ಶ್ರೀಗಂಧ ಸಾಂಸ್ಕøತಿಕ ಸಂಸ್ಥೆ ಮತ್ತು ಮಂಥನ ಟ್ರಸ್ಟ್ ನಡೆಸುತ್ತಿರುವ ಗೀತಗಾಯನ ಸ್ಪರ್ಧೆ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸದಂತೆ
nsui ವತಿಯಿಂದ ಸಚಿವ ಮಧು ಬಂಗಾರಪ್ಪನವರಿಗೆ ಮನವಿ
ಸಲ್ಲಿಸಿದರು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರ ಅಧ್ಯಕ್ಷತೆಯ ಶ್ರೀಗಂಧ ಸಾಂಸ್ಕøತಿಕ ಸಂಸ್ಥೆ ಹಾಗೂ ಮಂಥನ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ 1975ರ ತುರ್ತು ಪರಿಸ್ಥಿತಿಯ ಕರಾಳ ನೆನಪಿನ 50ನೇ ವರ್ಷದ ಅಂಗವಾಗಿ 2025ರ ಜುಲೈ 19ರಂದು ಶಿವಮೊಗ್ಗ ನಗರದ ಮಟ್ಟದಲ್ಲಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆ ಆಯೋಜಿಸಿದ್ದು, ಈ ಕಾರ್ಯಕ್ರಮ ಯುವಜನತೆಯಲ್ಲಿ ರಾಜಕೀಯ-ಕೋಮು ದ್ವೇಷ ಭಾವನೆ ಮೂಡಿಸುವ ಉದ್ದೇಶದಿಂದ ಆಯೋಜಿಸಿರುವ ಕಾರ್ಯಕ್ರಮವಾಗಿದೆ.
ಕೆ.ಎಸ್. ಈಶ್ವರಪ್ಪನವರು ಶಾಸಕರಾಗಿ, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರಾಗಿ, ಸಚಿವರಾಗಿ, ಉಪಮುಖ್ಯಮಂತ್ರಿಗಳಾಗಿ ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದ್ದರಿಂದಾಗಿ ಮತ್ತು ಅಭಿವೃದ್ಧಿ ಕಾಮಗಾರಿಗಳಲ್ಲಿ 40% ಕಮಿಷನ್ ಪಡೆದು ಭ್ರಷ್ಟಾಚಾರವೆಸಗಿದ್ದರಿಂದ ಬಿಜೆಪಿ ಅವರಿಗೆ ಟಿಕೆಟ್ ನೀಡದೇ ರಾಜಕೀಯವಾಗಿ ಮೂಲೆಗುಂಪು ಮಾಡಿದೆ. ತಮ್ಮ ರಾಜಕೀಯ ಜೀವನ ಮುಗಿದ ಅಧ್ಯಾಯ ಎಂದು ಗೊತ್ತಿದ್ದರೂ ನಾಯಕತ್ವ ಗುಣಗಳೇ ಇಲ್ಲದ ಅವರ ಪುತ್ರ ಕೆ.ಈ. ಕಾಂತೇಶ್‍ಗೆ ರಾಜಕೀಯದಲ್ಲಿ ನೆಲೆಯೂರಿಸುವ ಉದ್ದೇಶದಿಂದ ಕೆ.ಎಸ್.ಈಶ್ವರಪ್ಪನವರು ಈಗ ದೇಶಭಕ್ತಿಯ ನಾಟಕವಾಡುತ್ತಿದ್ದು, ಅದಕ್ಕೆ ವಿದ್ಯಾರ್ಥಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ತಮಗೆ ಅಧಿಕಾರವಿಲ್ಲದಿದ್ದಾಗ ಕಾಲಹರಣಕ್ಕೆಂದು ಶ್ರೀಗಂಧ ಸಂಸ್ಥೆ ಸ್ಥಾಪಿಸಿ ಆ ಮೂಲಕ ಒಂದಿಷ್ಟು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿದ್ದರು. ಅಧಿಕಾರ ಬಂದಾಗ ಶ್ರೀಗಂಧ ಸಂಸ್ಥೆಯ ಚಟುವಟಿಕೆಗಳನ್ನೇ ಸ್ಥಗಿತಗೊಳಿಸಿದ್ದರು. ಇದೀಗ ರಾಜಕೀಯವಾಗಿ ಬಿಜೆಪಿಯಿಂದ ಹೊರಹಾಕಲ್ಪಟ್ಟಿರುವ ಈಶ್ವರಪ್ಪನವರು ಬಿಜೆಪಿ ವರಿಷ್ಟರನ್ನು ಓಲೈಕೆ ಮಾಡಲು ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಸರಿಯಲ್ಲ. ಶ್ರೀಮತಿ ಇಂದಿರಾಗಾಂಧಿಯವರು ದೇಶದ ಅಂದಿನ ಆರ್ಥಿಕ-ರಾಜಕೀಯ ಪರಿಸ್ಥಿತಿಯನ್ನಾಧರಿಸಿ ತುರ್ತು ಪರಿಸ್ಥಿತಿ ಹೇರಿಕೆ ಮಾಡಿದ್ದರು.
ಆದರೆ, ಈಶ್ವರಪ್ಪ ತಮ್ಮ ರಾಜಕೀಯ ತೆವಲಿಗೋಸ್ಕರ ವಿದ್ಯಾರ್ಥಿಗಳಿಗೆ ‘ತುರ್ತು ಪರಿಸ್ಥಿತಿಯ ಕರಾಳ ನೆನಪು’ ಎಂದು ಹೇಳುತ್ತಾ ಇಂತಹ ಕಾರ್ಯಕ್ರಮ ಆಯೋಜಿಸಿ ವಿದ್ಯಾರ್ಥಿಗಳನ್ನು ದುರ್ಬಳಕೆ ಮಾಡಿಕೊಂಡು ಅವರಲ್ಲಿ ರಾಜಕೀಯ-ಕೋಮು ಪ್ರಚೋದನಾ ಭಾವನೆಗಳನ್ನು ಹುಟ್ಟು
ಹಾಕುತ್ತಿದ್ದಾರೆ. ಈಶ್ವರಪ್ಪನವರಿಗೆ ಈ ದೇಶದ ಬಗ್ಗೆ ನೈಜ ಕಾಳಜಿ ಇದ್ದರೆ, ಗೋದ್ರಾ ಹತ್ಯಾಕಾಂಡದಲ್ಲಿ ನಡೆದ ಸಾವಿರಾರು ಜನರ ಮಾರಣ
ಹೋಮವನ್ನು ನೆನಪು ಮಾಡಿಕೊಳ್ಳಲಿ.
ರಾಜಕೀಯ ಉದ್ದೇಶಕ್ಕಾಗಿ ಮಕ್ಕಳ ಜೀವನದ ಜೊತೆ ಚೆಲ್ಲಾಟವಾಡುವುದು ಬೇಡ. ಮಾನ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಇಂತಹ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸದಂತೆ ಆದೇಶ ಮಾಡಲು ನಿರ್ದೇಶನ ನೀಡಬೇಕು.
ಮತ್ತು ಇಂತಹ ಕಾರ್ಯಕ್ರಮಗಳು ಕೆ.ಎಸ್. ಈಶ್ವರಪ್ಪ ಮತ್ತು ಅವರ ಕುಟುಂಬದ ಒಡೆತನದ ಶಿಕ್ಷಣ ಸಂಸ್ಥೆಗಳಲ್ಲಿ ಆಯೋಜಿಸಿದ್ದರೂ ರದ್ದುಪಡಿಸುವಂತೆ ಸೂಚನೆ ನೀಡಬೇಕೆಂದು ಈ ಮೂಲಕ ಶಿವಮೊಗ್ಗ ಎನ್.ಎಸ್.ಯು.ಐ. ಘಟಕದ ವತಿಯಿಂದ ಮನವಿ ಮಾಡುತ್ತಿದ್ದೇವೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಆರ್ ಪ್ರಸನ್ನ ಕುಮಾರ್ ರವರು, ಹಾಗೂ NSUI ನಗರ ಅಧ್ಯಕ್ಷ ರವಿ HL, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರೋಜಿ ರಾವ್, ವರುಣ್ ವಿ ಪಂಡಿತ್,ಜೀವನ್, ನಗರ ಪ್ರಧಾನ ಕಾರ್ಯದರ್ಶಿ ಆದಿತ್ಯ, ಸುಭಾನ್, ಸಾಗರ್, ನಂದೀಶ್, ಶ್ರೀಕಾಂತ್, ಮಂಜು, ಚಂದು ಸಚಿವರಿಗೆ ಮನವಿ ಸಲ್ಲಿಸಿದರು
.