ನವ ಕರ್ನಾಟಕ ನಿರ್ಮಾಣ ವೇದಿಕೆ ಹಾಗೂ ಶಿವಮೊಗ್ಗ ಜಿಲ್ಲಾ ವಕ್ಕಲಿಗರ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ದಿನಾಂಕ 1.3.2024 ರಂದು ಶಿವಮೊಗ್ಗ ನಗರದ ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ಕೊಳವೆ ಬಾವಿಗೆ ಜಲ ಮರುಪೂರ್ಣ ಮತ್ತು ಅಂತರ್ಜಲ ಪುನಶ್ಚೇತನ ಕಾರ್ಯಗಾರ ಮತ್ತು ಪ್ರಾತ್ಯಕ್ಷತೆಯನ್ನು ಆಯೋಜಿಸಲಾಗಿದೆ ಎಂದು ಗೋ ರಮೇಶ್ ಗೌಡ ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಚಿತ್ರದುರ್ಗದ ಅಂತರ್ಜಲ ತಜ್ಞರು, ವಿಜ್ಞಾನಿಗಳು ಆದ ಜಿಯೋ ರೈನ್ ವಾಟರ್ ಸಂಸ್ಥೆ ಮುಖ್ಯಸ್ಥರು ಎನ್ ಜೆ ದೇವರಾಜ್ ರೆಡ್ಡಿ ಅವರು ಈ ಕಾರ್ಯಗಾರದಲ್ಲಿ ವಿಶೇಷವಾಗಿ ಸತತ 34 ವರ್ಷಗಳಿಂದ ಅಂತರ್ಜಲ ನೀರಾವರಿ ಕೃಷಿ ತಜ್ಞ ತಂತ್ರಜ್ಞಾನ ಮಳೆ ಕೊಯ್ಲು ಬೋರ್ವೆಲ್ ಗಳಿಗೆ ಜಲ ಮರುಪೂರ್ಣ ಹಾಗೂ ಅಂತರ್ಜಲ ಪುಣ ಕ್ಷೇತ್ರದ ವಿಚಾರದಲ್ಲಿ ಡಾಕ್ಟರ್ ಏನ್ ಜೆ ದೇವರಾಜ ರೆಡ್ಡಿ ಅವರಿಗೆ ಭಗೀರಥ ಎಂಬ ಬಿರುದನ್ನು ನೀಡಿ ಗೌರವಿಸಲಾಗುವುದು ಎಂದರು.

ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಬರಗಾಲ ಆವರಿಸಿದ್ದು ಅಂತರ್ಜಲ ಮಟ್ಟ ಕುಸಿಯುತ್ತಿದೆ ಬರೆದಾಗುತ್ತಿದ್ದು 500 1000 ಅಡಿ ಬೋರ್ವೆಲ್ ಕೊಡಿಸಿದರು ನೀರು ಸಿಗದೇ ಇರುವುದು ನೀರು ಬರುತ್ತಿದ್ದ ಗೊರುಲ್ಗಳು ಬರಿದಾಗುತ್ತಿರುವುದು ಸರ್ವೇಸಾಮಾನ್ಯವಾಗುತ್ತಿದೆ ಎಂದರು.

ಈ ನಿಟ್ಟಿನಲ್ಲಿ ರೈತ ಬಾಂಧವರಿಗೆ ಅನುಕೂಲವಾಗುವಂತೆ ಮಾರ್ಚ್ 1 ರಂದು ನಗರದ ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ.


ಈ ಕಾರ್ಯಾಗಾರದಲ್ಲಿ ಕಲಿಯಬಹುದಾದ ವಿಚಾರಗಳು
1. ಫೇಲಾದ ಬೋರ್ವೆಲ್ ಗಳಿಂದ ನೀರನ್ನು ತೆಗೆಯುವುದು ಹೇಗೆ..?
2. ಕಡಿಮೆ ನೀರು ಬರುವ ಬೋರ್ವೆಲ್ ಗಳಿಂದ ಹೆಚ್ಚು ನೀರು ತೆಗೆಯುವುದು ಹೇಗೆ..?
3. ಯಾವ ಬೋರ್ ವೆಲ್ ಗಳನ್ನು ರಿಚಾರ್ಜ್ ಮಾಡಬಹುದು..?
4. ರಿಚಾರ್ಜ್ ಸಾಮರ್ಥ್ಯ ಕಂಡು ಹಿಡಿಯುವುದು ಹೇಗೆ..? ಮತ್ತು ಅಂತರ್ಜಲ ಹೆಚ್ಚಿಸುವುದು ಹೇಗೆ..?
5. ಬೋರ್ವೆಲ್ ರಿಚಾರ್ಜ್ ಮಾಡುವ ಸರಿಯಾದ ವಿಧಾನ ಯಾವುದು..?
6. ಒಮ್ಮೆ ರಿಚಾರ್ಜ್ ಮಾಡಿದ ಬೋರ್ವೆಲ್ ಎಷ್ಟು ವರ್ಷ ನೀರನ್ನು ಒದಗಿಸುತ್ತದೆ..?
ಸುದ್ದಿಗೋಷ್ಠಿಯಲ್ಲಿ ನವ ಕರ್ನಾಟಕ ನಿರ್ಮಾಣ ವೇದಿಕೆಯ ಜಿಲ್ಲಾ ಜಿಲ್ಲಾಧ್ಯಕ್ಷರು ಸಂತೋಷ್
ನಗರ ಸಂಚಾಲಕರಾದ ಮುನ್ನೀರ್ ಮಹಿಳಾ ಘಟಕದ ಅಧ್ಯಕ್ಷೆ ಧನಲಕ್ಷ್ಮಿ ಮತ್ತು ಹಾಗೂ ಹಲವು ಪ್ರಸಿತರಿದ್ದರು

ವರದಿ ಸಂತೋಷ್ ರಾಮ್

https://amzn.to/3wwC4gN