ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಬಾಂಗ್ಲಾದೇಶದಿಂದ ಬಂದು ಸ್ಥಳೀಯವಾಗಿ ಕಟ್ಟಡ ಕೆಲಸ ಮಾಡುತ್ತಿರುವುದು ವಿಷಯ ತಿಳಿದಿದೆ. ಇದೀಗ ಶಿವಮೊಗ್ಗ ನಗರದಲ್ಲಿ 7 ಜನರು ದಾಖಲಾತಿ ಇಲ್ಲದವರು ಪತ್ತೆಯಾಗಿದ್ದು ಇವರೆಲ್ಲರೂ ಬಾಂಗ್ಲಾ ದೇಶದಿಂದ ಬಂದವರು ಎಂಬ ಮಾಹಿತಿ ದೊರೆತಿದೆ.
ಜಯನಗರ ಪೊಲೀಸ್ ಇನ್ಸ್ಪೆಕ್ಟರ್ ಸಿದ್ದೇಗೌಡರ ನೇತೃತ್ವದಲ್ಲಿ ದಾಳಿ ನಡೆದಿದ್ದು ಸವಳಂಗ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕಟ್ಟಡದ ಕೆಲಸಕ್ಕಾಗಿ ಕಾರ್ಮಿಕರು ಬಂದಿದ್ದ 7 ಜನರನ್ನ ಬಾಂಗ್ಲಾ ದೇಶಿಗರೆಂದು ದೃಢಪಟ್ಟಿದೆ.
ದಾಳಿಯ ವೇಳೆಯಲ್ಲಿ ಪೂರ್ಣ ದಾಖಲಾತಿ ಇಲ್ಲದವರನ್ನು ಠಾಣೆಗೆ ಕರೆಸಲಾಗಿದೆ. ವಿಚಾರಿಸ್ದಾಗ ಇವರಲ್ಲಿ ದಾಖಲಾತಿಗಳಿಲ್ಲವೆಂದು ತಿಳಿದು ಬಂದಿದೆ. ಕರಾವಳಿ ಮಂಗಳೂರು ಜಿಲ್ಲೆಯ ಅಡ್ರೆಸ್ ಹೊಂದಿರುವ ಆಧಾರ ಕಾರ್ಡ್ ಇವರ ಬಳಿ ಇರುವುದು ವಿಚಾರಿಸಿದಾಗ ಪತ್ತೆಯಾಗಿದೆ.