ಅಗತ್ಯ ಸೇವೆಯಡಿ ಬರುವ ಮತದಾರರಿಗೆ(ಎವಿಇಎಸ್) ಸಂಬಂಧಿಸಿದಂತೆ ದಿನಾಂಕ: 01-05-2024 ರಿಂದ 03-05-2024 ರವರೆಗೆ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಶಿವಮೊಗ್ಗ ತಾಲ್ಲೂಕು ಕಚೇರಿಯಲ್ಲಿ ಪಿವಿಸಿ ಸೆಂಟರ್‍ನ್ನು ತೆರೆಯಲಾಗಿದ್ದು, ಈ ಕೇಂದ್ರದಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸದರಿ ದಿನಾಂಕಗಳಂದು ಎವಿಇಎಸ್ ವರ್ಗದಡಿ ಬರುವ ಅನುಮೋದಿತ ಮತದಾರರು ಮತದಾನ ಮಾಡುವಂತೆ ಜಿಲ್ಲಾಧಿಕಾರಿಗಳು ಹಾಗೂ 14-ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜಿಲ್ಲಾ ಚುನಾವಣಾಧಿಕಾರಿಗಳಾದ ಗುರುದತ್ತ ಹೆಗಡೆ ತಿಳಿಸಿದ್ದಾರೆ.