ಇಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಈಸೂರಿನಲ್ಲಿ ಸ್ವಾತಂತ್ರ ಸೇನಾನಿಗಳು ಹಾಗೂ ಹುತಾತ್ಮರ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಏಸೂರ ಕೊಟ್ಟರೂ ಈಸೂರು ಕೊಡೆವು ಎಂಬ ವೇದ ವಾಕ್ಯದೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಈಸೂರಿಗೆ ತನ್ನದೇ ಆದ ಪ್ರಾಮುಖ್ಯತೆಯಿದೆ. 1942 ರಲ್ಲಿ ಈಸೂರಿನ ಈಶ್ವರ ದೇವಸ್ಥಾನದ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಗ್ರಾಮ ಈಸೂರು. ಇಂದು ನಡೆದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹುತಾತ್ಮ ಹೋರಾಟಗಾರದ ಸೂರ್ಯನಾರಾಯಣಾಚಾರ್ , ಶಂಕ್ರಪ್ಪ, ವೀರಪ್ಪ , ಹುಚ್ಚರಾಯಪ್ಪ ಹಾಗೂ ಲಲಿತಮ್ಮ ಕುಟುಂಬಸ್ಥ ರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಗರ ಮಹಾದೇವಪ್ಪ ಕಾಂಗ್ರೆಸ್ ನ ಹೋರಾಟದ ಹಾದಿಯನ್ನು ಮೆಲುಕು ಹಾಕಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಎಸ್ ಸುಂದರೇಶ್ , ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋಣಿ ಮಾಲತೇಶ್, ಭದ್ರಾವತಿ ಶಾಸಕ ಸಂಗಮೇಶ್ , ಮಾಜಿ ಶಾಸಕರಾದ ಚಂದ್ರಶೇಖರಪ್ಪ , ಆರ್ ಪ್ರಸನ್ನಕುಮಾರ್ , ಶಾಂತವೀರನಾಯ್ಕ , ಬೇಳೂರು ಗೋಪಾಲಕೃಷ್ಣ, ಮಂಜುನಾಥ್ ಗೌಡ, ಎಚ್ ಸಿ ಯೋಗೇಶ್ , ಎನ್ ರಮೇಶ, ಸೌಗಂಧಿಕಾ , ಚಂದ್ರ ಭೋಪಾಲ್ ಮುಂತಾದವರು ಉಪಸ್ಥಿತರಿದ್ದರು
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ