ಶಿವಮೊಗ್ಗ ನಗರದ ಶಾಸಕರ ಕಚೇರಿಯಲ್ಲಿ 29ರ ಗುರುವಾರ ಸಂಜೆ ಸಭೆ ಸೇರಿದ್ದು ಸಭೆಯಲ್ಲಿ, ನಗರದ ಶಾಸಕರಾದ ಚನ್ನಬಸಪ್ಪ ನವರು, ಸೂಡಾ ಆಯುಕ್ತರು ಮತ್ತು ನಾಗರಿಕ ವೇದಿಕೆ ಪ್ರಮುಖರು ಚರ್ಚೆ ನಡೆಸಿದರು.
ಸೂಡಾ ಪ್ರಾಧಿಕಾರದ ಆವರಣದಲ್ಲಿ ಅತಿಕ್ರಮಿಸಿರುವ ಶೆಡ್ ಮೊದಲಿನಿಂದಲೂ ಸಾರ್ವಜನಿಕ ರಸ್ತೆ ಎಂಬ ಎಲ್ಲಾ ದಾಖಲೆಗಳನ್ನು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟದ ಪದಾಧಿಕಾರಿಗಳು ತೋರಿಸಿದರು.ಇದನ್ನು ಗಮನಿಸಿದ ಶಾಸಕರು ಹಾಗೂ ಆಯುಕ್ತರು, ಶಿವಮೊಗ್ಗ ಮಹಾನಗರ ಯೋಜನೆ ಮತ್ತು ವಿನೋಬಾ ನಗರ ಎರಡನೆಯ ಹಂತದ ನಕ್ಷೆ ದಾಖಲೆಗಳಿಗೆ ಅನುಗುಣವಾಗಿ ಇದೇ ತಿಂಗಳ 31ರಂದು ನಡೆಯಲಿರುವ ಸೂಡ ಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇವೆಂದು ಭರವಸೆ ನೀಡಿದರು.
ಶಾಸಕರ ಆಶ್ವಾಸನೆ ಮೇರೆಗೆ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟವು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದೆ.
ಈ ಸಭೆಯಲ್ಲಿ ಕೆವಿ ವಸಂತ್ ಕುಮಾರ್, ಡಾ. ಎ.ಸತೀಶ್ ಕುಮಾರ್ ಶೆಟ್ಟಿ, ಅಶೋಕ್ ಕುಮಾರ್, ಜನ್ಮೇಜಿರಾವ್, ಇಕ್ಬಾಲ್ ನೇತಾಜಿ, ಸೀತಾರಾಮ್, ರಾಜು, ಶ್ರೀಕಾಂತ್, ನಾಗರಾಜ್ ಸುಬ್ರಹ್ಮಣ್ಯ, ಪ್ರಕಾಶ್, ಸುಬ್ರಮಣ್ಯ, ಕೇಶವಮೂರ್ತಿ, ಚನ್ನವೀರಪ್ಪ ಗಾಮನಗಟ್ಟಿ, ಇನ್ನು ಹಲವರು ಉಪಸ್ಥಿತರಿದ್ದರು.