ಸಚಿವ ಕೆ.ಎಸ್ ಈಶ್ವರಪ್ಪ ನವರ ಮುಂದೆ ಶಾಸಕ ಆಯನೂರು ಮಂಜುನಾಥ್ ಅವರ ಹೈಡ್ರಾಮ ನಡೆದಿದೆ. ನಾವೇನು ಶಾಸಕರಲ್ಲವೇನು? ಮಷ್ಕಿರಿ ಮಾಡ್ತೀರಾ? ಎಂದು ‌ವೇದಿಕೆಯ ಮೇಲೆದ್ದು ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆಯಿತ್ತಿದ್ದ ಸಭೆಯಲ್ಲಿ ಭಾಗಿಯಾಗಿದ್ದ ಆಯನೂರು ಮಂಜುನಾಥ್ ವಿಧಾನ ಪರಿಷತ್ ಸದಸ್ಯರನ್ನ ಕಡೆಗಣಿಸಲಾಗುತ್ತಿದೆ ಎಂದು ಎಂದ್ದು ವಿರೋಧ ವ್ಯಕ್ತಪಡಿಸಿದ್ದಾರು ಇಂದು ಕೋವಿಡ್ ಮತ್ತು ಪ್ರವಾಹಕ್ಕೆ ಸಂಭಂದಿಸಿದ ಸಭೆ ನಡೆಯಿತ್ತಿತ್ತು. ಎಲ್ಲಾ ತಾಲೂಕುಗಳಿಂದ ಅಧಿಕಾರಿಗಳ ಸಮ್ಮಖದಲ್ಲಿ ಸಭೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಗಲಾಟೆ‌ ಮಾಡಿದ ಎಂಎಲ್ ಸಿ ಆಯನೂರು ಮಂಜುನಾಥ್ ತಮ್ಮ ಜೊತೆ ಎಂಎಲ್ ಸಿ ರುದ್ರೇಗೌಡರನ್ನ ಹಾಗೂ ಆರ್ ಪ್ರಸನ್ನ ಕುಮಾರ್ ಅವರನ್ನ ಕರೆದುಕೊಂಡು ವೇದಿಕೆ ಮುಂಭಾಗ ಬಂದು ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಘಟನೆಯ‌‌ ಕಾರಣ… ಜಿಲ್ಲಾಧಿಕಾರಿಗಳ ಸಭೆ ಅಥವಾ ತಾಲೂಕಿನ ಆಡಳಿತದಲ್ಲಿ ನಡೆಯುವಲ್ಲಿ ಸಭೆಗೆ ಆಹ್ವಾನ ಸಿಗೋದಿಲ್ಲ. ಅದರ ಬಗ್ಗೆ ಮಾಹಿತಿ‌ ಕೊಡೋದಿಲ್ಲವೆಂದು ಆಯನೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರಿಗಾದರು ಅನುಧಾನ ಕೊಟ್ಟರೆ ಮಾಹಿತಿ‌ ನೀಡೋದಿಲ್ಲ. ಪರಿಹಾರ ಧನ ನೀಡಿದ್ರೆ ನಮಗೆ ಮಾಹಿತಿ ಸಿಗೋದಿಲ್ಲ.ನಾವೇನು ನಿಮಗೆ ಶಾಸಕರ ರೀತಿ ಕಾಣಿಸೋದಿಲ್ವಾ? ಸಾಗರ ಶಾಸಕ ಹರತಾಳು ಹಾಲಪ್ಪ, ಡಿ.ಸಿ‌ ಶಿವಕುಮಾರ್, ಸಭೆಯಲ್ಲಿ ಉಪಸ್ಥಿತಿರಿರುವ ವೇಳೆ ಎಂಎಲ್‌ಸಿ ರುದ್ರೇಗೌಡರು, ಎಂಎಲ್ ಸಿ ಪ್ರಸನ್ನ ಕುಮಾರ್ ರನ್ನು ಕರೆದುಕೊಂಡು ಹೋದ ಆಯನೂರು ಮಂಜುನಾಥ್. ಸಭೆಯ ಮುಂಭಾಗದ ಸಭಾಂಗಣಕ್ಕೆ ಹೋಗಿ ಹೈ ಡ್ರಾಮ ನಡೆಸಿದ್ದಾರೆ‌. ಕೆಲವು ಶಾಸಕರಿಗೆ ಮಾತ್ರ ಜನರಿದ್ದಾರೆ ಎಂದು ಭಾವಿಸ ಬೇಡಿ ನಮ್ಮ ಹಿಂದೆಯೂ ಜನರಿದ್ದಾರೆ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು .

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ