ತೀರ್ಥಹಳ್ಳಿಯ ಮಾರಿ ಜಾತ್ರೆ ಅಂಗವಾಗಿ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಹಾಗೂ ಶ್ರೀ ಮಾರಿಕಾಂಬ ದೇವಸ್ಥಾನ ವತಿಯಿಂದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿಯನ್ನು ಮಾ.14 ರಿಂದ 17 ರವರೆಗೆ ತೀರ್ಥಹಳ್ಳಿಯ ಆಗುಂಬೆ ಪೆಟ್ರೋಲ್ ಬಂಕ್ ಬಳಿ ಇರುವ ಎಪಿಎಂಸಿ ಪಕ್ಕದ ಮೈದಾನದಲ್ಲಿ ಏರ್ಪಡಿಸಲಾಗಿದೆ.
ತಾಲೂಕಿನ ಕ್ರೀಡಾ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಶ್ರೀ ಮಾರಿಕಾಂಬೆ ಜಾತ್ರೆ ಪ್ರಯುಕ್ತ ಶ್ರೀ ಮಾರಿಕಾಂಬ ಕಪ್ 2024 ರಾಷ್ಟ್ರಮಟ್ಟದ ಪುರುಷರು ಹಾಗೂ ಮಹಿಳೆಯರ ಖೋ-ಖೋ ಪಂದ್ಯಾವಳಿ ಆಯೋಜಿಸುತ್ತಿದೆ
ಈ ಪಂದ್ಯಾವಳಿಯಲ್ಲಿ ಹೊರ ರಾಜ್ಯದ 14 ತಂಡಗಳು ಭಾಗವಹಿಸುತ್ತಿದ್ದು, 350 ಕ್ರೀಡಾಪಟುಗಳು ಆಗಮಿಸಲಿದ್ದಾರೆ. ಇದರಲ್ಲಿ ಮಹಿಳಾ ಹಾಗೂ ಪುರುಷ ತಂಡಗಳು ಇರಲಿವೆ. ಕೇರಳ, ತಮಿಳುನಾಡು, ಮುಂಬೈ ಸೇರಿದಂತೆ ವಿವಿಧ ರಾಜ್ಯಗಳ ತಂಡಗಳು ಭಾಗವಹಿಸಲಿವೆ.
ಪುರುಷರಲ್ಲಿ 1 ಲಕ್ಷರೂ. ಪ್ರಥಮ,65 ಸಾವಿರರೂ ದ್ವಿತೀಯ, ೪೦ಸಾವಿರರೂ ೩ನೇ ಹಾಗೂ ೨೦ ಸಾವಿರರೂ ೪ನೇ ಬಹುಮಾನ. ಮಹಿಳೆಯರ ವಿಭಾಗದಲ್ಲಿ 25 ಸಾವಿರರೂ ಪ್ರಥಮ, 40 ಸಾವಿರರೂ ದ್ವಿತೀಯ, 20 ಸಾವಿರರೂ ತೃತೀಯ ಹಾಗೂ 10 ಸಾವಿರರೂ ನಾಲ್ಕನೇ ಬಹುಮಾನವಾಗಿದೆ. ಇದರೊಂದಿಗೆ ಆಕರ್ಷಕ ಟ್ರೋಫಿ ಇರಲಿದೆ
50 ಲಕ್ಷರೂ. ಬಜೆಟ್‌ನಲ್ಲಿ ಅದ್ದೂರಿಯಾಗಿ ಈ ಪಂದ್ಯಾವಳಿಯನ್ನು ಆಯೋಜಿಸಿದ್ದು, ಕ್ರೀಡಾಂಗಣದಲ್ಲಿ ೨ ಸಾವಿರ ಜನರು ಕುಳಿದು ಪಂದ್ಯಗಳನ್ನು ವೀಕ್ಷಿಸುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಮಾ.14 ರ ಮಧ್ಯಾಹ್ನ ತೀರ್ಥಹಳ್ಳಿಯ ಕುಶಾವತಿ ಪಾರ್ಕ್ ಬಳಿಯಿಂದ ಮೆರವಣಿಗೆ ಹೊರಟು ಕ್ರೀಡಾಂಗಣಕ್ಕೆ ತಲುಪಲಾಗುವುದು. ಸಂಜೆ 4 ಗಂಟೆಗೆ ಪಂದ್ಯಾವಳಿಗೆ ಚಾಲನೆ ನೀಡಲಾಗುವುದು
ಸುದ್ದಿಗೋಷ್ಟಿಯಲ್ಲಿ ಪ್ರಮುಖರಾದ ಸುಧೀಂದ್ರ ಶೆಟ್ಟಿ, ಸಿ.ಕೆ. ರಮೇಶ್ ಶೆಟ್ಟಿ, ಮೋಹನಶೆಟ್ಟಿ ಮುನ್ನೂರ್, ಬೆಟಮಕ್ಕಿ ಕೃಷ್ಣಮೂರ್ತಿಭಟ್, ಸಂತೋಷ್ ಪುಜಾರಿ, ರಾಮದಾಸ ಪ್ರಭು, ನವಳ ಶಚಿಂದ್ರ ಹೆಗಡೆ ಉಪಸ್ಥಿತರಿದ್ದರು
ವರದಿ ಸಂತೋಷ್ ರಾಮ್