ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಪ್ರಮುಖವಾದ ಅತ್ಯಂತ ಕಡಿಮೆ ದರದಲ್ಲಿ ದೇಶವಾಸಿಗಳಿಗೆ ಉಪಯುಕ್ತ ಔಷಧಿ ದೊರಕುವ ಸದುದ್ದೇಶದಿಂದ ದೇಶದಾದ್ಯಂತ ಸ್ಥಾಪಿಸಲ್ಪಟ್ಟ “ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ” ದ 7ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಶಿವಮೊಗ್ಗದ JPN ರಸ್ತೆಯ ಜನೌಷಧಿ ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದ್ದ “ಜನೌಷಧಿ ದಿವಸ್” ಕಾರ್ಯಕ್ರಮವನ್ನು ಸಂಸದ ಬಿ ವೈ ರಾಘವೇಂದ್ರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಜನಔಷಧಿ ಯೋಜನೆ ಪ್ರಧಾನಿ ನರೇಂದ್ರ ಮೋದಿಯು ಎಲ್ಲಾ ರೀತಿಯ ಜನರಿಗೆ ಉಪಯೋಗವಾಗಲಿ ಎಂದು ಜಾರಿಗೆ ತಂದಿದ್ದಾರೆ.ಇಲ್ಲಿಯವರೆಗೆ ದೇಶಾದ್ಯಂತ ಐತಿಹಾಸಿಕ ಯೋಜನೆಯ ಕೋಟ್ಯಂತರ ಜನರು ಯೋಜನೆಯ ಲಾಭವನ್ನು ಪಡೆದು ಸಾರ್ಥಕತೆಯ ಮೆರೆದಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಜಗದೀಶ್ ಅವರು, ಶಾಸಕರಾದ ಶ್ರೀ ಚನ್ನಬಸಪ್ಪ ಅವರು, ಪ್ರಮುಖರಾದ ಶ್ರೀ ದತ್ತಾತ್ರಿ ಅವರು, ಶ್ರೀ ಮಾಲತೇಶ್ ಅವರು, ಶ್ರೀ ಮೋಹನ್ ರೆಡ್ಡಿ ಅವರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *