ಇಂದು ಅಗಸ್ಟ್ ೧೫,ಸ್ವಾತಂತ್ರ್ಯ ದಿನಾಚರಣೆ.1947 ಆಗಸ್ಟ್ ೧೫ರಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿತು.ಇದರ ಹಿಂದೆ ಎಷ್ಟೋ ಕದನ, ಚಳುವಳಿ ಹಾಗೂ ಸತ್ಯಗ್ರಹಗಳೂ ಇವೆ. ದೇಶಕ್ಕಾಗಿ ಪ್ರಾಣ ತೆತ್ತವರು ಅನೇಕರು ಇದ್ದಾರೆ. ಹೀಗೆ ನಮ್ಮ ಭಾರತದ ಕದನದ ಇತಿಹಾಸವೂ ಬಹಳ ರೋಚಕವಾಗಿದೆ, ಒಬ್ಬ ಪುಟ್ಟ ಬಾಲಕ ಜಂದ್ರಶೇಖರ್ ತಿವಾರಿ, ಆತ ಪೊಲೀಸರಿಗೆ ಕಲ್ಲಿನಿಂದ ಹೊಡೆದ ಎಂಬ ಕಾರಣಕ್ಕೋಸ್ಕರ ಕೋರ್ಟಿನ ಕಟಕಟೆಯಲ್ಲಿ ನಿಲ್ಲಿಸಲಾಯಿತು, ಅವನಿಗೆ ಜಡ್ಜ್ ಸಾಹೇಬರು ಒಂದು ಪ್ರಶೆಯನ್ನು ಕೇಳುತ್ತಾರೆ ,ನಿನ್ನ ಹೆಸರೇನು ಎಂದಾಗ ಆಗ ಆ ಬಾಲಕ ನನ್ನ ಹೆಸರು ಚಂದ್ರಶೇಖರ ತಿವಾರಿ ಅನ್ನಬೇಕಿತ್ತು ಆದ್ರೆ ಅವನು ನನ್ನ ಹೆಸರು ಆಜದ್ (ಸ್ವಾತಂತ್ರ್ಯ)ಎಂದು ಹೇಳಿದ. ಜಡ್ಜ್ ಕೇಳುತ್ತಾರೆ ನಿನ್ನ ಅಪ್ಪನ ಹೆಸರೇನು ಅಂತ ಆಗ ಅವನು ನಮ್ಮಪ್ಪ ನಿನ್ನಂಥ ಹತ್ತಾರು ಜನರನ್ನು ಕಾಲುಕೆಳಗೆ ಇಟ್ಟುಕೊಳ್ಳುವಂತಹ ಸ್ವಾಧೀನತೆ ನಮ್ಮಪ್ಪ ಅನ್ನುತ್ತಾನೆ, ಜಡ್ಜ್ ಸಾಹೇಬರು ಕೋಪದಿಂದ ನಿನ್ನ ಮನೆ ಎಲ್ಲಿ ಎಂದು ಕೇಳುತ್ತಾರೆ ಆಗ ಅವನು ನಮ್ಗೆಲ್ಲಾ ಎಲ್ಲಿ ಮನೆ,ನನ್ನ ಮನೆ ಈ ಭಾರತ ಸದ್ಯಕ್ಕೆ ಸೇರಮನೆನೇ ನನ್ನ ಮನೆ ಅದೇ ನನ್ನ ವಿಳಾಸ ಬರ್ಕೊಳಿ ಎಂದು ಅಟ್ಟಹಾಸಬೀರಿದವನು ಆ ಪುಟ್ಟ ಬಾಲಕ, ಅವರಿಗೆ ಆಗ 12 ಚಡಿ ಏಟುಗಳ ಶಿಕ್ಷೆಯನ್ನು ವಿಧಿಸಲಾಯಿತು. ಪ್ರತಿಯೊಂದು ಚಡಿ ಏಟನ್ನು ತಿನ್ನುವಾಗ ವಂದೇ ಮಾತರಂ ಎನ್ನುತ್ತ ಚಡಿ ಏಟನ್ನು ತಿಂದ ಹುಡುಗ ಇವರು. ಬ್ರಿಟೀಷರು ಒಂದುಕಾಲು ರೂಪಾಯಿ ನಿನ್ನ ಗಾಯಗಳ ಔಷಧಿಗೆ ಎಂದು ಕೊಟ್ಟಾಗ ಆ ಬಾಲಕ ಆ ಒಂದುಕಾಲು ರೂಪಾಯಿಯನ್ನು ಬ್ರಿಟನ್ ನ ರಾಣಿಗೆ ಕೊಡಿ ಎಂದು ಒಂದುಕಲು ರೂಯಿಯನ್ನು ಬಿಸಾಡಿ ”दुश्मन की गोलियों का, हम सामना करेंगे, आजाद ही रहे हैं, आजाद ही रहेंगे”ಅಂತ ಆ ಹುಡ್ಗ ಹೇಳಿದ್ನಂತೆ. ಶತ್ತ್ರುಗಳ ಗುಂಡಿಗೆಗೆ ನಾ ನನ್ನ ಇದೆ ಕೊಡುತ್ತೀನಿ ನಾನು ಹುಟ್ಟುತ್ತ ಆಜದ್ ಆಗಿಯೇ ಬಂದೆ ಸಾಯ್ತನು ಆಜದ್ ಆಗಿಯೇ ಸಾಯ್ತೆನೆ ಎಂದು ಆ ವೀರ ಬಾಲಕ ಮುಂದೆ ಚಂದ್ರಶೇಖರ್ ಆಜದ್ ಆಗಿ ನಮ್ಮ ದೇಶದ ಸ್ವಾತಂತ್ರ್ಯಕ್ಕೋಸ್ಕರ ಬಡಿದಾಡುತ್ತಾರಲ್ಲವೇ….. ನಾವು ಈ ಸಮಯದಲ್ಲಿ ಅವರನ್ನು ನೆನಪಿಸಿಕೊಳ್ಳಲೇಬೇಕಾಗಿರುವ ವ್ಯಕ್ತಿ ಇವರು.
ಭಾರತದ ಇತಿಹಾಸದಲ್ಲಷ್ಟೇ ಅಲ್ಲ ನಮ್ಮ ಜಗತ್ತಿನ ಇತಿಹಾಸದಲ್ಲೇ ಮರೆಯಲಾಗದ ಸಾಮ್ರಾಜ್ಯ ಅಂತ ಯಾವುದಾದರೂ ಇದ್ದರೆ ಅನುಮಾನವೇ ಇಲ್ಲ ಅದು ನಮ್ಮ ವಿಜಯನಗರ ಸಾಮ್ರಾಜ್ಯ, ಕನ್ನಡಿಗರೇ ಕಟ್ಟಿದಂಥ ಸಾಮ್ರಾಜ್ಯ. ಆದೊಮ್ಮೆ ಹಕ್ಕಬುಕ್ಕರು ಕಾಡಿನಲ್ಲಿ ಬರುತ್ತಿರುವಾಗ ಮೊಲವೊಂದು ತೋಳವನ್ನು ಹಟ್ಟಿಸಿಕೊಂಡು ಹೋಗುವ ದೃಶ್ಯ ಹಕ್ಕಬುಕ್ಕರು ನೋಡುತ್ತಾರೆ ಅವರು ಆಶ್ಚರ್ಯಚಕಿತಾರಾಗಿ ಅವರ ಗುರುಗಳಾದ ವಿದ್ಯಾರಣ್ಯರ ಹತ್ತಿರ ವಿಷಯವನ್ನು ಹೇಳುತ್ತಾರೆ ಇದನ್ನು ಗಮನಿಸಿ ಜಾಗಕ್ಕೆ ಓಡಿ ಬಂದ ವಿದ್ಯಾರಾನ್ಯರು ಆ ಜಾಗದ ಮಣ್ಣಿನ ವಾಸನೆ ತಗೆದುಕೊಂಡು ವಿಜಯನಗರ ಸಾಮ್ರಾಜ್ಯ ಈ ಭೂಮಿಯಲ್ಲೇ ಸ್ಥಾಪನೆಯಾಗಬೇಕು ಏಕೆಂದರೆ, ಇಲ್ಲಿ ಮೊಲಗಳೂ ಕೂಡ ತೋಳವನ್ನು ಹಟ್ಟಿಸಿಕೊಂಡು ಹೋಗಬಲ್ಲುವಂಥಹ ಸಾಮರ್ಥ್ಯವನ್ನು ಪಡೆಯಬಲ್ಲವು, ಇಡೀ ದೇಶ ನಿಶ್ಚಿಷ್ಟಿತ ವಾಗಿ ಹೋಗಿದೆ ಗುಲಾಮ ಸ್ಥಿತಿಯತ್ತ ಹೊರುಡುತ್ತಾಯಿದೆ ಎಂದು ಎಂದಾಗ್ಲೇ ಕೂಡ ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿ ಕನ್ನಡನಾಡು ಜಗತ್ತಿಗೆ ಒಂದು ಶ್ರೇಷ್ಠ ಸಂದೇಶವನ್ನು ಕೊಡುತ್ತದೆ….. ಇದು ಈ ದೇಶದ ಮಹತ್ವದ ಅದ್ಯಾಯಗಳಲ್ಲಿ ಒಂದಾಗಿದೆ.
ಸ್ವಾತಂತ್ರ್ಯ ಸಂಗ್ರಾಮ ಎಂದತಕ್ಷಣ ನಮಗೆಲ್ಲರಿಗೂ ಭಗತ್ ಸಿಂಗ್ ರವರು ನೆನಪಾಗುತ್ತಾರೆ, ನಿಜ…….ಅದು ಸರಿಯು ಹೌದು…. ಆದರೆ ಭಗತ್ ಸಿಂಗ್ ರವರ ಜೊತೆ ಪ್ರಾಣಕೊಟ್ಟವರು ಇಬ್ಬರಿದ್ದಾರೆ ಸುಖದೇವ್ ಮತ್ತು ರಾಜಗುರು…. ರಾಜಗುರು ಇವರು ಎಂತಹ ಕಿಚ್ಚಿನ ಹೋರಾಟಗಾರ ಎಂದರೆ ಆತ ಮಹಾರಾಷ್ಟ್ರದಿಂದ ಬಂದಂಥವರು. ಇವರು ಬಹಳ ತೀಕ್ಷಣವಾದ ಗನ್ ಶೂಟರ್ ಆಗಿದ್ದರು, ಎಲ್ಲೇ ನಿಂತುಕೊಂಡರು ಯಾರಿಗೆ ಗುರಿ ಇಟ್ಟು ಹೊಡಿಯಬೇಕೋ ಅವರಿಗೆ ಗುರಿಯಿಟ್ಟು ಗುಂಡು ಹೊಡೆಯುವ ಪರಿಪೂರ್ಣ ಅಭ್ಯಾಸದಲ್ಲಿ ಇವರು ನಿಸ್ಸೇಮರಾಗಿದ್ದರು.ಇವರಿಗೆ ಹೇಗಾದರು ಮಾಡಿ ಬ್ರಿಟೀಶ್ ಅಧಿಕಾರಿಯನ್ನು ಕೊಂದು ನಾನೂ ನೇಣಿಗೇರಬೇಕು ಎಂಬ ಕಿಚ್ಚು ಬಲವಾಗಿತ್ತು, ಹೀಗೆನಾದರೂ ಕೊಂದು ಸಿಕ್ಕಿಹಾಕಿಕೊಂಡರೆ ನನಗೆ ಬ್ರಿಟೀಶ್ ಅಧಿಕಾರಿಯರು ಕೊಡುವಂತಹ ಶಿಕ್ಷೆಯನ್ನು ಅನುಭವಿಸಲು ನಾನು ತಯಾರಿದ್ದೀನೋ ಇಲ್ಲವೊ ಅಂತ ಆಗಾಗ ಪ್ರಯತ್ನಪಡುತ್ತಿದ್ದರು, ಆದೊಮ್ಮೆ ರಾಜಗುರು ರವರು ಕ್ರಾಂತಿಕಾರಿಯರ ಸಂಘದ ಜತೆಗೆ ಕುಳಿತುಕೊಂಡು ಚಪಾತಿಯನ್ನು ಮಾಡುತ್ತಿದ್ದರಂತೆ ಅದನ್ನು ಒಲೆಯಮೇಲೆ ಇಟ್ಟು ಬೇಯಿಸುತ್ತಿದ್ದಂಥ ಸಂದರ್ಭದಲ್ಲಿ ಸೊಲ್ಪಹೊತ್ತಿನಲ್ಲೇ ಹೊರಗೆ ಇರುವ ಕ್ರಾಂತಿಕಾರಿಯರಿಗೆ ಸ್ವಲ್ಪ ಸ್ವಲ್ಪ ಸುಟ್ಟಿರುವಂತಹ ವಾಸನೆ ಬರುತ್ತದೆ ಆಗ ಎಲ್ಲಾ ಕ್ರಾಂತಿಕಾರಿಗಳು ಓಡಿಬಂದು ನೊಡಿದರೆ ರಾಜಗುರು ರವರು ಚಪಾತಿಯನ್ನು ಬೇಯಿಸುವಂಥಹ ಸೌಟನ್ನು ಚೆನ್ನಾಗಿ ಕಾಯಿಸಿ ತನ್ನ ಎದೆಗೆ ಇಟ್ಟುಕೊಂಡಿದ್ದಾಗ ಎದೆ ಸುಟ್ಟು ಕಾರಕಲಾಗಿತ್ತು ಹೀಗೇಕೆ ಮಾಡಿದ್ದೀರಿ ಎಂದು ಚಂದ್ರಶೇಖರ್ ಆಜದ್ ರವರು ಕೇಳಿದಾಗ ರಾಜಗುರು ರವರು “ಯಾಕೂ ಇಲ್ಲ ಬ್ರಿಟೀಷರು ಟಾರ್ಚರ್ ಮಾಡಿದಾಗ ನನಗೆ ತಡೆದುಕೊಳ್ಳುವಂತ ಶಕ್ತಿ ಇದೆಯೋ ಇಲ್ಲವೋ ಎಂದು ಒಂದು ಸಣ್ಣ ಪರೀಕ್ಷೆ ಮಾಡಿದೆ ನನಗೇನು ಕಷ್ಟ ಅನ್ನಿಸಲಿಲ್ಲ ನಾನು ಯಾವ ಕಾರಣಕ್ಕೂ ಗುಟ್ಟನ್ನು ಬಿಟ್ಟುಕೊಡಲ್ಲ ಎಂದು ಖಾತ್ರಿಯಾಯಿತು” ಎಂದು ಚಂದ್ರಶೇಖರ್ ಆಜದ್ ರವರಿಗೆ ತಮಾಷೆ ಮಾಡಿಕೊಂಡು ನಗುತ್ತಿದ್ದ ಹುಡುಗ ಇವರು. ಇಂತಹ ಅನೇಕರು ಈ ದೇಶಕ್ಕೋಸ್ಕರ ಬಲಿದಾನ ಮಾಡಿದ್ದಾರೋ ಅವರನ್ನು ನೆನಪಿಸಿಕೊಳ್ಳುವಾಗ ಈ ದೇಶಕ್ಕೆ ಸ್ವಾತಂತ್ರ್ಯ ಬಹಳ ಸುಲಭವಾಗಿ ಬಂದಿಲ್ಲವೆಂದು ವೇದ್ಯವಾಗುತ್ತದೆ.
ನೀವು ಜಗತ್ತಿನಲ್ಲಿ ಯಾವ ರಾಷ್ಟ್ರವನ್ನಾದರೂ ಸಹ ನಮ್ಮ ಭಾರತದಲ್ಲಿಯೇ ನೋಡಬಹುದು, ಯುರೋಪ್ ಅನ್ನು ನೋಡಬೇಕಾದರೆ ನಮ್ಮ ದೇಶದ ಹಿಮಾಲಯದ ತಪ್ಪಲಿಗೆ ಬನ್ನಿ ಥೇಟ್ ಯುರೋಪಿನ ವಾತಾವರಣ ಯುರೋಪಿನ ದೃಶ್ಯವನ್ನು ನೋಡಲಿಕ್ಕೆ ಸಿಗುತ್ತದೆ.ನೀವೇನಾದರೂ ಜಗತ್ತಿನ ಮರುಭೂಮಿಯನ್ನು ನೋಡಬೇಕಾದರೆ ನಮ್ಮ ರಾಜಸ್ಥಾನಿಗೆ ಬನ್ನಿ ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ನಿಮಗೆ ಮರುಭೂಮಿ ಕಾಣುತ್ತದೆ. ನಿಮಗೇನಾದ್ರೂ ಸಮುಧ್ರವನ್ನು ನೋಡಬೆಕುವಂತಿದ್ದರೆ ಭಾರತದ ಧಕ್ಷಿಣ ಭಾಗಕ್ಕೆ ಬನ್ನಿ ಒಂದಲ್ಲ ಎರಡಲ್ಲ ಮೂರು ಸಾಗರಗಳು ನಮ್ಮ ಭಾರತಾಂಬೆಯ ಕಾಲನ್ನು ತೊಳೆಯುತ್ತವೆ.ನದಿಗಳನ್ನು ನೋಡಬೇಕೇನು ಈ ದೇಶದ ಯಾವ ರಾಜ್ಯದಲ್ಲಿ ನಿಂತು ಸುತ್ತ ಕಣ್ಣು ಹಾಯಿಸಿದರೆ ಹತ್ತಾರು ನದಿಗಳು ಆ ರಾಜ್ಯವನ್ನು ತೋಯಿಸಿರುವುದನ್ನು ನೋಡಬಹುದು. ಜಗತ್ತಿನಲ್ಲಿ ಇಂತಹ ರಾಷ್ಟ ಮತ್ತ್ತೊಂದು ನೋಡಲಿಕ್ಕೆ ಸಿಗುವುದಿಲ್ಲ ಈ ರಾಷ್ಟ್ರದ ಮೇಲೆ ಭಗವಂತನ ಕೃಪೆಯಿದೆ ಹಾಗೂ ಪ್ರಕೃತಿ ಮಾತೆಯ ಕೃಪೆಯೂ ಇದೆ, ಭಗವಂತ ಎಲ್ಲಾ ಸಂಪತ್ತನ್ನು ಒಂದು ರಾಷ್ಟ್ರಕ್ಕೆ ಒದಗಿಸಿ ಕೊಟ್ಟಿದೆ ಎಂದರೆ ಅದು ನಮ್ಮ ಹೆಮ್ಮೆಯ ಭಾರತವಷ್ಟೇ.
ಇನ್ನು ನಮ್ಮ ದೇವಾಲಯದತ್ತ ಗಮನ ಹರಿಸಿದರೆ ಬ್ರಿಹದೀಶ್ವರ, ದಿಲ್ವಾರ, ಕೋಣರ್ಕ್ ಸೂರ್ಯ ದೇವಾಲಯ, ಹಂಪಿ, ಮಹಾಬಲಿಪುರಂ ಮತ್ತು ಮುಂತಾದವು ಇಂತಹ ಪ್ರಾಚೀನ ಶಿಲಾ ವೈಭವಕ್ಕೆ ಕೈಗನ್ನಡಿ ಹಿಡಿದಂತಿದೆ.ನಮ್ಮ ದೇಶದವರು ಅಂದರೆ ಭಾರತೀಯರು ಬಹಳ ಪ್ರತಿಭಾನ್ವಿತರು ಕಲೆ,ಸಾಹಿತ್ಯ, ವಿಜ್ಞಾನ, ವೈದ್ಯಕೀಯ ಕ್ಷೇತ್ರಗಳು ಮತ್ತು ಮುಂತಾದ ಇನ್ನು ಹಲವಾರು ಕ್ಷೇತ್ರಗಳಲ್ಲಿ ದೇಶ ವಿದೇಶಗಳಲ್ಲಿ ಸಾಧನೆಗೈದು ವಿಶ್ವದಾದ್ಯಂತ ಪ್ರಖ್ಯಾತರಾಗಿದ್ದಾರೆ. ಈಗಷ್ಟೇ ನಡೆದ ಒಲಂಪಿಕ್ ಪಂದ್ಯಾವಳಿಗಳಲ್ಲಿ ಬಹಳಷ್ಟು ಚಿನ್ನ ಬೆಳ್ಳಿ ಕಂಚಿನ ಪದಕಗಳನ್ನು
ಗೆಲ್ಲುವಮೂಲಕ ನಾವು ಭಾರತೀಯರು ಯಾರಿಗೇನು ಯಾವದೇಶಕ್ಕೇನು ಕಮ್ಮಿ ಇಲ್ಲ ಎಂದು ನಮ್ಮ ಭಾರತದ ಕಿರೀಟಕ್ಕೆ ಇನ್ನೊಂದು ಗರಿ ಸೇರಿಸಿದಂತಿದೆ.
ಇತ್ತೀಚಿನ ಅಭದ್ರ ಆರ್ಥಿಕ ಸ್ಥಿತಿ, ಕರೋನಾದ ಹಾವಳಿ, ರಾಜಕೀಯ ದೊಂಬರಾಟ, ಕೋಮುಗಲಭೆ, ಕಲಬೆರಿಕೆ ಇದ್ಯಾವುವು ಭಾರತೀಯರ ಆತ್ಮಸ್ಥೈರ್ಯವನ್ನು ಕುಗ್ಗಿಸಿಲ್ಲ ಹೆಚ್ಚು ಹೆಚ್ಚಿಗೂ ಮುನ್ನಡೆಯುತ್ತಿದ್ದಾರೆ ಭಾರತೀಯರು. ವಿಶ್ವವೇ ಬೆರಗಾಗಿ ನೋಡುತ್ತಿದೆ ನಮ್ಮ ದೇಶದ ಪ್ರಗತಿಯನ್ನು, ಹೀಗೆ ಮುಂದುವರೆದು ದೇಶದ ವಿಶಿಷ್ಟತೆ ಹಾಗೂ ಪ್ರಗತಿಯ ಉತ್ತುಂಗಕ್ಕೇರಬೇಕೆಂದರೆ ಇದರಲ್ಲಿ ನಾವೆಲ್ಲರೂ ಸಹಕರಿಸಿ ಕೈಜೋಡಿಸಬೇಕು ಆಗ ನಮ್ಮ ದೇಶವು ಪ್ರಗತಿಯ ಪಥಕ್ಕೆ ಸೇರುವುದರಲ್ಲಿ ಯಾವುದೇ ಸಂದೇಹವಿಲ್ಲ.
ಗರ್ವದಿಂದ ಹೇಳು ನನ್ನ ದೇಶ ಭಾರತ,ಹೆಮ್ಮೆಯಿಂದ ಹೇಳು ನಾನು ಭಾರತೀಯ…… ಜೈ ಭಾರತಾಂಬೆ!!!!!

ಲೇಖನ: ಪ್ರಿಯಾಂಕ ದ್ವಿತೀಯ ಪಿಯುಸಿ , ಗಂಗೋತ್ರಿ ಕಾಲೇಜು ಶಿವಮೊಗ್ಗ