ಇಂದು ಶಿವಮೊಗ್ಗದಲ್ಲಿ ಲಸಿಕಾಕರಣದ ಅವ್ಯವಸ್ಥೆ ರಾರಾಜಿಸುತ್ತಿತ್ತು. ಎಲ್ಲರಿಗೂ ಎರಡನೆ ಡೋಸ್ ಲಸಿಕಾಕರಣ ಕ್ಕೆ ಬರಲು ಆ್ಯಪಲ್ಲಿ ನೋಟಿಫಿಕೇಷನ್ ಬಂದಿತ್ತು. ಆದ್ದರಿಂದ ಜನ ಬೆಳಿಗ್ಗೆ 5ಗಂಟೆಯಿಂದಲೇ ಕ್ಯೂ ನಿಂತಿದ್ದು ಕಂಡುಬಂತು. ಆದರೆ 8ಗಂಟೆಯ ಸುಮಾರಿಗೆ ಬಂದ ಅಧಿಕಾರಿಗಳು ನಲವತ್ತೈದು ದಿನ ಆದವರಿಗೆ ಮಾತ್ರ ಎಂದು ಹೇಳಿದರು. ಆದರೆ ಆ್ಯಪ್ ನಲ್ಲಿ ಮಾತ್ರ ನಲವತ್ತೈದು ದಿನಗಳ ಒಳಗಾಗಿ ಲಸಿಕೆ ಪಡೆಯಬೇಕೆಂದು ಬರುತ್ತಿತ್ತು . ಹೀಗಾಗಿ ಸಾರ್ವಜನಿಕರು ಹಾಗೂ ಅಧಿಕಾರಿಗಳ ಮಧ್ಯೆ ಘರ್ಷಣೆ ಏರ್ಪಟ್ಟಿತು . ಪೊಲೀಸರು ಬಂದು ಪರಿಸ್ಥಿತಿ ತಿಳಿಗೊಳಿಸಿದರು. ಸಾರ್ವಜನಿಕರು ಸರ್ಕಾರದ ಮಾಹಿತಿ ಕೊರತೆಗೆ ಹಿಡಿ ಹಿಡಿ ಶಾಪ ಹಾಕಿದರು.
ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಯೋಗೇಶ್ ಎಚ್ ಸಿ ಮಹಾನಗರ ಪಾಲಿಕೆ ಸದಸ್ಯರು ಈ ಲಸಿಕಾಕರಣದ ಗೊಂದಲಕ್ಕೆ ಸರ್ಕಾರದ ದ್ವಂದ್ವ ನೀತಿಯ ಕಾರಣ. ಎಲ್ಲರಿಗೂ ಸರಿಯಾದ ಮಾಹಿತಿ ಸಿಕ್ಕಿದರೆ ಬೆಳಿಗ್ಗೆ ಆದ ಜನಜಂಗುಳಿ ಏರ್ಪಡುತ್ತಿರಲಿಲ್ಲ . ಈ ಕರೋನಾ ಸಮಯದಲ್ಲಿ ಜನಜಂಗುಳಿಯಿಂದ ಆಗುವ ದುಷ್ಪರಿಣಾಮ ಎಲ್ಲರಿಗೂ ಗೊತ್ತಿದೆ. ಇಂದು ಬೆಳಿಗ್ಗೆ ನಡೆದ ಜನಜಂಗುಳಿಯಿಂದ ಕರೋನ ಹರಡಿದರೆ ಸರ್ಕಾರವೇ ನೇರ ಹೊಣೆ. ಬೆಳಿಗ್ಗೆ ಅಧಿಕಾರಿಗಳು ಪೊಲೀಸರು ಜನರ ಮಧ್ಯೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ವಿಫಲರಾದರು. ಸರ್ಕಾರದ 1ಸ್ಪಷ್ಟ ಮಾಹಿತಿ ಸಿಕ್ಕಿದ್ದರೆ ಇವತ್ತಿನ ಗೊಂದಲದ ಪರಿಸ್ಥಿತಿ ಏರ್ಪಡುತ್ತಿರಲಿಲ್ಲ. ಪ್ರಧಾನಮಂತ್ರಿಗಳು ಡಿಜಿಟಲ್ ಇಂಡಿಯಾವನ್ನು ಭಾಷಣಕ್ಕಷ್ಟೇ ಸೀಮಿತ ಪಡಿಸದೆ ಕಾರ್ಯರೂಪಕ್ಕೂ ತರಬೇಕು. ಸರ್ಕಾರದ ಆ್ಯಪ್ ಗಳಲ್ಲಿ ನಿಖರವಾದ ಮಾಹಿತಿಯನ್ನು ನೀಡಬೇಕು ಎಂದು ಆಗ್ರಹಿಸಿದರು.
ವಿವರಕ್ಕಾಗಿ ವೀಡಿಯೋ ನೋಡಿ
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ