
ಜೆಸಿಐ ಸಂಸ್ಥೆಯಿಂದ ಮಹಿಳಾ ದಿನಾಚರಣೆ – ಮಹಿಳಾ ನಡಿಗೆ
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಜೆಸಿಐ ಸಂಸ್ಥೆಯ ಎಲ್ಲ ಘಟಕಗಳಿಂದ ಶಿವಮೊಗ್ಗ ನಗರದ ಶಿವಪ್ಪ ನಾಯಕ ವೃತದಿಂದ ಅಶೋಕ ವೃತ್ತ ಬಸ್ ಸ್ಟ್ಯಾಂಡ್ ಹೊರಗೆ “ಮಹಿಳಾ ನಡಿಗೆ” ಯನ್ನು ನಡೆಸಲಾಯಿತು.
ಜೆಸಿಐ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷರಾದ ಸೂರ್ಯನಾರಾಯಣ್ ವರ್ಮ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂದರ್ಭದಲ್ಲಿ ಜೆಸಿಐ ನ ಪ್ರಮುಖರಾದ ಗೌರೀಶ್ ಭಾರ್ಗವ್, ವಾಣಿ ಜಗದೀಶ್, ರೇಖಾ ರಂಗನಾಥ್ , ಸ್ಮಿತಾ ಮೋಹನ್ , ಸ್ವಾತಿ, ಶಿಲ್ಪ, ಹಾಗೂ ಎಲ್ಲ ಘಟಕದ ಅಧ್ಯಕ್ಷರುಗಳು , ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.