ನೈನೃತ್ಯ ರೈಲ್ವೆ ಯ 1192.86 ಕೋಟಿಯ ವಿವಿಧ ಯೋಜನೆಗಳು ಸೇರಿದಂತೆ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ 554 ರೈಲ್ವೆ ನಿಲ್ದಾಣಗಳು ದೇಶದ್ಯಂತ 1500 ರಸ್ತೆ ಮೇಲ್ಸೇತುವೆ ಗಳು ರಸ್ತೆ ಕೆಲಸ ಸೇತುವೆಗಳ ರಾಷ್ಟ್ರ ಸಮರ್ಪಣೆ ಸೇರಿದಂತೆ ಶಂಕು ಸ್ಥಾಪನೆ ಯನ್ನು ವಿಡಿಯೋ ಕನ್ಫರೆನ್ಸ್ ಮೂಲಕ ಲೋಕಾರ್ಪಣೆ ಮಾಡಿದರು.

ನಗರದ ರೈಲ್ವೆ ನಿಲ್ದಾಣ ದಲ್ಲಿ ನಡೆದ ನೈನೃತ್ಯ ರೈಲ್ವೆಯ ವಿವಿಧ ಯೋಜನೆಗಳ ಶೀಲಾನ್ಯಾಸ ಮತ್ತು ರಾಷ್ಟ್ರಕ್ಕೆ ಸಮರ್ಪಣೆಯ ಕುರಿತು ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ ರವರು ಹಲವು ಯೋಜನೆಗಳ ಕುರಿತು ಮಾತನಾಡಿದರು.

ಅಮೃತ್ ಭಾರತ್ ಸ್ಟೇಷನ್ ಸ್ಟೀಮ್ ಹಂತ 2 ರ ಅಡಿಯಲ್ಲಿ ಅಮೃತ್ ಬೋರ್ಡ್ ರಾರಾಜಿಸುವ ನೈನೃತ್ಯ ರೈಲ್ವೆ ಯಾದ್ಯಾತ 34 ನಿಲ್ದಾಣ ಗಳಲ್ಲಿ ಕರ್ನಾಟಕ ದ 28 ನಿಲ್ದಾಣ ಗಳು ಆಂಧ್ರ ಪ್ರದೇಶದ 2. ತಮಿಳುನಾಡಿನ 2. ಮತ್ತು ಗೋವಾದ 2. ನಿಲ್ದಾಣಗಳನ್ನು 801.95ಕೋಟಿ ರೂ ನವೀಕರಿಸಲು ಮತ್ತು ಆಧುನಿಕರಿಸಲು ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಶಿವಮೊಗ್ಗ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ 24 ಪಾಯಿಂಟ್ 37 ಕೋಟಿ ಸಾಗರ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ 26.44 ಕೋಟಿ ತಾಳಗುಪ್ಪ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ 27.86 ಕೋಟಿ ಅರಸಳು ರಸ್ತೆ ಮೇಲ್ ಸೇತುವೆ ಅಭಿವೃದ್ಧಿಗೆ 2.17 ಕೋಟಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯರು ಬಿ ವೈ ರಾಘವೇಂದ್ರ ಸೇರಿದಂತೆ ಹಲವು ಗಣ್ಯಾತಿಗಣ್ಯರು ಹಾಗೂ ರೈಲ್ವೆ ಇಲಾಖೆಯ ಅಧಿಕಾರಿ ವರ್ಗ ಉಪಸಿತರಿದ್ದರು.

ವರದಿ : ಸಂತೋಷ ರಾಮ್