
ಮಹಮದ್ ಇರ್ಷಾದ್, ಬೊಂಬು ಬಜಾರ್ ಹೊನ್ನಾಳಿ ಟೌನ್, ದಾವಣಗೆರೆ ಜಿಲ್ಲೆ ಈತನು ತನ್ನ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ ರೂ 29,00,000/- (ಇಪ್ಪತ್ತ ಒಂಬತ್ತು ಲಕ್ಷ) ರೂಗಳನ್ನು ತೆಗೆದುಕೊಂಡು, ಸ್ಕ್ರಾಪ್ ವ್ಯವಹಾರದ ಸಂಬಂಧ ಹೊನ್ನಾಳಿಯಿಂದ ಮಂಗಳೂರಿಗೆ ಹೊರಟಿದ್ದು, ಮಾರ್ಗ ಮಧ್ಯೆ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರಂಜದಕಟ್ಟೆ ಮಸೀದಿಯ ಹತ್ತಿರ ನಮಾಜ್ ಮಾಡುವ ಸಲುವಾಗಿ ವಾಹನವನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ, ಹಣವಿದ್ದ ಬ್ಯಾಗ್ ಅನ್ನು ವಾಹನದಲ್ಲಿಯೇ ಇಟ್ಟು ಮಸೀದಿಗೆ ನಮಾಜ್ ಮಾಡಲು ಹೋಗಿ ವಾಪಸ್ಸು ಬಂದು ನೋಡಿದಾಗ, ವಾಹನವು ಸ್ಥಳದಲ್ಲಿ ಇರಲಿಲ್ಲ, ರೂ 29,00,000/- ನಗದು ಹಣ ಹಾಗೂ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನವನ್ನು
ಕಳ್ಳತನ ಮಾಡಿಕೊಂಡು ಹೋಗಿದ್ದು, ಪತ್ತೆ ಮಾಡಿಕೊಡಲು ಕೋರಿ ನೀಡಿದ ದೂರಿನ ಮೇರೆಗೆ, ತೀರ್ಥಹಳ್ಳಿ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 94/2025 ಕಲಂ 303(2) ಬಿ.ಎನ್.ಎಸ್ -2023 ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಪ್ರಕರಣದಲ್ಲಿ ಕಳುವಾದ ನಗದು ಹಣ, ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ಮತ್ತು ಆರೋಪಿತರ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜಿ. ಕೆ.
ಜಿಲ್ಲಾ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಕಾರಿಯಪ್ಪ ಎ. ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ ಶ್ರೀ ಅರವಿಂದ ಕಲಗುಜ್ಜಿ, ಪೊಲೀಸ್ ಉಪಾಧೀಕ್ಷಕರು ತೀರ್ಥಹಳ್ಳಿ ಉಪವಿಭಾಗ ರವರ ಮೇಲ್ವಿಚಾರಣೆಯಲ್ಲಿ ಶ್ರೀ ಇಮ್ರಾನ್ ಬೇಗ್, ಪೊಲೀಸ್ ನಿರೀಕ್ಷಕರು, ತೀರ್ಥಹಳ್ಳಿ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಶ್ರೀ ಶಿವನಗೌಡ ಪಿಎಸ್ ಐ, ತೀರ್ಥಹಳ್ಳಿ ಪೊಲೀಸ್ ಠಾಣೆ, ಮತ್ತು ಸಿಬ್ಬಂದಿಗಳಾದ ಎಎಸ್ಐ ಶ್ರೀ ಲೋಕೇಶಪ್ಪ, ಹೆಚ್ ಸಿಗಳಾದಃ ಶ್ರೀ ಲಿಂಗೇಗೌಡ, ಶ್ರೀ ರಾಜಶೇಖರ್ ಶೆಟ್ಟಿಗಾರ್, ಸಿಪಿಸಿಗಳಾದಃ ಶ್ರೀ ರವಿ, ಶ್ರೀ ಪ್ರದೀಪ್, ಶ್ರೀ ಸುರೇಶ್ ನಾಯ್ಕ್, ಶ್ರೀ ಪ್ರಮೋದ್, ಶ್ರೀ ದೀಪಕ್, ಶ್ರೀ ಮಂಜುನಾಥ, ಶ್ರೀ ರಾಘವೇಂದ್ರ, ಕರ್ಣೇಶ್, ಚಾಲಕರಾದ ಶ್ರೀ ಅವಿನಾಶ್ ಹಾಗು ಜಿಲ್ಲಾ ಪೊಲೀಸ್ ಕಛೇರಿ ಎ.ಎನ್.ಸಿ ವಿಭಾಗದ ಗುರುರಾಜ್, ಇಂದ್ರೇಶ್ ಹಾಗೂ ವಿಜಯಕುಮಾರ ರವರುಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.
ಸದರಿ ತನಿಖಾ ತಂಡವು ಹೊನ್ನಾಳಿ ಪೊಲೀಸ್ ಠಾಣೆಯ ಶ್ರೀ ಸುನೀಲ್ ಕುಮಾರ ಹೆಚ್ ಪಿಐ, ಶ್ರೀ ಹರೀಶ್ ಎಎಸ್ಐ ಮತ್ತು ಸಿಬ್ಬಂದಿಗಳಾದ ಸಿ.ಹೆಚ್.ಸಿ ಶ್ರೀ ಜಗದೀಶ, ಶ್ರೀ ಹೇಮಾನಾಯ್ಕ್, ಶ್ರೀ ಸುರೇಶ್ ನಾಯ್ಕ್ ಮತ್ತು ಶ್ರೀ ರಾಜಶೇಖರ್ ರವರ ಸಹಕಾರದೊಂದಿಗೆ ಪ್ರಕರಣದ ಆರೋಪಿಗಳಾದ 1) ಸೈಯದ್ ಅಬ್ದುಲ್ಲಾ, 45 ವರ್ಷ, ನೂರಾನಿ ಮಸೀದಿ ಹತ್ತಿರ, ಹೊನ್ನಾಳಿ, ದಾವಣಗೆರೆ, 2) ನವೀದ್ ಅಹಮದ್, 40 ವರ್ಷ, ಹೊನ್ನಾಳಿ ಟೌನ್, ದಾವಣಗೆರೆ ಮತ್ತು 3) ಜಾವೀದ್, 42 ವರ್ಷ, ನೂರಾನಿ ಮಸೀದಿ ಹತ್ತಿರ, ಹೊನ್ನಾಳಿ, ದಾವಣಗೆರೆ ರವರುಗಳನ್ನು ದಿನಾಂಕಃ 14-02-2025 ರಂದು ಪ್ರಕರಣ ದಾಖಲಾದ 24 ಗಂಟೆಗಳ ಒಳಗಾಗಿ ದಸ್ತಗಿರಿ ಮಾಡಿ, ಆರೋಪಿತರಿಂದ 29 ಲಕ್ಷ ರೂ ನಗದು ಹಣ ಹಾಗೂ ಅಂದಾಜು ಮೌಲ್ಯ 10,00,000/- ರೂಗಳ ಅಶೋಕ್ ಲೈಲಾಂಡ್ ವಾಹನ ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ 6,00,000/- ಟೊಯೋಟಾ ಇಟಿಯೋಸ್ ಕಾರು ಸೇರಿ ಒಟ್ಟು 45,00,000/- ರೂ ಮೌಲ್ಯದ ನಗದು ಹಣ ಮತ್ತು ವಾಹನಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.