ಅಕ್ರಮ ಗೋಸಾಗಟ ಗೋಹತ್ಯೆ ಗೋಕಳ್ಳತನ ವಿರುದ್ಧ ಜನಜಾಗೃತಿಗಾಗಿ ಆಂದೋಲನ ಮೆರವಣಿಗೆಯನ್ನು ಹಿಂದೂ ಜಾಗರಣ ವೇದಿಕೆ ಶಿವಮೊಗ್ಗ ಜಿಲ್ಲೆ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ದೇವರಾಜ್ ಅರಳಿಹಳ್ಳಿ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಭದ್ರಾವತಿ ಆರ್ಡರ್ ಬ್ರಿಡ್ಜ್ ಬಳಿ ಇರುವ ಡಾ. ಬಿಆರ್ ಅಂಬೇಡ್ಕರ್ ಪ್ರತಿಮೆಯಿಂದ ಹಿಂದೂ ಜಾಗೃತಿ ಮೆರವಣಿಗೆ ಆರಂಭಗೊಂಡು ತಾಲೂಕ ಚರಿಯ ಮುಂಭಾಗದಲ್ಲಿ ಜನಾಂದೋಲನ ಜಾಗೃತಿ ಸಭೆಯನ್ನು 29ರಂದು ಗುರುವಾರ ಬೆಳಿಗ್ಗೆ 10.30 ಕ್ಕೆ ಏರ್ಪಡಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಶಿವಮೊಗ್ಗ ಜಿಲ್ಲೆಯಲ್ಲಿ ನಿರಂತರವಾಗಿ ಗೋಹತ್ಯೆ ಅಕ್ರಮ ಗೋಗಳ ಸಾಗಾಟ ಗೋ ಕಳ್ಳತನ ನಿರಂತರವಾಗಿ ನಡೆಯುತ್ತಿದೆ.
ಭದ್ರಾವತಿಯ ಬಹುತೇಕ ಕಡೆ ಸುಮಾರು 40 ಅಕ್ರಮ ಕಾಸಾಯಿ ಖಾನೆಗಳು ತಲೆಯೆತ್ತಿದ್ದರು ಏನು ತಿಳಿಯದಂತೆ ಕಣ್ಣು ಮುಚ್ಚಿ ಕುಳಿತಿದೆ ಪೋಲಿಸ್ ಇಲಾಖೆ ಎಂದರು.
ಕಸಾಯಿ ಖಾನೆಗಳ ವಿಚಾರದಲ್ಲಿ ಪೊಲೀಸರ ಇಂಟಲಿಜೆನ್ಸಿ ಏನಾಗಿದೆ ಈ ಕಸಾಯಿ ಖಾನೆಗಳ ಹಿಂದಿರುವ ಕಾಣದ ಶಕ್ತಿ ಯಾವುದು ಎಂಬುದು ಸಮಾಜಕ್ಕೆ ತಿಳಿಯಬೇಕಿದೆ.
ಕಾರ್ಯಕರ್ತರು ಕಸಾಯಿ ಖಾನೆ ವಿಚಾರ ಪ್ರಶ್ನಿಸಿದಾಗ ಮಾಹಿತಿ ಕೊಡಿ ಕಸಾಯಿ ಖಾನೆಗಳ ಮೇಲೆ ದಾಳಿ ಮಾಡುತ್ತೇವೆ ಎಂಬುದು ಪೊಲೀಸರ ತಿ ತಿಳಿಸಿದ್ದಾರೆ.
ಯಾವುದೇ ರಾಜಕೀಯ ಪಕ್ಷ ಆಡಳಿತದಲ್ಲಿದ್ದರೂ ಸಂಪೂರ್ಣವಾಗಿ ಗೋ ಹತ್ಯೆ ನಿಲ್ಲಬೇಕು ಗೋ ಹತ್ಯೆ ನಿಲ್ಲುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದರು.
ದೇವರಾಜ್ ಅರಳಿಹಳ್ಳಿ ಜಿಲ್ಲಾ ಸಂಯೋಜಕರು ಹಿಂದೂ ಜಾಗರಣ ವೇದಿಕೆ ಶಿವಮೊಗ್ಗ ಮತ್ತು ಹಿಂದೂ ಜಾಗರಣ ವೇದಿಕೆ ಮುಖಂಡರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ವಿಶೇಷ ಪ್ರಕಟಣೆ…
ಪ್ರಮುಖವಾಗಿ ನಿಮ್ಮಲ್ಲಿ ಯಾವುದೇ ಹಸುಗಳಿಗೆ ಯಾವುದೇ ರೀತಿ ತೊಂದರೆಯಾದಲ್ಲಿ ನಮ್ಮನ್ನು ಸಂಪರ್ಕಿಸಿ.ದೇವರಾಜ್ ಅರಳಿಹಳ್ಳಿ ಜಿಲ್ಲಾ ಸಂಯೋಜಕರು ಹಿಂದೂ ಜಾಗರಣ ವೇದಿಕೆ ಶಿವಮೊಗ್ಗ. MOB : 9632319555
ವರದಿ : ಸಂತೋಷ್ ರಾಮ್
