ಶಿವಮೊಗ್ಗ ಯುವ ಮುಖಂಡರಾದ ಶ್ರೀ ಕೆಇ ಕಾಂತೇಶ್ವರ ಜನ್ಮ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಕಾಂತೇಶ್ ಸ್ನೇಹಿತರ ಬಳಗ ವತಿಯಿಂದ ನಿರ್ಧರಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದರ ಅಂಗವಾಗಿ ಶಿವಮೊಗ್ಗ ನಗರದ ಮಂಜುನಾಥ ಬಡಾವಣೆ ರಾಜೀವ್ ಗಾಂಧಿ ಬಡಾವಣೆ ಗುಂಡಪ್ಪ ಶೆಡ್ಡು ಅಂಬೇಡ್ಕರ್ ನಗರ ಬ್ಯಾಂಕಿ ನಗರ ನ್ಯೂ ಮಂಡ್ಯ ಶಾಂತಿನಗರದ ಅವಶ್ಯಕತೆ ಇರುವ ನಿವಾಸಿಗಳಿಗೆ ಸೊಳ್ಳೆ ಪರದೆ ವಿತರಣೆ ಮಾಡಲಾಗುವುದು.ಈ ಸೇವ ಕಾರ್ಯಕ್ರಮದ ಉದ್ಘಾಟನೆಯನ್ನು 21 3 23 ಬೆಳಗ್ಗೆ ರಂದು ಗುರುಪುರ ನಂಜುಂಡೇಶ್ವರ ಸಭಾಂಗಣದಲ್ಲಿ ಶಿವಮೊಗ್ಗ ಬೆಕ್ಕಿನ ಕಲ್ಮಟ್ಟದ ಪೂಜ್ಯ ಶ್ರೀ ಡಾ. ಮಲ್ಲಿಕಾರ್ಜುನ ಮುರುಗರಾಜೇಂದ್ರ ಮಹಾಸ್ವಾಮಿಗಳು ಶಿವಮೊಗ್ಗ ಬಸವ ಕೇಂದ್ರ ಶ್ರೀ ಬಸವ ಮುರುಳಸಿದ್ದ ಸ್ವಾಮಿಗಳು ಹೊಸದುರ್ಗ ಕನಕ ಗುರು ಪೀಠದ ಪೂಜ್ಯ ಶ್ರೀ ಈಶ್ವರನಂದಾಪುರಿ ಸ್ವಾಮಿ ಚಿತ್ರದುರ್ಗ ಮಾದರ ಗುರು ಪೀಠದ ಪೂಜ್ಯಾ. ಶ್ರೀ ಮಾದರ ಚೆನ್ನಯ್ಯ ಸ್ವಾಮಿಗಳು ಮತ್ತು ಶ್ರೀ ಸನ್ಮಾನ್ಯ ಕೆಎಸ್ ಈಶ್ವರಪ್ಪನವರಿಂದ ನೆರವೇರಿಸಲಾಗುವುದು ಎಂದರು.
ಇದೇ ದಿನ ನಗರದ ಶಾರದಾ ಅಂದರ ವಿಕಾಸ ಕೇಂದ್ರ ತಾಯಿ ಮನೆ ಜಯ ಜೀವನ ಸಂಜತರಂಗ ಗುಡ್ ಲಕ್ ಆರೇಕ ಕೇಂದ್ರ ಆಶ್ರಮಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.22ರಂದು ಯುಗಾದಿ ಸಂಜೆ ವಿಶೇಷ ಯುಗಾದಿ ಸಂಭ್ರಮ ಕಾರ್ಯಕ್ರಮವನ್ನು ಹಾಸ್ಯ ಸಂಜೆ ಕಾರ್ಯಕ್ರಮವನ್ನ ಶೇಷನೇಶ್ವರ ದೇವಾಲಯ ಆವರಣ ಶುಭ ಮಂಗಳ ಸಮುದಾಯ ಭವನ ಆಯೋಜಿಸಲಾಗಿದೆ ಎಂದರು.ಖ್ಯಾತ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್ ಬಸವರಾಜ ಆದಿಮನಿ ಹಾಸ್ಯ ಸಂಜೆ ಕಾರ್ಯಕ್ರಮ ನಡೆಸಿಕೊಡುತ್ತಾರೆ.ಯುಗಾದಿ ವಿಶೇಷ ಪಂಚಾಂಗ ಶ್ರವಣ ಕಾರ್ಯಕ್ರಮ ಸಂದರ್ಭದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಶ್ರೀ ಕೆ ಕಾಂತೇಶ್ ಅವರೊಂದಿಗೆ ಮಹಾನಗರ ಪಾಲಿಕೆ ಮಹಾಪೌರ. ರಾ ದ. ಶಿವಕುಮಾರ್ ಸೋಡಾ ಅಧ್ಯಕ್ಷರಾದ ನಾಗರಾಜ್ ಮಹಾನಗರ ಪಾಲಿಕೆ ಸದಸ್ಯರಾದ ವಿಶ್ವಾಸ್ ಗಣೇಶ್ ಶಂಕರೇಶ್ವರ ರಾಹುಲ್ ಬಿದರೆ ಪ್ರಭಾಕರ್ ಶ್ರೀ ಸುರೇಖಾ ಶ್ರೀ ಸುನಿತಾ ಅಣ್ಣಪ್ಪ ಶ್ರೀ ಉಪಸ್ಥಿರಿದ್ದರು.