ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರಾದ ನಾಗರಾಜ್ ಕಂಕಾರಿಯವರು ಮಾತನಾಡಿ ನಿನ್ನೆ ಗಾಂಧಿಬಜಾರ್ ನಲ್ಲಿ ನಡೆದ ಕಾರುಗಳ ಗಾಜು ಒಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ. ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಪೊಲೀಸ್ ಇಲಾಖೆ ವಿಫಲವಾಗಿದೆ. ಶಿವಮೊಗ್ಗದಲ್ಲಿ ಹೇರಳವಾಗಿ ಗಾಂಜಾ ಮತ್ತು ಅಫೀಮು ಜಾಲ ಹರಡಿದೆ. ಪೋಲಿಸರಿಗೆ ಇದರ ಮೇಲೆ ಯಾವುದೇ ಹಿಡಿತವಿಲ್ಲ. ಕಿಲ್ಲೆ ಜಿಲ್ಲಾಡಳಿತದ ವಿಫಲತೆಯು ಎದ್ದು ಕಾಣುತ್ತಿದೆ. ಇದರಿಂದಾಗಿ ಇಂಥ ಪ್ರಕರಣಗಳು ಪದೇ ಪದೇ ನಡೆಯುತ್ತಿದೆ. ಈಗ ಲಾಕ್ ಡೌನ್ನಲ್ಲಿ ತರಕಾರಿ ಸಿಗುವುದು ಕಷ್ಟವಾಗಿದೆ ಆದರೆ ಗಾಂಜಾ ಮತ್ತು ಅಫೀಮು ತುಂಬ ಸುಲಭವಾಗಿ ಸಿಗುತ್ತದೆ. ಇದರ ನೇರ ಹೊಣೆ ಜಿಲ್ಲಾಡಳಿತ ಹೊರಬೇಕು. ಈ ಕೂಡಲೇ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಾರ್ಯ ಪ್ರವೃತ್ತರಾಗಿ ಇಂಥ ಪುಂಡಾಟಗಳಿಗೆ ಕೊನೆ ಹಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಜೀವಭಯದಿಂದ ಓಡಾಡಬೇಕಾದ ಪರಿಸ್ಥಿತಿ ಬಂದೊದಗುತ್ತದೆ ಎಂದು ಹೇಳಿದರು .
ವರದಿ :ಮಂಜುನಾಥ್ ಶೆಟ್ಟಿ ಶಿವಮೊಗ್ಗ