ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ ಸಂಕಲ್ಪ ಪತ್ರ ಕಾರ್ಯಕ್ರಮವನ್ನು ನಗರದ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದರು
2014 ರ ನಂತರ ಸ್ವಾತಂತ್ರ್ಯ ಭಾರತಕ್ಕೂ ನಂತರದ ಭಾರತಕ್ಕೂ ವ್ಯತ್ಯಾಸವಾಗಿದೆ. ಡಿಜಿಟಲ್ ಇಂಡಿಯಾ ದಿಂದಾಗಿ ಸಾಕಷ್ಟು ಬದಲಾವಣೆಯಾಗಿದೆ.ಮೂಲ ಸೌಕರ್ಯಗಳ ಅಭಿವೃದ್ಧಿ ಮಾಡಲಾಗಿದೆ ಇದರಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಹೆಸರು ಮಾಡಿದೆ ಎಸ್. ದತ್ತಾತ್ರಿ ಮಾತನಾಡಿದರು
ಗರೀಬ್ ಕಲ್ಯಾಣ ಯೋಜನೆಯು ಹೆಚ್ಚು ಜನಪ್ರಿಯವಾಗಿವೆ ಜನೌಷಧಿ ಕೇಂದ್ರ ಉತ್ತಮವಾಗಿದೆ. ವಿಶ್ವದಲ್ಲಿ 5 ನೇ ಆರ್ಥಿಕ ಶಕ್ತಿಯಾಗಿದೆ. ಹಿಂದೆನೀಡಿದ ಆಶ್ವಾಸನೆಯಲ್ಲಿ ಶೇ.99 ರಷ್ಟು ಈಡೇರಿಸಲಾಗಿದೆ.
ಸ್ವಾತಂತ್ರ್ಯ ಬಂದು 2057 ಕ್ಕೆ 100 ವರ್ಷವಾಗಲಿದೆ. ಇನ್ನು 25 ವರ್ಷಕ್ಕೆ ಅಭಿವೃದ್ಧಿಯಾಗಬೇಕೆಂಬ ಉದ್ದೇಶದಿಂದ ಸಂಕಲ್ಪ ಪತ್ರ ಮಾಡಲಾಗಿದ್ದು ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ.
ಸಮಾಜದ ಸಮಸ್ತ ಜನರಿಂದಲೂ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ ಇದರಲ್ಲಿ ಸರ್ಕಾರದ ಒಳ್ಳೆಯ ಅಂಶಗಳನ್ನು ಹಾಗೂ ಕೆಟ್ಟ ಅಂಶಗಳನ್ನು ಹೇಳಬಹುದಾಗಿದೆ. ಲಿಖಿತವಾಗಿಯೇ ಸಲಹೆನೀಡಬೇಕೆಂದಿಲ್ಲ ನಿಮ್ಮ ಮೊಬೈಲ್ ನಿಂದ ಮಿಸ್ಡ್ ಕಾಲ್ ನೀಡಿದರೆ ಪಕ್ಷದಿಂದಲೇ ಕರೆ ಮಾಡುತ್ತಾರೆ, ನಂತರ ಅಭಿಪ್ರಾಯವನ್ನು ಹೇಳಬಹುದು
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ರಾಘವೇಂದ್ರ ಬಾಳೆಬೈಲು, ಡಾ. ಅರುಣ್, ಶಿವಮೊಗ್ಗ ವಿನೋದ್ ಮತ್ತಿತರರು ಉಪಸ್ಥಿತರಿದ್ದರು
ವರದಿ ಸಂತೋಷ್ ರಾಮ್