ಭದ್ರಾವತಿಯ ನಗರಸಭೆಯಲ್ಲಿ ಇಂದು ನಡೆದ ಕೋವಿಡ್-೧೯ ರ ಪರಿಶೀಲನಾ ಸಭೆ ನಡೆಯಿತು. ಈ ಸಭೆಯಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿಗಳಾದ ಶ್ರೀಯುತ ಈಶ್ವರಪ್ಪ,ಭದ್ರಾವತಿಯ ಶಾಸಕರಾದ ಶ್ರೀಯುತ ಶ್ರೀ ಬಿ.ಕೆ.ಸಂಗಮೇಶ್ವರ್, ಜಿಲ್ಲಾಧಿಕಾರಿಗಳಾದ ಶ್ರೀಯುತ ಶಿವಕುಮಾರ್, ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಯುತ ಸಂತೋಷ್, ತಾಲ್ಲೂಕು ವೈದ್ಯಾಧಿಕಾರಿಗಳು, ನಗರಸಭಾ ಪೌರಾಯುಕ್ತರಾದ ಶ್ರೀಯುತ ಪರಮೇಶ್, ನಗರ ಸಭಾ ಸದಸ್ಯರಾದ ಶ್ರೀಯುತ ಬಿ.ಕೆ.ಮೋಹನ್, ಸುದೀಪ್ ಕುಮಾರ್, ಜಾರ್ಜ್, ಟಿಪ್ಪುಸುಲ್ತಾನ್ , ಮಂಜುನಾಥ್ ಟೀಕು, ಅನುಸುಧಾ ಮೋಹನ್, ಮಣಿ, ಗಂಗಾಧರ್, ಇನ್ನಿತರರು ಉಪಸ್ಥಿತರಿದ್ದರು… ಶಾಸಕರಾದ ಸನ್ಮಾನ್ಯ ಶ್ರೀಯುತ ಶ್ರೀ ಬಿ.ಕೆ.ಸಂಗಮೇಶ್ವರ್ ರವರು ಸಲಹೆ ಸೂಚನೆಗಳನ್ನು ನೀಡಿದರು, ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಮಹಾಮಾರಿಯನ್ನು ಹತ್ತಿಕ್ಕಲು ಬೇಕಾದ ಸಕಲ ಸಿದ್ಧತೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದರ ಜೊತೆಯಲ್ಲಿ ಅಧಿಕಾರಿಗಳು ಮತ್ತಷ್ಟು ಶ್ರಮವಹಿಸಬೇಕು ಎಂದರು, ಜನಸಂದಣಿ ಪ್ರದೇಶಗಳಲ್ಲಿ ಸಂಚಾರ ಸಂಪೂರ್ಣ ನಿಷೇಧ ಹೇರುವ ಮೂಲಕ ಜನಸಂದಣಿಯನ್ನು ತಗ್ಗಿಸಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.. ಭದ್ರಾವತಿಯಲ್ಲಿರುವ ಸಮಗ್ರ ಕೋವಿಡ್ ಸೋಂಕಿತರ ಮಾಹಿತಿ ಪಡೆದುಕೊಳ್ಳುವುದರ ಜೊತೆಗೆ ಹೋಂ ಕ್ವಾರೈಂಟೈನ್ ಅವಕಾಶ ಮಾಡದೇ ಕೋವಿಡ್ ಕೇರ್ ಸೆಂಟರ್ ನಲ್ಲಿ ಉತ್ತಮ ಚಿಕಿತ್ಸೆ ನೀಡುವಂತೆ ಸೂಚಿಸಿದರು..