ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸಾರಥಿ ಸ್ವಾವಲಂಬಿ ಯೋಜನೆ ಅಡಿಯಲ್ಲಿ ನಾಲ್ಕು ಚಕ್ರದ ಸುಮಾರು ಹತ್ತು ಲಕ್ಷ ರೂ ಬೆಲೆ ಬಾಳುವ ವಾಹನವನ್ನು ಖರೀದಿ ಮಾಡಲು 4. ಲಕ್ಷ ರೂಪಾಯಿಗಳನ್ನು ಸಬ್ಸಿಡಿಯಾಗಿ ನೀಡಲಿದ್ದು ಹಾಗೂ 6 ಲಕ್ಷ ರೂ ಉಳಿದ ಹಣವನ್ನು ಫಲಾನುಭವಿಗಳು ತಿಂಗಳಿಗೆ 8500 ಬ್ಯಾಂಕಿಗೆ ಕಟ್ಟುವ ಯೋಜನೆಗೆ ಚಾಲನೆ ನೀಡಲಾಯಿತು.

ಈ ಯೋಜನೆಗೆ ಆಯ್ಕೆಯಾದಂತಹ ಶಿವಮೊಗ್ಗ ನಗರದ ರಾಗಿಗುಡ್ಡ ನಿವಾಸಿ ಎಚ್ಎಮ್ ಮಹಾದೇವ ಅವರಿಗೆ  ದಿನ ಬೈಪಾಸ್ ರಸ್ತೆಯಲ್ಲಿರುವ ಶಕ್ತಿ ಟೊಯೋಟಾ ಶೋರೂಮಿನಲ್ಲಿ Toyota glanza ಕಾರಿನ ಕೀಯನ್ನು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಗಿದ್ದಂತಹ ಶ್ರೀಯುತ H. C ಯೋಗೇಶ್ ಅವರು ನೀಡಿದರು.ಈ ಸಂದರ್ಭದಲ್ಲಿ ಶಿವಮೊಗ್ಗ ಉತ್ತರ ಕಾಂಗ್ರೆಸ್ ಅಧ್ಯಕ್ಷರಾದ ಎಂಎಸ್ ಶಿವಕುಮಾರ್ ಮುಖಂಡರಾದ ಮಧು ಶಿವಮೊಗ್ಗ ನಗರ ಪ್ರವಾಸಿ ಕಾರಿನ ನಿಲ್ದಾಣದ ಚಾಲಕರಾದ ಶ್ರೀ ಸದಾನಂದ , ಡ್ಯಾನಿಯಲ್ ಡಿಸೋಜ, K T ನವೀನ್ ಕುಮಾರ್ ಶಾಂತಿನಗರದ ನಿವಾಸಿಗಳಾದ ನವೀನ್ ಕುಮಾರ್ ಶಕ್ತಿ ಟೊಯೋಟಾ ಶೋರೂಮಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ