ಇತ್ತೀಚೆಗೆ ನಿಧನರಾಗಿದ್ದ ಕೋಣಂದೂರು ಸಮೀಪ ಮಂಗಳ ಪ್ರಸಿದ್ಧ ನಾಟಿ ವೈದ್ಯರಾದ ದಿ. ಎಂ.ಬಿ .ಶಿವಣ್ಣಗೌಡರಿಗೆ ಕಾಂಗ್ರೆಸ್ ಮುಖಂಡರಾದ ಎಂ ಶ್ರೀಕಾಂತ್ ಇವರು ಇಂದು ಅವರ ನಿವಾಸದಲ್ಲಿ ಏರ್ಪಡಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಪುಷ್ಪಾರ್ಚನೆ ಮಾಡುವುದರ ಮೂಲಕ ಗೌರವ ನಮನ ಸಲ್ಲಿಸಿದರು.
ಕಳೆದ ತಿಂಗಳು ಅನಾರೋಗ್ಯದಿಂದ ನಿಧನರಾಗಿದ್ದ ಗೌಡರಿಗೆ ಅವರ ಅಭಿಮಾನಿಗಳು,ಅವರಿಂದ ಚಿಕೆತ್ಸೆ ಪಡೆದವರು ಇಂದು ಮಂಗಳದ ಅವರ ನಿವಾಸದಲ್ಲಿ ಶ್ರದ್ದಾಂಜಲಿ ಸಭೆಯನ್ನು ಆಯೋಜಿಸಿದ್ದರು.
ದಿ:sಹಿವಣ್ಣಗೌಡರು ರಾಷ್ಟ್ರದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮುಂತಾದ ಗಣ್ಯಾತಿಗಣ್ಯರಿಗೆ ಚಿಕಿತ್ಸೆಯನ್ನು ನೀಡಿದ ಕೀರ್ತಿ ಇವರದಾಗಿತ್ತು . ರಾಜ್ಯಮಟ್ಟದ ಅನೇಕ ಪ್ರಶಸ್ತಿಗಳನ್ನು ಪಡೆದ ಕೀರ್ತಿ ಇವರದಾಗಿತ್ತು ರಾಜ್ಯ ಮತ್ತು ಹೊರ ರಾಜ್ಯದ ಲಕ್ಷಾಂತರ ಜನರಿಗೆ ನೋವು ಮತ್ತು ಮೂಳೆ ವಿಚಾರದಲ್ಲಿ ಚಿಕಿತ್ಸೆ ನೀಡಿದ್ದವರಾಗಿದ್ದರು. ನಾಟಿ ವೈದ್ಯ ಶ್ರೀಕಾಂತ್ ಸೇರಿ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದರು.
ಸಭೆಯಲ್ಲಿ ಬಾಗವಹಿಸಿದ್ದವರೆಲ್ಲರೂ ಶಿವಣ್ಣ ಗೌಡರ ನಿಸ್ವಾರ್ಥ ಸೇವೆಯನ್ನು ಕೊಂಡಾಡಿದರು. ತಾವು ಕಲಿತ ವಿದ್ಯೆಯನ್ನು ತಮ್ಮ ಮಕ್ಕಳಿಗೂ ಕಲಿಸುವುದರ ಮೂಲಕ ತಮ್ಮ ಮುಂದಿನ ಪೀಳಿಗೆಯನ್ನು ಸಮಾಜದ ಸೇವೆಗೆ ಅರ್ಪಿಸಿದ್ದಾರೆ ಎಂದರು.
ಸಭೆಯಲ್ಲಿ ತೀರ್ಥಹಳ್ಳಿ ಶಾಸಕರಾದ ಅರಗ ಜ್ನಾನೇಂದ್ರ, ಪುತ್ರ ನಾಟಿ ವೈದ್ಯರಾದ ಶ್ರೀಕಾಂತ್,ಆರ್ ಮದನ್, ಡಾ.ದೇವೇಂದ್ರಪ್ಪ,ಬಾಳೆ ಹಳ್ಳಿ ಪ್ರಭಾಕರ್, ನಿವೃತ್ತ ಪೋಲೀಸು ಅಧಿಕಾರಿ ನಟರಾಜ್, ಶಂಕರಘಟ್ಟದ ದೀನಬಂಧು ಸೇವಾ ಟ್ರಸ್ಟ್ ಅಧ್ಯಕ್ಷರಾದ ಎಂ ರಮೇಶ್ ಶೆಟ್ಟಿ, ವಿಶ್ರಾಂತ ಪ್ರಾಂಶುಪಾಲ ಕೆ ಎಂ ಸುಧಾಕರ್, ಡಾ. ಶ್ರೀಪತಿ, ಕೆಸ್ತೂರ್ ಮಂಜುನಾಥ್, ಪ್ರಶಾಂತ್ ಕುಕ್ಕೆ, ಪೂರ್ಣೆಶ್ ಮತ್ತಿತರು ಇದ್ದರು.
ಈ ಸಭೆಯಲ್ಲಿ ರಾಜ್ಯದ ಮೂಲೆಮೂಲೆಗಳಿಂದ ಅವರಿಂದ ಚಿಕೆತ್ಸೆ ಪಡೆದು ಗುಣಮುಖರಾಗಿರುವ ನೂರಾರು ಜನರು,ಅಭಿಮಾನಿಗಳು ಹಾಗೂ ಕುಟುಂಬ ವರ್ಗದವರು ಭಾಗವಹಿಸಿದ್ದರು.