ಶಿವಮೊಗ್ಗದ ಸಮೀಪವಿರುವ ಅಲೆಮಾರಿ ಜನಾಂಗದ ಟೆಂಟ್ ಮಕ್ಕಳಿಗೆ ಕೋವಿಡ್ ಸಂದರ್ಭದಲ್ಲಿ ಕಲಿಕೆಗೆ ಪೂರಕವಾಗುವಂತೆ ಮಕ್ಕಳು ವಿವಿಧ ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿ, ಅಲೆಮಾರಿ ಜನಾಂಗ ಪರ ಹೋರಾಟಗಾರರ ನೇತತ್ವದಲ್ಲಿ ಶ್ರೀ ಜಾರ್ಜ್ ಮತ್ತು ಸಮಾನ ಮನಸ್ಕ ಶಿಕ್ಷಕಿಯರಾದ ಶ್ರೀಮತಿ ಮೇರಿ ಡಿಸೋಜಾ ರವರು ಈ ಮಕ್ಕಳಿಗೆ ಸುಲಭವಾಗಿ ಚಿತ್ರಕಲೆ ಬರೆಯುವುದು ಬಣ್ಣ ಹಾಕುವುದು ಹಾಗೂ ತ್ಯಾಜ್ಯವಸ್ತುಗಳ ಮರುಬಳಕೆ ಮಾಡಿಕೊಂಡು, ಉಪಯುಕ್ತ ವಸ್ತುಗಳ ತಯಾರಿಕೆ ಮಾಡುವುದು, ಬಣ್ಣದ ಕಾಗದದಿಂದ ಹೂ ತಯಾರಿಕೆಯನ್ನು ಮಾಡುವುದು , ಇನ್ನೂ ವಿವಿಧ ವಸ್ತುಗಳ ಪುನರ್ ಬಳಕೆ ಹೇಗೆ ಮಾಡುವುದು ಎಂದು ತಿಳಿಸಿಕೊಟ್ಟರು. ಹಾಗೂ ಶಿಕ್ಷಕಿಯಾದ ಶ್ರೀಮತಿ. ಅನಿತಾ ಕೃಷ್ಣರವರು ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ, ಕೋವಿಡ್ ಬಗ್ಗೆ ಮುಂಜಾಗ್ರತೆ ಕ್ರಮ ಹಾಗೂ ನಿಯಮ ಪಾಲಿಸುವಂತೆ ಅರಿವು ಮೂಡಿಸಿದರು.ಸ್ವಾತಂತ್ರ್ಯ ದಿನಾಚರಣೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮಕ್ಕಳಿಗೆ ದೇಶಪ್ರೇಮದ ಬಗ್ಗೆ ತಿಳಿಸಿದರು. ದೇಶಭಕ್ತಿಗೀತೆಯನ್ನು ಹೇಳಿಕೊಟ್ಟರು ಮಕ್ಕಳಿಗೆ ಡ್ರಾಯಿಂಗ್ ಹಾಳೆಗಳು ಕ್ರೆಯಾನ್ಸ್ ಬಣ್ಣದ ಪೇಪರ್ ಪೇಂಟ್, ಬ್ರಶ್ ಹಾಗೂ ಮಾಸ್ಕ್ ವಿತರಿಸಿದರು. ಶ್ರೀ ಚಾರ್ಜ್ ರವರು ಈ ಅಲೆಮಾರಿ ಜನಾಂಗದ ಪರವಾಗಿ ಸುಮಾರು 40 ವರ್ಷಗಳಿಂದ ಹೋರಾಟ ನಡೆಸಿದರು. ಸರ್ಕಾರದಿಂದ ಅವರಿಗೆ ಆಧಾರ ಕಾರ್ಡ್, ರೇಷನ್ ಕಾರ್ಡ್, ವೋಟರ್ ಕಾರ್ಡ್, ಸೌಲಭ್ಯ ದೊರಕಿಸಿ ಕೊಟ್ಟರು.ಇಲ್ಲಿನ ಮಕ್ಕಳು ಸರ್ಕಾರಿ ಶಾಲೆಗಳಿಗೆ, ಇನ್ನೂ ಕೆಲವರು ಖಾಸಗಿ ಶಾಲೆಗಳಲ್ಲಿ ಉಚಿತವಾಗಿ ವ್ಯಾಸಂಗ ಮಾಡುತ್ತಿದ್ದಾರೆ . ಕೆಲವು ಮಕ್ಕಳು ರಂಗಾಯಣದ ಶಿಬಿರಕ್ಕೆ ಹೋಗಿ ತರಬೇತಿ ಪಡೆಯುತ್ತಿದ್ದಾರೆ, ಸಂಗೀತ ಕಲೆಗಳಲ್ಲಿ ಆಸಕ್ತಿ ಹೊಂದಿದ್ದಾರೆ, ಕ್ರೀಡೆಯಲ್ಲೂ ಮುಂದಿದ್ದಾರೆ. ಶ್ರೀ ಜಾರ್ಜ್ ರವರು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ ಈ ಅಲೆಮಾರಿ ಜನಾಂಗವು ಟೆಂಟ್ ನಲ್ಲಿ ವಾಸಿಸುತ್ತಿದ್ದು ಇವರಿಗೆ ಶಾಶ್ವತ ಸೂರು ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನದಲ್ಲಿದ್ದಾರೆ, ಇವರಿಗೆ ಸರಕಾರದಿಂದ ಶಾಶ್ವತ ಮನೆ ವ್ಯವಸ್ಥೆ ದೊರೆಯುವಂತಾಗಲಿ, ಶ್ರೀ ಜಾರ್ಜ್ ರವರದ್ದು ನಿಸ್ವಾರ್ಥ ಸೇವೆ ನಿರಂತರ ಹೋರಾಟವನ್ನು ಗುರುತಿಸಿ ಈಗಿನ ಪದವಿ ಶಿಕ್ಷಣದ ಪಠ್ಯಪುಸ್ತಕದಲ್ಲಿ “The Real Master ” ಶೀರ್ಷಿಕೆಯ ಪಾಠವನ್ನು ಅಳವಡಿಸಿಕೊಳ್ಳಲಾಗಿದೆ. ಅಲ್ಲಿನ ಮಕ್ಕಳು ನಮಗೆ ದೇವರು ಎಂದರೆ “ಜಾರ್ಜ್ ಅಂಕಲ್ “ಎನ್ನುತ್ತಾರೆ. ಪ್ರತಿ ತಿಂಗಳಿಗೆ 2 ಬಾರಿ ಈ ಮಕ್ಕಳನ್ನು ಭೇಟಿ ಮಾಡಿ ಒಂದಿಷ್ಟು ಕಲಿಸುವ ಅವರನ್ನು ಪ್ರೇರೇಪಿಸುವ ಸಾಮಾಜಿಕವಾಗಿ ಸದೃಢರನ್ನಾಗಿಸುವ ಯೋಚನೆ ಮತ್ತು ಯೋಜನೆಯನ್ನು ಹೊಂದಿದ್ದಾರೆ.

LIC policy ಗಾಗಿ ಸಂಪರ್ಕಿಸಿ 9538615354

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153