ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಮಧು ಬಂಗಾರಪ್ಪನವರು ವಿಧಾನಸೌಧದಲ್ಲಿ “ಕಸ್ತೂರಿ ರಂಗನ್ ವರದಿ”ಗೆ ಸಂಭಂದಿಸಿದಂತೆ ನಡೆದ ಸಚಿವ ಸಂಪುಟ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಸುದೀರ್ಘವಾಗಿ ಚರ್ಚಿಸಿದರು .

ಡಾ.ಕೆ ಕಸ್ತೂರಿ ರಂಗನ್ ನೇತೃತ್ವದ ತಂಡವು “ಪಶ್ಚಿಮ ಘಟಕ್ಕೆ” ಸಂಬಂಧಿಸಿದಂತೆ ನೀಡಿರುವ ವರದಿ ಮತ್ತು ಕೇಂದ್ರ ಸರ್ಕಾರ ಹೊರಡಿಸಿದ ಕರಡು ಅಧಿಸೂಚನೆಯ ಅನುಕೂಲ ಮತ್ತು ಅನಾನುಕೂಲಗಳ ಕುರಿತು ಸಮಗ್ರವಾಗಿ ಚರ್ಚಿಸಿ, ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ಸಚಿವ ಸಂಪುಟ ಸದಸ್ಯರಾದ ಶ್ರೀ ಈಶ್ವರ್ ಖಂಡ್ರೆ, ಶ್ರೀ ಕೆ.ಜೆ ಜಾರ್ಜ್, ಶ್ರೀ ಹೆಚ್.ಸಿ ಮಹದೇವಪ್ಪ, ಶ್ರೀ ಡಾ. ದಿನೇಶ್ ಗುಂಡೂರಾವ್, ಶ್ರೀ ಮಂಕಾಳ ವೈದ್ಯ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿವರದಿ ಪ್ರಜಾ ಶಕ್ತಿ