ಶಿವಮೊಗ್ಗ ನಗರದ ದುರ್ಗಿಗುಡಿ ಹೋಟಲ್ ಶುಭಂ ನಲ್ಲಿ ಸುಮಾರು 10 ವರ್ಷಗಳ ಕಾಲ ನಿರಂತರವಾಗಿ ಸಾರ್ವಜನಿಕ ಕ್ಷೇತ್ರವಾದ ಶಿವಮೊಗ್ಗ ನಗರ ನೀರು ಸರಬರಾಜು ಹಾಗೂ ನಗರ ಒಳಚರಂಡಿ ಹಾಗೂ ಜಲ ಮಂಡಳಿ ಇಲಾಖೆಯಲ್ಲಿ ಕೆಲಸ ಮಾಡಿದ ಸರ್ಕಾರಿ ನೌಕರರಂತಹ ಮಿಥುನ್ ರವರು ಶಿವಮೊಗ್ಗ ನಗರದಿಂದ ತುಮಕೂರು ನಗರಕ್ಕೆ ವರ್ಗಾವಣೆಯಾಗಿದ್ದು ಹಾಗೂ ಇತ್ತೀಚೆಗೆ ಒಳಚರಂಡಿ ಮತ್ತು ನಗರ ನೀರು ಸರಬರಾಜು ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತಿಯಾದಂತಹ ಬಾಬಣ್ಣ ಆರೋಗ್ಯ ಇಲಾಖೆಯಲ್ಲಿ ಎಲ್ಲಾ ವರ್ಗದವರಿಗೂ ಕೆಲಸ ಮಾಡಿ ಸಾಗರದಲ್ಲಿ ಅತ್ಯುತ್ತಮ ಕಾರ್ಯ ಕೆಲಸ ಮಾಡಿದ ವೈದ್ಯಕೀಯ ಕ್ಷೇತ್ರದಲ್ಲಿ ಕಳೆದ ವರ್ಷ ಬಿಸಿ ರಾಯ್ ರಾಷ್ಟ್ರಪತಿ ಈ ವರ್ಷ ರಾಜ್ಯ ವೈದ್ಯಶ್ರೀ ಪ್ರಶಸ್ತಿ ಪಡೆದ ಪರಪ್ಪನವರಿಗೆ ಶಿವಮೊಗ್ಗ ಜಿಲ್ಲಾ ಉಪ್ಪಾರ ಸಮಾಜ ವತಿಯಿಂದ ವಿಶೇಷ ವೆಂಕಟೇಶ್ವರ ಫೋಟೋಗಳನ್ನು ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ದೇವೇಂದ್ರಪ್ಪನವರು ,ಅಧ್ಯಕ್ಷತೆಯನ್ನ s..ಟಿ.. ಹಾಲಪ್ಪನವರು ವಹಿಸಿದರು.ಎಪಿಎಂಸಿ ಮಾಜಿ ಅಧ್ಯಕ್ಷರಾದ ಕುಂಸಿ ಬಾಬಣ್ಣನವರು. ಮಾಜಿ ಮೇಯರ್ ಕಂಕರಿ ನಾಗರಾಜ್ ಬೊಮ್ಮನಕಟ್ಟೆ ಮಂಜುನಾಥ್. ಕುಂಶಿ ಮೋಹನ್ . ಕಾಶಿಪುರ ವಿಜಯಕುಮಾರ್ ಶಿವಮೊಗ್ಗ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷರಾದ ಮಾಲತೇಶ್ ಕಾರ್ಯದರ್ಶಿ ಮಂಜುಳಮ್ಮ ಅಣ್ಣಪ್ಪನವರು ಹಾಗೂ ಇತರ ಸಮಾಜದ ಮುಖಂಡರು ಭಾಗವಹಿಸಿದರು.