ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ ನೇತೃತ್ವದಲ್ಲಿ ಮುಖ್ಯ ಅಂಚೆ ಕಚೇರಿ ಮುತ್ತಿಗೆ ಹಾಕುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು.ಜಾರಿ ನಿರ್ದೇಶನಾಲಯ ಹಾಗೂ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರ ಬಿ ಜೆ ಪಿ ಸರಕಾರದ ವಿರುದ್ಧ ಘೋಷಣೆ ಕೂಗಿ ಮುಖಂಡರು ಕಾರ್ಯಕರ್ತರು ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ಕೇಂದ್ರ ಬಿ ಜೆ ಪಿ ಸರ್ಕಾರ ಜಾರಿ ನಿರ್ದೇಶನಾಲಯದ ಮೂಲಕ ನ್ಯಾಷನಲ್ ಹೆರಾಲ್ಡ್ ಸಂಸ್ಥೆಯು ಆಸ್ತಿ ಗಳನ್ನು ಮುಟ್ಟು ಗೋಲು ಹಾಕಿ ಕೊಳ್ಳಲು ಪ್ರಯತ್ನಿಸುತ್ತಿದೆ ಇದನ್ನು ಜಿಲ್ಲಾ ಯುವ ಕಾಂಗ್ರೇಸ್ ಖಂಡಿಸಿದೆ.ಕೂಡಲೇ ರಾಷ್ಟ್ರ ಪತಿಗಳು ಮದ್ಯಪ್ರವೇಶ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಕ್ರಮ ತೆಗೆದು ಕೊಳ್ಳ ಬೇಕು ಮತ್ತು ದ್ವೇಷ ರಾಜಕಾರಣ ಮಾಡುತ್ತಿರುವ ಕೇಂದ್ರ ಸರ್ಕಾರವನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ PLD ಬ್ಯಾಂಕ್ ಅಧ್ಯಕ್ಷರಾದ ವಿಜಯಕುಮಾರ್, ಚೇತನ್, ಮಧುಸೂದನ್, ಇಮ್ರಾನ್, ಅಕ್ಬರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ, ಚರಣ್, ಪ್ರವೀಣ್, ಗಿರೀಶ್, ಸಕ್ಲೇನ್, ಅನಿಲ್ ಪಾಟೀಲ್, ಧನುಷ್, ಮಲಗಪ್ಪ ಶಿವು, ಆಕಾಶ್, NSUI ಜಿಲ್ಲಾಧ್ಯಕ್ಷ ವಿಜಯ್, ರವಿ ಕಟಿಕೆರೆ, ಚಂದ್ರ ಜಿ ರಾವ್, ಸುಭಾನ್, ಅಭಿ, ಆದಿತ್ಯ, ವರುಣ್ ವಿ ಪಂಡಿತ್ ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಮಾತೊಂದಡೆ ವಿನೋಬನಗರದ ಸಂಸದರ ಮನೆಗೆ ಶಿವಮೊಗ್ಗ ಯುವ ಕಾಂಗ್ರೆಸ್ ನಿಂದ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ನ ಮುಖಂಡರು ಹಾಗೂ ಕಾರ್ಯಕರ್ತರನ್ನು ಸಿದ್ದನಗೌಡ ನೇತೃತ್ವದಲ್ಲಿ ಬಂದಿಸಿದರು.
ಈ ಪ್ರತಿಭಟನೆಯ ನೇತೃತ್ವವನ್ನು ಕಾಂಗ್ರೆಸ್ ಪಕ್ಷದ ಮುಖಂಡರಾದ ಕೆ ರಂಗನಾಥ್, ಹೆಚ್.ಪಿ. ಗಿರೀಶ್, ಎಂ ಪ್ರವೀಣ್ ಕುಮಾರ್, ಎಸ್ ಎಂ ಶರತ್ ಮರಿಯಪ್ಪ, ಎಮ್ ರಾಹುಲ್, ಎಸ್.ಬಸವರಾಜ್, ಕವಿತಾ, ಕೆ ಎಲ್ ಪವನ್ , ಎಂ.ರಾಕೇಶ್, ರಾಜೇಶ್ ಮಂದಾರ, ದಿವಾಕರ್, ಗುರುಪ್ರಸಾದ್, ನದೀಮ್, ಇರ್ಫಾನ್ , ಸಂದೀಪ್ ಸುಂದರರಾಜ್ , ಭಾಸ್ಕರ್ , ರಾಹುಲ್ , ಪ್ರದೀಪ್ ರಾಮೀನ ಕೊಪ್ಪ, ಪುರ್ಲೆ ಮಂಜು ಎಸ್ ಸಿ ಪ್ರವೀಣ್ ಕುಮಾರ್, ಮಿಥುನ್, ವಸಂತ, ರಾಮ್ ಕುಮಾರ್, ಪುನೀಲ್, ಹಾಗೂ ಕಾರ್ಯಕರ್ತರು ಇದ್ದರು.