ಹೊಸನಗರ ತಾಲ್ಲೂಕಿನ ಬೆಳ್ಳೂರಿನಲ್ಲಿ ನಿನ್ನೆ ಮದುವೆ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಕೋವಿಡ ನಿಯಮಾವಳಿಗಳನ್ನು ಅನುಸರಿಸದೆ ಮುನ್ನೂರು ಜನ ಸೇರಿರುವ ಮಾಹಿತಿ ಇದೆ. ಎಲ್ಲ ಪಿಡಿಒಗಳಿಗೆ ಜಿಲ್ಲಾ ಪಂಚಾಯತ್ ಸಿಇಒ ಎಲ್ಲ ಕಾರ್ಯಕ್ರಮಗಳಲ್ಲಿ ಕೋವಿಡ ನಿಯಮಾವಳಿಗಳು ಜಾರಿ ಇರುವಂತೆ ನೋಡಿಕೊಳ್ಳಲು ಸೂಚಿಸಿದರು. ಆದರೂ ಬೆಳ್ಳೂರಿನಲ್ಲಿ ಈ ಘಟನೆ ನಡೆದಿದ್ದು. PDO ವಿಫಲತೆಯೇ ಎದ್ದು ಕಂಡಿದ್ದರಿಂದ ಜಿಲ್ಲಾ ಪಂಚಾಯತ್ ಸಿಇಒ ಎಂ ಎಲ್ ವೈಶಾಲಿ ಅವರು PDO ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಇಂದು ಬೆಳಿಗ್ಗೆ ನಡೆದ ಬೆಳವಣಿಗೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಹೊಸ ನಗರ ಘಟಕ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದೆ . ಈ ಮನವಿ ಪತ್ರದಲ್ಲಿ ಈ ಕೂಡಲೇ PDO ಅಮಾನತ್ತನ್ನು ಹಿಂಪಡೆಯಬೇಕು ಇಲ್ಲದಿದ್ದಲ್ಲಿ ನಾವು ಸಾಮೂಹಿಕ ರಾಜಿನಾಮೆ ನೀಡುತ್ತೇವೆ ಎಂದು ಎಚ್ಚರಿಸಿದ್ದಾರೆ . ಆದರೆ ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಸಿಇಒ ಅವರ ಕ್ರಮವನ್ನು ಸ್ವಾಗತಿಸಿದ್ದಾರೆ. ರಾಜಕೀಯ ಹಾಗೂ ಹಣಬಲವಿದ್ದವರು ವ್ಯವಸ್ಥೆಯನ್ನು ಹದಗೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೋವಿಡ ನಿಯಮಾವಳಿಗಳನ್ನು ಗಾಳಿಗೆ ತೂರಿ ಇಂಥ ಕಾರ್ಯಕ್ರಮಗಳು ನಡೆದರೆ ನಮ್ಮ ಗ್ರಾಮಗಳು ಕರೋನ ಹಾಟ್ಸ್ಪಾಟ್ ಆಗುವುದರಲ್ಲಿ ಸಂಶಯವಿಲ್ಲ. ಇದರಿಂದ ಜಿಲ್ಲಾ ಪಂಚಾಯತ್ ಸಿಇಒ ಅಮಾನತ್ತಿನ ಆದೇಶ ದ ಪರವಾಗಿ ಜನಧ್ವನಿ ಇರುವುದು ಗೋಚರಿಸುತ್ತದೆ.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

One thought on “ಬೆಳ್ಳೂರಿನ PDO ರಾಘವೇಂದ್ರ ಅವರನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ ಜಿಲ್ಲಾ ಪಂಚಾಯತ್ ಸಿಇಒ ವೈಶಾಲಿ. ಆದೇಶ ದ ಪರವಾಗಿ ಜನಧ್ವನಿ”
  1. ವರದಿಗಳು ಚೆನ್ನಾಗಿ ಮೂಡಿಬರುತ್ತಿದೆ. ಹೀಗೇ ಮುಂದುವರೆಲಿ… ಮಂಜುನಾಥ್ ಶೆಟ್ಟಿ…ಆಲ್ ದಿ ಬೆಸ್ಟ್!!!

Comments are closed.