ದೇಶದ ಹಿತ ದೃಷ್ಟಿಯಿಂದ ಮತ್ತು ವಿಶ್ವದಲ್ಲಿ ಭಾರತವನ್ನು ಬಲಿಷ್ಟ ರಾಷ್ಟ್ರವನ್ನಾಗಿಸುವ ಉದ್ದೇಶದಿಂದ ಬಿಜೆಪಿಗೆ ಮತ ನಿಡಬೇಕೆಂದು ಬಿಜಿಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದರು.


ಇಂದು ಶಿವಮೊಗ್ಗ ನಗರದ ಬಾಪೂಜಿ ನಗರ, ಹೊಸಮನೆ ಸೇರಿದಂತೆ ಇತರೆ ಬಡಾವಣೆಗಳಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡಿ ಮಾತನಾಡಿದ ಅವರು, ಇದು ಕೇವಲ ವ್ಯಕ್ತಿಗತ ಚುನಾವಣೆ ಅಲ್ಲ, ರಾಷ್ಟ್ರವನ್ನು ಉದ್ದೇಶಿಸಿ ನಡೆಯುತ್ತಿರುವ ಚುನಾವಣೆಯಾಗಿದೆ. ಇದರಲ್ಲಿ ದೇಶದ ಭವಿಷ್ಯ ಅಡಗಿದೆ. ವಿಶ್ವದಲ್ಲಿಯೇ ಭಾರತ ಎತ್ತರದ ಸ್ಥಾನಕ್ಕೆ ಹೋಗಲಿದೆ. ಈ ಹಿನ್ನೆಲೆಯಲ್ಲಿ ಮೋದಿ ನಾಯಕತ್ವ ಅಗತ್ಯವಾಗಿದೆ. ಆದ್ದರಿಂದ ಮೇ .೭ರಂದು ಪ್ರತಿಯೊಬ್ಬರೂ ಕಮಲದ ಗುರುತಿಗೆ ಮತವನ್ನು ನೀಡುವ ಮೂಲಕ ನನ್ನನ್ನು ಬಾರೀ ಮತದ ಅಂತರದಿಂದ ನನ್ನನ್ನು ಆಯ್ಕೆ ಮಾಡಬೇಕೆಂದರು. ಮೂರು ಬಾರಿ ಲೋಕಸಭೆಯ ಸದಸ್ಯನನ್ನಾಗಿ ನನ್ನನ್ನು ಆಯ್ಕೆಮಾಡಿ ಲೋಕಸಭೆಗೆ ಕಳುಹಿಸಿದ್ದೀರಿ, ಈ ಅವಧಿಯಲ್ಲಿ ನಿಮ್ಮ ನಿರೀಕ್ಷೆಗೂ ಮೀರಿ ಕೆಲಸ ಮಾಡಿದ್ದೀರಿ, ಇನ್ನೂ ಸಾಕಷ್ಟು ಯೋಜನೆಗಳು ನನ್ನ ಮನಸ್ಸಿನಲ್ಲಿ ಇವೆ. ಅದನ್ನು ಮಾಡುವ ಇಚ್ಚೆ ಹೊಂದಿದ್ದೇವೆ. ನಾನು ಯಾವುದೇ ಅಭಿವೃದ್ದಿ ಕೆಲಸವನ್ನು ಹೇಳಿ ಮಾಡುವುದಿಲ್ಲ. ಮಾಡಿ ತೋರಿಸುತ್ತೇನೆ ಎಂದು ಹೇಳಿದರು.


ಕೇವಲ ಬೆರಳೆಣಿಕೆಯಷ್ಟಿದ್ದ ರೈಲು ಸಂಚಾರವನ್ನು ಇಂದು ಸಾಕಷ್ಟು ಸಂಖ್ಯೆಯಲ್ಲಿ ವಿಸ್ತರಿಸಿದ್ದೇನೆ. ವಿಮಾನ ನಿಲ್ದಾಣವನ್ನು ನಿರ್ಮಿಸಿ ವಿಮಾನಯಾನವನ್ನು ಆರಂಭಿಸಿದ್ದೇನೆ. ಗೋವಾ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಮಹಾನಗರಗಳಿಗೆ ವಿಮಾನ ಸಂಚಾರ ನಡೆಯುತ್ತಿದೆ. ಸಿಗಂಧೂರಿನಲ್ಲಿ ಅತ್ಯಂತ ಉದ್ದವಾದ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ದಿಪಡಿಸಲಾಗಿದೆ. ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ದಿಗಾಗಿ ಶ್ರಮಸಿದ್ದೇನೆ, ಜೋಗ್ ಫಾಲ್ಸ್ ಮತ್ತು ಕೊಡಚಾದ್ರಿಯಲ್ಲಿ ಕೇಬಲ್ ಕಾರುಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಇಷ್ಟೆಲ್ಲಾ ಅಭಿವೃದ್ದಿ ಕಾರ್ಯಗಳನ್ನು ಮಾಡಿರುವ ನನ್ನನ್ನು ನಾಲ್ಕನೇ ಬಾರಿ ಸಂಸತ್ತಿಗೆ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ