ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನೂತನ ಅಧ್ಯಕ್ಷರಾಗಿ ಬಸವರಾಜ್ ಕಾರ್ಯದರ್ಶಿಯಾಗಿ ಜಯಶೀಲ್ ಶೆಟ್ಟಿ ಆಯ್ಕೆಯಾಗಿದ್ದಾರೆ. ನಗರದ ರೋಟರಿ ಭವನದಲ್ಲಿ ಅಧ್ಯಕ್ಷರು ಕಾರ್ಯದರ್ಶಿ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಶುಭಕೋರಿ ಸನ್ಮಾನಿಸಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರೋಟರಿ ಪಬ್ಲಿಕ್ ಇಮೇಜ್ ಕೋ ಆರ್ಡಿನೇಟರ್ ಅಭಿನಂದನ್ ಶೆಟ್ಟಿ ಮತ್ತು ಡಾ ರಾಜ ನಂದಿನಿ ಕಾಗೋಡು ಪಾಲ್ಗೊಂಡಿದ್ದರು.
ಇದೆ ವೇಳೆ ವಲಯ 12ರ ಸಹಾಯಕ ಗವರ್ನರ್ ಎಂಬಿ ಲಕ್ಷಣ ಗೌಡ ಲೆಫ್ಟಿನೆಂಟ್ ಕಿರಣ್ ಕುಮಾರ್ ಅನ್ಸ್ ಕ್ಲಬ್ ಅಧ್ಯಕ್ಷ ರಾಜ್ಯಶ್ರೀ ಬಸವರಾಜ್ ಕಾರ್ಯದರ್ಶಿ ಮಧುರ ಧನಂಜಯ್ ಸೇರಿದಂತೆ ನಿಕಟಪೂರ್ವ ಅಧ್ಯಕ್ಷರಾದ ಕಿರಣ್ ಕುಮಾರ್ ಕಾರ್ಯದರ್ಶಿ ಈಶ್ವರ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿದ್ದು ಕಾರ್ಯಕ್ರಮ ಯಶಸ್ವಿಗೆ ಕಾರಣಿ ಭೂತರಾದರು.