ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ರವರಿಗೆ ಅದ್ದೂರಿಯಾಗಿ ಸ್ವಾಗತ ನೀಡಲಾಯಿತು.
ಶಿವಮೊಗ್ಗ-ಚಿಕ್ಕಮಂಗಳೂರು ಜಿಲ್ಲೆಯ ಗಡಿಭಾಗವಾದ ಕಾರೆಹಳ್ಳಿ ಗ್ರಾಮದಿಂದ ಹುಚ್ಚಿನ ದಾಸಪ್ಪ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುವುದರ ಮುಸುಂಬೆಮೂಲಕ ಶಿವಮೊಗ್ಗಕ್ಕೆ ಪ್ರಯಾಣವನ್ನು ಬೆಳೆಸಿದರು. ನಂತರ ಶಿವಮೊಗ್ಗದ ಎಂ ಆರ್ ಎಸ್ ಸರ್ಕಲ್ ನಿಂದ ಬೃಹತ್ ೈಕ್ ರ್‍ಯಾಲಿ ಮೆರವಣಿಗೆಯಲ್ಲಿ ಹೊಳೆ ಬಸ್ ಸ್ಟಾಪ್ ಹತ್ತಿರ ಯೋಗೇಶ್ ರವರು ಬೃಹತ್ ಮುಸುಂಬಿ ಹಾರವನ್ನು ಹಾಕಿದರು.ನಂತರ ಲಗನ್ ಕಲ್ಯಾಣ ಮಂದಿರ ಕಾರ್ಯಕ್ರಮ ನಡೆಯಿತು.

ನಟ ಶಿವರಾಜ್ ಕುಮಾರ್ ನೋಡಲು ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದು, ಸುಮಾರು 5 ಕಿ.ಮೀ ವರೆಗೆ ಬೈಕ್ ರ್ಯಾಲಿ ಮೂಲಕ ಪ್ರಚಾರ ನಡೆಸಿದರು. ಇನ್ನು ಅಭಿಮಾನಿಗಳನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ, ಸಾಗರ ಶಾಸಕ ಬೇಲೂರು ಗೋಪಾಲಕೃಷ್ಣ, ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ , ಭದ್ರಾವತಿ ಶಾಸಕ ಬಿಕೆ ಸಂಗಮೇಶ್, ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ, ಪ್ರಮುಖರಾದ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಡಾ.ಶ್ರೀನಿವಾಸ ಕರಿಯಣ್ಣ, ಬಿ.ಕೆ. ಮೋಹನ್, ಹೆಚ್ ಸಿ ಯೋಗೇಶ್ , ದೇವೇಂದ್ರಪ್ಪ , ಜಿ ಡಿ ಮಂಜುನಾಥ್ ,ಬಲ್ಕಿಶ್‍ಭಾನು, ರಮೇಶ್‍ಶೆಟ್ಟಿ ಶಂಕರಘಟ್ಟ, ಶಾಂತವೀರ ನಾಯಕ್, ಶಶಿಕುಮಾರ್, ಮುರುಗೇಶ್, ಸೇರಿದಂತೆ ಪ್ರಮುಖ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ