ಎನ್.ಸಿ.ಸಿ.ಯು ದೇಶಾದ್ಯಂತ ತನ್ನ ಸಂಖ್ಯಾಬಲವನ್ನು ವಿಸ್ತರಿಸುವ ಉದ್ದೇಶವನ್ನು ಹೊಂದಿದ್ದು, ಅದರ ಪ್ರಯುಕ್ತ ಹೆಚ್ಚುವರಿ ತರಬೇತಿ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಮಾಜಿ ಸೈನಿಕರನ್ನು ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಿದೆ.
20 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಶಿವಮೊಗ್ಗ ಘಟಕವು 05 ಹವಾಲ್ದಾರ್ (ಭೂದಳ) ಹಾಗೂ 03 ಜೆ.ಸಿ.ಪಿ (ಭೂದಳ) ಗಳನ್ನು ಹೊರಗುತ್ತಿಗೆ ಆಧಾರದ ಮೇಲೆ 2 ವರ್ಷಗಳ ಅವಧಿಗೆ ನೇಮಿಸಿಕೊಳ್ಳಲು ಉದ್ದೇಶಿಸಲಾಗಿದ್ದು, ಆಸಕ್ತ ಮಾಜಿ ಸೈನಿಕರು ಶಿವಮೊಗ್ಗದ 20 ಕರ್ನಾಟಕ ಬೆಟಾಲಿನ್ ಎನ್.ಸಿ.ಸಿ ಘಟಕದ ಸುಬೇದಾರ್ ಮೇಜರ್ ರವರಿಗೆ 15 ಆಗಸ್ಟ್ 15 ರೊಳಗಾಗಿ ಸ್ವವಿವರಗಳುಳ್ಳ ಅರ್ಜಿಯನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೆಶಕ ಡಾ. ಸಿ.ಎ. ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಸೇನೆಯಿಂದ ನಿವೃತ್ತಿ ಪಡೆದು 2 ವರ್ಷ ಮೀರಿರಬಾರದು ಹಾಗೂ ಸೇನೆಯಲ್ಲಿ ಯಾವುದೇ ಒಂದು ವಿಷಯ ಕುರಿತ ಸೇನಾ ಕೋರ್ಸ್ನಲ್ಲಿ ತರಬೇತಿ ಪಡೆದಿರಬೇಕು (ನಿಗದಿತ ಕೋರ್ಸ್ಗಳ ಪಟ್ಟಿಯು ಎನ್.ಸಿ.ಸಿ ಘಟಕದಲ್ಲಿ ಲಭ್ಯವಿರುತ್ತದೆ). ಸೈನ್ಯದಲ್ಲಿ ದುರ್ನಡತೆ ಸಲುವಾಗಿ ಮತ್ತು ಯಾವುದೇ ವೈದ್ಯಕೀಯ ಕಾರಣಗಳಿಂದ ಸೈನ್ಯದಿಂದ ಬಿಡುಗಡೆಗೊಂಡಿರಬಾರದು ಹಾಗೂ ಸೇನೆಯಲ್ಲಿ ತಮ್ಮ ಪದನಾಮಕ್ಕೆ ತಕ್ಕಂತೆ ಪೂರ್ಣ ಸೇವೆಯನ್ನು ಸಲ್ಲಿಸಿ ನಿವೃತ್ತಿಯನ್ನು ಹೊಂದಿರಬೇಕು.
ಇನ್ನಿತರೆ ಷರತ್ತುಗಳಿಗೆ 20 ಕರ್ನಾಟಕ ಬೆಟಾಲಿನ್ ಎನ್.ಸಿ.ಸಿ ಘಟಕದಲ್ಲಿ ಲಭ್ಯ ವಿಸ್ತಾರವಾದ ಪ್ರಸ್ತಾವನೆಯನ್ನು ಅನುಸರಿಸಲು ಸೂಚಿಸಿದೆ.
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗದ 20 ಕರ್ನಾಟಕ ಬೆಟಾಲಿನ್ ಎನ್.ಸಿ.ಸಿ ಘಟಕವನ್ನು ಖುದ್ದಾಗಿ ಅಥವಾ ಸುಬೇದಾರ್ ಮೇಜರ್ ರವರ ಮೊಬೈಲ್ ಸಂಖ್ಯೆ 8825067694 ಯನ್ನು ಸಂಪರ್ಕಿಸಬಹುದಾಗಿದೆ.