .ಬೇಗ ಕೃಶವಾಗುತ್ತದೆ .
ಮನುಷ್ಯನೆಂದ ಮೇಲೆ ಸಿಟ್ಟು ,ಕೋಪ ,ದುಃಖ ಇತ್ಯಾದಿ ಭಾವನೆಗಳು ಇರುವುದು ಸಹಜ .ಅವೆಲ್ಲವೂ ಬರದಂತೆ ಸದಾ ನಗು ನಗುತ್ತಲೇ ಇರಬೇಕು ಅಂದರೆ ಕಷ್ಟವೇ ಸರಿ .ಎಲ್ಲರೂ ನಿತ್ಯವೂ ಸಂತೋಷವಾಗಿರಲು ಸಾಧ್ಯವಿಲ್ಲ ..
ಸಂಸ್ಕೃತದಲ್ಲಿ ಒಂದು ಮಾತಿದೆ “ಯದ್ಭಾವಂ ತದ್ಭವತಿ” ನಾವು ಏನು ಯೋಚನೆ ಮಾಡುತ್ತೇವೆಯೋ ಅದೇ ಆಗುತ್ತದೆ . “ಯಥಾ ಪಿಂಡೇ ತತಾ ಬ್ರಹ್ಮಾಂಡೆ” ಎಂಬಂತೆ ಅಣು ಹೇಗಿರುತ್ತದೆಯೋ ಹಾಗೆಯೇ ಈ ಬ್ರಹ್ಮಾಂಡವು..
ಸನ್ನಿವೇಶಗಳಿಗೆ ತಕ್ಕಹಾಗೆ ನಾವು ಪ್ರತಿಕ್ರಿಯೆ ನೀಡಲೇಬೇಕು ಅದು ಸಹಜ .ಹೆದರಿಕೆ ಭಯ ಇಲ್ಲದೆ ನಾವು ಬದುಕಲಾರೆವು ಜೀವ ರಕ್ಷಣೆಗೆ ನಾವು ಹೆದರಲೇಬೇಕು ಹಾಗೆ ಕೋಪಗೊಳ್ಳಲು ಬೇಕು .ಆಗ ಸ್ರವಿಸುವ ಹಾರ್ಮೋನ್ ಗಳು ದೇಹ ರಕ್ಷಣೆಗೆ ಬೇಕಾದ ಅಧಿಕ ಹಾರ್ಮೋನ್ ಗಳನ್ನು ಶ್ರಮಿಸಿ ಆ ಕ್ಷಣದಿಂದ ನಮ್ಮನ್ನು ಪಾರು ಮಾಡುತ್ತದೆ .ಆದರೆ ಅದೇ ಎಮೋಷನ್ ಗಳನ್ನು ಸದಾ ಕಾಲ ನಾವು ನಮ್ಮ ಮನಸ್ಸಿನಲ್ಲಿ ಪೋಷಿಸಬಾರದು ಅಷ್ಟೆ .ನಮ್ಮನ್ನು ದ್ವೇಷಿಸುವವರನ್ನೂ ನಾವು ಕ್ಷಮಿಸಬೇಕು .ಅದು ದೊಡ್ಡಗುಣ ಅಂತ ಅಲ್ಲ ನಮ್ಮ ಒಳಿತಿಗಾಗಿ ನಮ್ಮ ಆರೋಗ್ಯಕ್ಕಾಗಿ .
ಎಂ ಸುಗಂಧಿ ವಕೀಲರು ಬೆಂಗಳೂರು

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153