ಈ ಕಾರಣದಿಂದಾಗಿ ಬಹಳಷ್ಟು ಜನ ನಿರ್ಗತಿಕರು ಕೆಲಸವಿಲ್ಲದೆ ಊಟವಿಲ್ಲದೆ ಬಳಲಿದ್ದಾರೆ. ಇಂಥ ಸಂದರ್ಭದಲ್ಲಿ ಸೇವೆಯ ಪರಮೋಧರ್ಮ ಎಂಬ ನಂಬಿ ರಾಜಕೀಯ ಪಕ್ಷಗಳನ್ನು ಮರೆತು ಕೋವಿಡ ಸುರಕ್ಷಾ ಪಡೆ ವಿದ್ಯಾನಗರ ಇಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಸದಸ್ಯರುಗಳಿಗೆ ಈಶ್ವರಪ್ಪನವರು ಅಭಿನಂದಿಸಿದರು. ಪ್ರಸ್ತುತ ಜನರು ಮನೆಯಿಂದ ಹೊರಗೆ ಬರಲು ಹೆದರಿಕೆಯಿದೆ ಇಂಥ ಸಂದಿಗ್ಧ ಸಂದರ್ಭದಲ್ಲಿ ಈ ಸದಸ್ಯರು ನಡೆಸುತ್ತಿರುವ ಉಚಿತ ಆಹಾರ ಹಾಗೂ ಔಷಧಿ ಅಭಿಯಾನಕ್ಕೆ ಜನಪ್ರತಿ ನಿಧಿಯಾಗಿ ನಾನು ಚಿರರುಣಿ ಎಂದು ಹೇಳಿದರು. ನಿಮ್ಮ ಸಮಾಜಪರ ಕಾಳಜಿ ಹೀಗೆ ಮುಂದುವರಿಯಲಿ ಎಂದು ಆಶಿಸಿದರು. ಸಭೆಯ ನಂತರ ಸೇರಿದಂತೆ ಸದಸ್ಯರು ನಿರಾಶ್ರಿತರಿಗೆ ಆಹಾರ ಹಂಚಲು ಹೊರಟರು. ವಿದ್ಯಾನಗರ ಕೋವಿಂದ್ ಸುರಕ್ಷಾ ಪಡೆಯ ಶುಚಿತ್ವ ಹಾಗೂ ಶಿಸ್ತು ಪ್ರಶಂಸನೀಯ
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ