ಬಂಟರ ಯಾನೆ ನಾಡವರ ಸಂಘ, ಹಾಗೂ ಕಂಪಾನಿಯೋ ಶಿವಮೊಗ್ಗ
ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರದ ಸಮಾರೋಪ ಸಮಾರಂಭ
ದಿನಾಂಕ: 05-07-2025 ನೇ ಶನಿವಾರ ಸಂಜೆ 5:30 ಕ್ಕೆ
ಸ್ಥಳ: ಶಿವಮೊಗ್ಗ ಬಂಟರ ಭವನ
100 ಅಡಿ ರಸ್ತೆ, ಗೋಪಾಲಗೌಡ ಬಡಾವಣೆ, ಶಿವಮೊಗ್ಗ
ಸಮಸ್ತ ಜನತೆಯ ಆರೋಗ್ಯದ ಕಾಳಜಿಯನ್ನಾಧರಿಸಿ ಪ್ರಾರಂಭಿಸಿದ ಈ ಆರೋಗ್ಯ ಶಿಬಿರ ಸಂಪೂರ್ಣ ಯಶಸ್ವಿಯಾಗಿದ್ದು ಅನೇಕ ಜನರು ಅನೇಕ ರೀತಿಯ ಕಾಯಿಲೆಗಳಿಂದ ಮುಕ್ತರಾಗುತ್ತಿರುವುದನ್ನು ನಾವೆಲ್ಲರೂ ಗಮನಿಸಿದ್ದೇವೆ.
ಈ ಥೆರಫಿಯ ವೈಜ್ಞಾನಿಕ ಮಾಹಿತಿ ನೀಡಲು ಕಂಪಾನಿಯೋ ಮೆಡಿಟೆಕ್ ಸಂಸ್ಥೆಯ ಮುಖ್ಯಸ್ಥರಾದ ದಕ್ಷಿಣ ಭಾರತದಾದ್ಯಂತ 150 ಕ್ಕೂ ಹೆಚ್ಚು ಬ್ರಾಂಚ್ ಹೊಂದಿರುವ ಶ್ರೀಯುತ ರತ್ನಾಕರ ಶೆಟ್ಟಿ ಯವರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಶಿಬಿರದ ಎಲ್ಲಾ ಪಲಾನುಭವಿಗಳು, ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಸರಿಯಾದ ಸಮಯಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿ ಕೊಡಬೇಕಾಗಿ ವಿನಂತಿ.
ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ
ಬಂಟರ ಯಾನೆ ನಾಡವರ ಸಂಘ, ಹಾಗೂ ಕಂಪನಿಯೋ ಶಿವಮೊಗ್ಗ