ತೀರ್ಥಹಳ್ಳಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ರೈತ ಸಮಾವೇಶದಲ್ಲಿ ತಮ್ಮ ತೀವ್ರ ವಿರೋಧದಿಂದ ಡಾಕ್ಟರ್ ಕಸ್ತೂರಿ ರಂಗರಾವ್ ವರದಿಯನ್ನು ಜಾರಿಯಾಗದಂತೆ ತಡೆಹಿಡಿಯಲಾಗಿದೆ ಎಂದು ಆರಗ ಜ್ಞಾನೇಂದ್ರ ನೀಡಿರುವ ಹೇಳಿಕೆಯು ಶುದ್ಧ ಸುಳ್ಳುನಿಂದ ಕೂಡಿದ್ದು ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಸರ ಸೂಕ್ಷ್ಮ ಪ್ರದೇಶ ಘೋಷಣೆ ಅಂತಿಮ ಹಂತಕ್ಕೆ ತಲುಪಿದೆ ಎಂದು ಕಾಂಗ್ರೆಸ್ ಮುಖಂಡ ರಮೇಶ್ ಹೆಗ್ಡೆ ಹೇಳಿದರು.
ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಡಾ. ಕಸ್ತೂರಿ ರಂಗನ ವರದಿ ಕುರಿತು ಸುಪ್ರೀಂ ಕೋರ್ಟ್ ನ ಹಸಿರು ಪೀಠದಲ್ಲಿ ನಡೆಯುತ್ತಿರುವ ಗೋವಾ ಫೌಂಡೇಶನ್ ವಿರುದ್ಧ ಭಾರತ ಸರ್ಕಾರ ಪ್ರಕರಣದಲ್ಲಿ ಕೇಂದ್ರ ಸರ್ಕಾರವು ಡಾಕ್ಟರ್ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವುದಾಗಿ ದಿನಾಂಕ 27 .8. 2014ರಲ್ಲಿ ನೀಡಿದ ಹೇಳಿಕೆ ಹಾಗೂ ದಿನಾಂಕ 19 .9 2018 ಹಾಗೂ ದಿನಾಂಕ 24.8. 2018 ರಲ್ಲಿ ಅಫಿ ಡೇವಿಡ್ ಸಲ್ಲಿಸಿರುವ ಕಾರಣ ಹಾಗೂ 2015 2017 2018 ಹಾಗೂ 2022 ರಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಪರಿಸರ ಸೂಕ್ಷ್ಮ ಪ ಪ್ರದೇಶ ಘೋಷಿಸುವ ಸಲುವಾಗಿ ತರಡು ಅಧಿ ಸೂಚನೆಯನ್ನು ನಾಲ್ಕು ಬಾರಿ ಹೊರಡಿಸಿರುವ ಕಾರಣ ಡಾಕ್ಟರ್ ಕಸ್ತೂರಿ ರಂಗನ್ ವರದಿ ಅನುಷ್ಠಾನ ಅನಿವಾರ್ಯವಾಗಿದೆ ಇದಕ್ಕೆ ಬಿಜೆಪಿ ಕೇಂದ್ರ ಸರ್ಕಾರವೇ ನೇರ ಹೊಣೆಯಾಗಿದೆ ಎಂದರು.
ಬಿಎಸ್ ಯಡಿಯೂರಪ್ಪನವರು ಸಂಸದರಾಗಿದ್ದ ಸಂದರ್ಭದಲ್ಲಿ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವರು ಡಾಕ್ಟರ್ ಕಸ್ತೂರಿರಂಗನ್ ವರದಿ ಅನುಷ್ಠಾನ ಕುರಿತು ಕರೆದ ಪಶ್ಚಿಮ ಘಟ್ಟಗಳ ಸಂಸದರ ಸಭೆಯಲ್ಲಿ ದಿನಾಂಕ 3 8 2018 ಹಾಗೂ 11.08.2015ರಲ್ಲಿ ನಡೆದ ಗೈರು ಹಾಜರಾಗಿರುವುದು ಹಾಗೂ ಹಾಲಿ ಸಂಸದರಾದ ಬಿ ವೈ ರಾಘವೇಂದ್ರ ಅವರು ಈ ವರದಿಯ ವಿರುದ್ಧ ಸಂಸತ್ ಅಧಿವೇಶನದಲ್ಲಿ ಒಮ್ಮೆಯೂ ಪ್ರಸ್ಥಾಪಿಸದೆ ಇರುವುದು ಶಿವಮೊಗ್ಗ ಜಿಲ್ಲೆಯ 475 ಗ್ರಾಮಗಳ ಜನರಿಗೆ ಎಸಗಿದ ದ್ರೋಹವಾಗಿದೆ ಎಂದರು.
ಶ್ರೀ ಸಿದ್ದರಾಮಯ್ಯ ನವರ ನೇತೃತ್ವದ ರಾಜ್ಯ ಸರ್ಕಾರ ದಿನಾಂಕ 19 4 2017ರಲ್ಲಿ ಸಚಿವ ಸಂಪುಟ ಸಭೆಯಲ್ಲಿ ಡಾಕ್ಟರ್ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಿ ನಿರ್ಣಯ ಕೈಗೊಂಡು ದಿನಾಂಕ 22 4 2018 ರಲ್ಲಿ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಮೇಲ್ಕಂಡ ವರದಿಯನ್ನು ಕೈಲಿಡುವಂತೆ ಸಲ್ಲಿಸಿ ಮನವಿ ಎನ್ನು ಯಾವುದೇ ಮಾರ್ಪಾಡು ಮಾಡದೆ ಯಥಾವತ್ತಾಗಿ ಅನುಷ್ಠಾನಗೊಳಿಸುವಂತೆ ಆದೇಶಿಸಿದ್ದು ಆರೋಗ್ಯ ಜ್ಞಾನೇಂದ್ರ ಮರೆಯಬಾರದು ಎಂದರು.
ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಯ್ಯನವರು ಕೇಂದ್ರ ಅರಣ್ಯ ಸಚಿವರಾದ ಶ್ರೀ ಭೂಪೇಂದ್ರ ಯಾದವ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೇಲ್ಕಂಡ ವರದಿ ಕೈಬಿಡುವಂತೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾದ ಕಾರಣ ಕೇಂದ್ರ ಬಿಜೆಪಿ ಸರ್ಕಾರ 6 72 ರಲ್ಲಿ ಮೇಲ್ಕಂಡ ವರದಿಯ ಪ್ರೀತಿಯ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅತಿ ಸೂಚನೆ ನಾಲ್ಕನೇ ಬಾರಿ ಘೋಷಣೆಯಾಗಲು ಪ್ರಮುಖ ಕಾರಣವಾಗಿದೆ ಎಂದರು.
ಪ್ರಭಾವ ಮುಖ್ಯ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಡಾಕ್ಟರ್ ಕಸ್ತೂರಿ ರಂಗನ್ ವರದಿ ಕೈ ಬಿಡುವ ಬಗ್ಗೆ ಮಾತನಾಡದೆ ಇರುವುದು ಮೇಲ್ಕಂಡ ವರದಿಯ ಅನುಷ್ಠಾನ ಜಾರಿ ಯಾವುದರಲ್ಲಿ ನಂಬಿಕೆ ಮೂಡುವಂತೆ ಮಾಡಿದೆ ಎಂದರು.
ಪರಿಸರ ಸಂರಕ್ಷಣಾ ಕಾಯ್ದೆ 1986 ಕೇಂದ್ರ ಶಾಸನ ವಾಗಿರುವ ಕಾರಣ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆ ಕೇಂದ್ರ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿರುವ ಕಾರಣ ಕರ್ನಾಟಕದಲ್ಲಿ ಡಾಕ್ಟರ್ ಕಸ್ತೂರಿರಂಗನ್ ವರದಿ ಜಾರಿಯಾದಲ್ಲಿ ಕೇಂದ್ರ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದರು.
ಅರಗ ಜ್ಞಾನೇಂದ್ರ ರವರ ಹೇಳಿಕೆ ಹಾಸ್ಯಸ್ಪದ ಹಾಗೂ ಸುಳ್ಳಿನ ಕಂತೆಯಿಂದ ಕೂಡಿದ ರಾಜಕೀಯ ಹೇಳಿಕೆ…
ಕೇಂದ್ರ ಅರಣ್ಯ ಸಚಿವರಾದ ಶ್ರೀ ಭೂಪೇಂದ್ರ ಯಾದವ್ರವರು ಡೈರೆಕ್ಟರ್ ಜನರಲ್ ಆಫ್ ಫಾರೆಸ್ಟ್ (ನಿವೃತ್ತ) ಶ್ರೀ ಸಂಜಯ್ ಕುಮಾರ್ ರವರ ನೇತೃತ್ವದಲ್ಲಿ ಉನ್ನತ ಅಧಿಕಾರಿಗಳ ಸಮಿತಿಯನ್ನು ರಚಿಸಿ ಒಂದು ವರ್ಷದ ಒಳಗಾಗಿ ಪಶ್ಚಿಮ ಘಟ್ಟಗಳ ಗ್ರಾಮಗಳ ಭೌತಿಕ ಭೂ ದೃಶ್ಯಾವಳಿ ನಡೆಸಿ ಸಮಗ್ರ ವರದಿಯನ್ನು ಸಲ್ಲಿಸಿದ ನಂತರ ಡಾಕ್ಟರ್ ಕಸ್ತೂರಿ ರಂಗನ್ ವರದಿ ಪ್ರೀತಿಯ ಹೊರಡಿಸಿದ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆಯನ್ನು ಅಂತಿಮಗೊಳಿಸಲಾಗುವುದು ಹೇಳಿಕೆ ನೀಡಿರುವ ಕಾರಣ ಡಾಕ್ಟರ್ ಕಸ್ತೂರಿ ರಂಗನ್ ವರದಿ ಅನುಷ್ಠಾನ ತಡೆಹಿಡಿಯಲಾಗಿಲ್ಲ ಎಂಬ ಅಂಶವನ್ನು ಆರೋಗ್ಯ ಜ್ಞಾನೇಂದ್ರ ರವರು ತಿಳಿಯಬೇಕಾಗಿದೆ.
ಡಾಕ್ಟರ್ ಕಸ್ತೂರಿ ರಂಗನ್ ವರದಿ ಕೈಬಿಡುವ ಬಗ್ಗೆ ಕೇಂದ್ರ ಸರ್ಕಾರದ ವತಿಯಿಂದ ಆಫೀಡವಿ ಸಲ್ಲಿಸಲು ಒತ್ತಾಯ…
ಶ್ರೀ ಅರಗ ಜ್ಞಾನೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರು ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಶಿವಮೊಗ್ಗ ಉತ್ತರ ಕನ್ನಡ ದಕ್ಷಿಣ ಕನ್ನಡ ಉಡುಪಿ ಚಿಕ್ಕಮಗಳೂರು ಹಾಸನ ಮೈಸೂರು ಬೆಳಗಾವಿ ಚಾಮರಾಜನಗರ ಕೊಡಗು ಜಿಲ್ಲೆಯ 1572 ಗ್ರಾಮಗಳ ಜನರ ಬದುಕಿನ ಜೊತೆ ಚೆಲ್ಲಾಟವಾಡುವ ಬದಲು ತಮ್ಮದೇ ಕೇಂದ್ರ ಬಿ ಜೆ ಪಿ ಸರ್ಕಾರದ ವತಿಯಿಂದ ರಾಷ್ಟ್ರೀಯ ಹಸಿರು ಪೀಠಕ್ಕೆ ಡಾಕ್ಟರ್ ಕಸ್ತೂರಿ ರಂಗನ್ ವರದಿಯನ್ನು ಕೈಬಿಡುವುದಾಗಿ ಆಫಿಡೆವಿಟ್ ಸಲ್ಲಿಸಿ ಪರಿಸರ ಸೂಕ್ಷ್ಮ ಪ್ರದೇಶ ಅಧಿ ಸೂಚನೆಯನ್ನು ಕೈಬಿಟ್ಟಿರುವುದಾಗಿ ಪ್ರಧಾನಮಂತ್ರಿಗಳಿಂದ ಹೇಳಿಕೆ ಕೊಡಿಸಬೇಕು ಇಲ್ಲದಿದ್ದಲ್ಲಿ ಪಶ್ಚಿಮ ಘಟ್ಟಗಳ ಜನರು 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.