ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕೌಟೆಂಟ್  ಚಂದ್ರಶೇಖರ್ ಅವರ ಮನೆಗೆ ಭೇಟಿ ನೀಡಿದರು.

ನನಗೆ ಬರುವ ಹನ್ನೆರಡು ಸಾವಿರ ಸಂಬಳದಲ್ಲಿ ಹೇಗೆ ಜೀವನ‌ ನಡೆಸಲು ಸಾಧ್ಯ ಎಂದು ಪತ್ನಿ ಕವಿತಾ ನೋವು ತೋಡಿಕೊಂಡರು. ಜೀವನಕ್ಕೆ ಆಧಾರವಾಗಿದ್ದ ನನ್ನ ಗಂಡ ನೇಣಿಗಿ ಶರಣಾಗಿದ್ದಾರೆ. ಗಂಡನ ಸಾವಿಗೆ ನ್ಯಾಯ ಒದಿಗಿಸಬೇಕು ಎಂದು ಸಚಿವರು ಎದುರು ನೋವು ಹೇಳಿಕೊಂಡರು.

ಸರ್ಕಾರ ನಿಮ್ಮ ಜೊತೆ ಇರುತ್ತದೆ. ನ್ಯಾಯ ಕೊಡಿಸಲು ನಾವು ನಿಮ್ಮೊಟ್ಟಿಗೆ ಇರುತ್ತೇವೆ. ಮಕ್ಕಳ ಮುಂದಿನ ಓದಿಗೆ ಸಹಕಾರ ಇರುತ್ತದೆ ಎಂದು ಸಚಿವರು ಹೇಳಿದರು.

ಮಕ್ಕಳ ಬಗ್ಗೆ ಚಿಂತೆ ಬೇಡ ನಾವು ನಿಮ್ಮ ಜೊತೆಗಿದ್ದೇವೆ. ನ್ಯಾಯ ಕೊಡಿಸಲು ನಾವು ನಿಮ್ಮ ಜೊತೆ ಇದ್ದೇವೆ. ವಿಶ್ವಾಸ ಇಟ್ಟುಕೊಳ್ಳಿ ಸರ್ಕಾರ ನಿಮ್ಮ ಜೊತೆ ಇದೆ. ಮುಖ್ಯಮಂತ್ರಿಗಳು ಕಳಿಸಿದ್ದಾರೆ ಹಾಗಾಗಿ ಬಂದಿದ್ದೇನೆ ಎಂದು ಸಚಿವರು ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿರಿದ್ದರು.

ವರದಿ ಪ್ರಜಾ ಶಕ್ತಿ