ಸಾಗರ : ಇಲ್ಲಿನ ಜೋಗ-ಕಾರ್ಗಲ್ ಸಮೀಪದ ಅರಳಗೋಡು ರಸ್ತೆ ತಿರುವಿನಲ್ಲಿ ಮಂಗಳೂರಿನಿಂದ ಜೋಗ ಬಂದಿದ್ದ ಪ್ರವಾಸಿ ಬಸ್ಸು ಅಪಘಾತವಾಗಿದೆ.
ಅರಳಗೋಡು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಪಲ್ಟಿ ಹೊಡೆದಿದೆ.
ಬಸ್ಸಿನಲ್ಲಿ ಸುಮಾರು 55 ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ.
ಬಸ್ಸಿನಲ್ಲಿದ್ದ 20 ಕ್ಕೂ ಜನರಿಗೆ ತೀವ್ರತರವಾದ ಗಾಯವಾಗಿದ್ದು,ಗಾಯಾಳುಗಳನ್ನು ಕಾರ್ಗಲ್ ಆಸ್ಪತ್ರೆಗೆ ಹಾಗೂ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.
ಸಾಗರ ಶಾಸಕರಾದ ಬೇಳೂರು ಗೋಪಾಲಕೃಷ್ಣ ಮತ್ತು ಕಾರ್ಗಲ್ ಸಾಧಿಕ್ ಸ್ನೇಹಿತರ ಸಹಕಾರದೊಂದಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ.
ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾಸಿದ್ದಾರೆ.
ಬಸ್ಸಿನಲ್ಲಿದ್ದವರೆಲ್ಲರೂ ಬಿಸಿ ರೋಡ್ ಷಂಬೂರ್ ಸಾಯಿ ಮಂದಿರದ ವತಿಯಿಂದ ಟೂರಿಸ್ಟ್ ಪ್ಯಾಕೇಜ್ ನಲ್ಲಿ ಆಗಮಿಸಿದ್ದರು. ಮುಂಚೆಯಿಂದಲೂ ಶಾಸಕರು ಮಾನವೀಯತೆ ಕಾರ್ಯಗಳಿಗೆ ಹೆಸರಾದವರು. ಮುಂದೆಯೂ ಸಹ ಹೀಗೆ ಮಾನವೀಯತೆ ಕಾರ್ಯಗಳನ್ನು ಮುಂದುವರೆಯಲಿ.