ಸುಧಾಕರ್ 55 ವರ್ಷ ಹೊಸನಗರ ಗ್ರಾಮದವರು ತಮ್ಮ BAJAJ CT100 ದ್ವಿಚಕ್ರ ವಾಹನವನ್ನು ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ 9ನೇ ಮೈಲಿಗಲ್ಲಿನ ಹತ್ತಿರ ನಿಲ್ಲಿಸಿದರು.
ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಪೊಲೀಸ್ ಠಾಣೆಗೆ ದೂರು
ನೀಡಿರುತ್ತಾರೆ ಪ್ರಕರಣದಲ್ಲಿ ಕಳುವಾದ ದ್ವಿಚಕ್ರ ವಾಹನ ಮತ್ತು ಆರೋಪಿಗಳ ಪತ್ತೆಗಾಗಿ ಮಿಥುನ್ ಕುಮಾರ್ ಜಿ ಕೆ, ಮಾನ್ಯ ಪೋಲಿಸ್ ಶ್ರೀ ಅನಿಲ್ ಕುಮಾರ್ ಭೂಮಾ ರೆಡ್ಡಿ, ಶ್ರೀ ಕರಿಯಪ್ಪ ಎ ಜಿ, ಶ್ರೀ ಗಜಾನನ ವಾಮನ ಸುತಾರ, ಪೊಲೀಸ್ ಉಪಾಧೀಕ್ಷಕರು, ತೀರ್ಥಹಳ್ಳಿ ಶ್ರೀ ಗುರಣ್ಣ ಹೆಬ್ಬಾರ್ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಹೊಸನಗರ ವೃತ್ತಿ ರವರು ಶ್ರೀ ಪ್ರವೀಣ್ ಪೊಲೀಸ್ ಉಪನಿರೀಕ್ಷಕರು ರಿಪ್ಪನ್ ಪೇಟೆ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ
ಸಿ. ಎಚ್.ಸಿ.ಚನ್ನಪ್ಪ ಮತ್ತು ಸಿಪಿಸಿ ಸಂತೋಷ್ ರವರಗಳನ್ನೊಳಗೊಂಡ ಇವರುಗಳೆಲ್ಲ ಸೇರಿ ಆರೋಪಿಗಳಾದ ಸಾದಿಕ್ ವುಲ್ಲಾ ಚಮಟಿ ,21 ವರ್ಷ ಅಣ್ಣ ನಗರ ಶಿವಮೊಗ್ಗ ಮತ್ತು ವಿವೇಕ್ @ಸಿದ್ದು 23 ವರ್ಷ ಅಣ್ಣ ನಗರ ಶಿವಮೊಗ್ಗ, ಇವರನ್ನು ದಸ್ತಗಿರಿ ಮಾಡಿ ಆರೋಪಿಗಳಿಂದ ಅಂದಾಜು ಮೌಲ್ಯ 25,000/- ರೂಗಳ BAJAJ CT-100 ದ್ವಿಚಕ್ರ ವಾಹನವನ್ನ ಆಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.

ತನಿಖೆ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೋಲೀಸ್ ಅಧಿಕ್ಷಕರು ಶಿವಮೊಗ್ಗ ಜಿಲ್ಲೆಯವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ .

ವರದಿ ಪ್ರಜಾ ಶಕ್ತಿ