ಲಾಫಿಂಗ್ ಬುದ್ಧ ಚಿತ್ರಕ್ಕೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಪ್ರಮೋದ್ ಶೆಟ್ಟಿ ನಟನೆಯ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ರವರು ನಿರ್ಮಾಣ ಮಾಡಿದ್ದಾರೆ. ಭರತ್ ರಾಜ್ ರವರು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಬಹು ತರಂಗಣದಲ್ಲಿ ದಿಗಂತ್ ತೇಜು ಬೆಳವಾಡಿ ಮುಖ್ಯವಾದ ಪಾತ್ರದಲ್ಲಿ ನಿರ್ವಹಿಸಿದ್ದಾರೆ.

ಚಿತ್ರಕ್ಕೆ ಸಂಗೀತ ವಿಷ್ಣು ವಿಜಯ್ ರವರು ನೀಡಿದ್ದಾರೆ. ಚಿತ್ರದ ಬಹುಪಾಲು ಚಿತ್ರೀಕರಣವು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಆಸಕ್ತರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರ ನೋಡಿದ ಪ್ರೇಕ್ಷಕರು ಚಿತ್ರ ಉತ್ತಮವಾಗಿ ಮೂಡಿ ಬಂದಿದೆ ಎಂದಿದ್ದಾರೆ. ಪ್ರಮೋದ್ ಶೆಟ್ಟಿ ರವರು ಉತ್ತಮವಾಗಿ ಪೊಲೀಸ್ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಕುಟುಂಬ ಸಮೇತ ನೋಡುವ ಚಿತ್ರ ಎಂದರು. ಶಿವಮೊಗ್ಗದ ಬ್ಯಾರಿ ಮಾಲ್ ನಲ್ಲಿರುವ ಭಾರತ್ ಸಿನಿಮಾಸ್ ನಲ್ಲಿ ಚಿತ್ರ ಪ್ರದರ್ಶನವಾಗುತ್ತಿದೆ.

ವರದಿ ಪ್ರಜಾ ಶಕ್ತಿ