ಇಂದು ಎಂದಿನಂತೆ ನಗರದ ಎಲ್ಲ ಭಾಗಗಳಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದರು . ನಗರದ ಕೋಟೆ ಠಾಣೆ ವ್ಯಾಪ್ತಿಯ ಬಿಎಚ್ ರೋಡ್ ನಲ್ಲಿ ಮಹಿಳಾ ಪೊಲೀಸ್ ಒಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದರು. ಆ ಸಮಯದಲ್ಲಿ ಅಲ್ಲಿಗೆ ಬಂದ ಎಲ್ಲಾ ವಾಹನಗಳನ್ನು ಬದಲಿ ಮಾರ್ಗದಲ್ಲಿ ತೆರಳುವಂತೆ ಸೂಚಿಸುತ್ತಿದ್ದರು.
ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿಯೊಂದಿಗೆ ದುರ್ವರ್ತನೆ ತೋರಿ , ನನಗೆ ಜಿಲ್ಲಾಧಿಕಾರಿಗಳು ಪಾಸ್ ಕೊಟ್ಟಿದ್ದಾರೆ ನೀವು ತಡೆಯುವ ಹಾಗೆ ಇಲ್ಲ ಎಂದು ರಂಪಾಟ ಮಾಡಿದ್ದಾನೆ. ನಂತರ ಈ ರಸ್ತೆಯಲ್ಲಿ ಅಡ್ಡವಾಗಿ ನಿಂತು ಲಾರಿಯನ್ನು ತಡೆಹಿಡಿದು ತುಂಬಾ ಹೊತ್ತಿನ ತನಕ ಟ್ರಾಫಿಕ್ ಜಾಮ್ ಮಾಡಿದನು. ಆಂಬ್ಯುಲೆನ್ಸ್ ಬಂದರೂ ಸಹ ಜಾಗ ಬಿಡಲಿಲ್ಲ. ಈ ವ್ಯಕ್ತಿಯು ಗೂಡ್ ಶೆಡ್ ನಲ್ಲಿ ಲಾರಿ ಚಾಲಕನಾಗಿದ್ದು ಡೀಸೆಲ್ ತುಂಬಲು ಮಾತ್ರ ಜಿಲ್ಲಾಧಿಕಾರಿ ಕಚೇರಿಯಿಂದ ಅನುಮತಿ ನೀಡಲಾಗಿದೆ. ಈ ಘಟನೆಯು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ನಡೆದಿದೆ .ಬಳಿಕ ಬಂದ ಪೊಲೀಸ್ ಅಧಿಕಾರಿಗಳು ಆ ವ್ಯಕ್ತಿಯನ್ನು ಠಾಣೆಗೆ ಕರೆದುಕೊಂಡು ಹೋದರು. ಈ ಪರಿಸ್ಥಿತಿಯಲ್ಲಿ ಪೊಲೀಸರು ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ . ಇಂಥವರಿಂದಾಗಿ ಅವರ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ. ಪೊಲೀಸ್ ಅಧಿಕಾರಿಗಳು ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು . ವಿಡಿಯೋ ನೋಡಿ
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ